ಪ್ರೊ. ಜಯರಾಮ ಪೂಂಜ ಆಯ್ಕೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜ ೨೦೧೫-೧೬ನೇ ಸಾಲಿಗೆ ದಕ್ಷಿಣಕನ್ನಡ ಪದವಿ ಪೂರ್ವ ಕಾಲೇಜು, ಇತಿಹಾಸ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಕಡಬ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯ ಉಪನ್ಯಾಸಕ ವೆಂಕಟರಮಣ ಭಟ್, ಪ್ರಧಾನ ಕಾರ್ಯದರ್ಶಿ ಮಂಗಳೂರು ಹಂಪನಕಟ್ಟೆ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಾನ್ ಪಾಯಸ್, ಹಾಗೂ ಖಜಾಂಚಿ ಮಂಗಳೂರು ಬೆಸೆಂಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಗಾಯತ್ರಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಂಘದ ಜೊತೆ ಕಾರ್ಯದರ್ಶಿ ಮೆಟಿಲ್ಡಾ ಕ್ರಾಸ್ತ ಉಳ್ಳಾಲ ಮದನಿ ಪ.ಪೂ.ಕಾಲೇಜು, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀನಿವಾಸ ಕೆ.ಟಿ. ಮಂಗಳೂರು ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ರೂಪಾಕ್ಷ ಬೆಸೆಂಟ್ ಪ.ಪೂ.ಕಾಲೇಜು, ಮಂಗಳೂರು. ತಾಲೂಕು ಪ್ರತಿನಿಗಳಾಗಿ ಸದಾಶಿವ ಭಟ್ ಎಂ. ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜು, ರಾಮಕುಂಜ, ಪುತ್ತೂರು, ಪ್ರಮೋದ ಕುಮಾರ್ ಎಸ್.ಡಿ.ಎಂ ಪ.ಪೂ. ಕಾಲೇಜು, ಉಜಿರೆ, ಸಚೀತ್ ಸುವರ್ಣ, ಸರಕಾರಿ ಪ.ಪೂ.ಕಾಲೇಜು ಸಜಿಪ ಬಂಟ್ವಾಳ, ಪ್ರಸನ್ನ ಎನ್.ಎಚ್ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು, ಸುಳ್ಯ, ಕೇಶವ ಪೂಜಾರಿ, ಸರಕಾರಿ ಪ.ಪೂ. ಕಾಲೇಜು ಗುರುಪುರ, ಮಂಗಳೂರು, ಕೃಷ್ಣಯ್ಯ, ಬಲ್ಮಠ ಸರಕಾರಿ ಮಹಿಳಾ ಪ.ಪೂ. ಕಾಲೇಜು, ಮಂಗಳೂರು. ಪ್ರಭಾತ್ ಕುಮಾರ್ ಜೈನ್ ಪದವಿ ಪೂರ್ವ ಕಾಲೇಜು ಮೂಡಬಿದಿರೆ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಹಂಝು, ಬದ್ರಿಯ ಪದವಿಪೂರ್ವ ಕಾಲೇಜು, ಕಂದಕ, ಮಂಗಳೂರು. ಕೃಪಾಲಿನಿ ಸರಕಾರಿ ಪ.ಪೂ. ಕಾಲೇಜು, ಕೃಷ್ಣಾಪುರ ಆಯ್ಕೆಯಾಗಿದ್ದಾರೆ.

Kinnigoli-11081506

Comments

comments

Comments are closed.

Read previous post:
Kinnigoli-11081505
ಬ್ರಾಹಣತ್ವ ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ: ಜಪ, ತಪ, ಪೂಜೆ ಪುನಸ್ಕಾರ, ಆಚಾರ ಹಾಗೂ ವ್ರತ ಅನುಷ್ಟಾನಗಳಿಂದ ಬ್ರಾಹ್ಮಣತ್ವವನ್ನು ಉಳಿಸುವ ಜವಾಬ್ದಾರಿ, ಮಕ್ಕಳಿಗೆ ತಿಳಿ ಹೇಳುವ ಅನಿವಾರ್ಯತೆ ನಮ್ಮ ಮುಂದಿದೆ ಎಂದು ವಿದ್ವಾಂಸ ವಾದಿರಾಜ...

Close