ಜ್ಞಾನ ಯಕ್ಷಗಾನ ತಾಳಮದ್ದಲೆಗಳಿಂದ ಸಾಧ್ಯ

ಕಿನ್ನಿಗೋಳಿ: ಭಾಷಾ ಪಾಂಡಿತ್ಯ, ಅಗಾಧ ಜ್ಞಾನ, ಪ್ರಾತ್ರದ ಹಿರಿಮೆ ಗರಿಮೆ ವಿಶೇಷತೆಗಳನ್ನು ಪ್ರಚುರ ಪಡಿಸುವ ಯಕ್ಷಗಾನ ತಾಳಮದ್ದಲೆಗಳಂತಹ ಕಲಾ ಪ್ರಕಾರಗಳಿಮದ ಸಾಧ್ಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪೊಳಲಿ ಜಯರಾಮ ಭಟ್ ಹೇಳಿದರು.
ಯಕ್ಷಲಹರಿ ರಜತ ವರ್ಷ ಸಂಭ್ರಮ 2015 ಪ್ರಯುಕ್ತ ಯಕ್ಷಲಹರಿ, ಯುಗಪುರುಷ ಸಂಯೋಜನೆಯಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಬಯಲಾಟ ಅಕಾಡಮಿ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶನಿವಾರ ನಡೆದ ತಾಳಮದ್ದಲೆ ದಶಾಹ ಯತೋಧರ್ಮಃ ತತೋಜಯಃ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ 17 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರಧಾನ ಮಾಡಲಾಯಿತು.
ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ, ನಮ್ಮಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರಾ ಹಾಗೂ ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪೊಳಲಿ ಜಯರಾಮ ಭಟ್ ಅವರನ್ನು ವಿಶೇಷ ಗೌರವಾರ್ಪಣೆ ಮಾಡಲಾಯಿತು. ಭಾಗವತರಾದ ಅಗರಿ ರಘುರಾಮ ರಾವ್ ಸುರತ್ಕಲ್ ಅವರನ್ನು ಕಲಾವಿದರ ನೆಲೆಯಲ್ಲಿ ಸನ್ಮಾನಿಸಲಾಯಿತು. ರಜತೋತ್ಸವ ಪ್ರಶಸ್ತಿಯನ್ನು ತಾಳಿಪಾಡಿಗುತ್ತು ಧನಪಾಲ ಶೆಟ್ಟಿ, ಸಾರಿಕಾ ದಂಪತಿಗಳಿಗೆ ನೀಡಿ ಗೌರವಿಸಲಾಯಿತು.
ಹಲವಾರು ವರ್ಷಗಳಿಂದ ನಿರಂತರ ಯಕ್ಷಲಹರಿಯ ಪ್ರೋತ್ಸಾಹಕರು ಹಾಗೂ ವೀಕ್ಷಕರೂ ಆಗಿರುವ ರಮೇಶ್ ಪೈ ಮತ್ತು ನಿರ್ಮಲಾ ಪೈ ಅವರನ್ನು ಗೌರವಿಸಲಾಯಿತು.
ರಘುನಾಥ್ ಕಾಮತ್ ಕೆಂಚನಕೆರೆ, ಶ್ರೀವತ್ಸ, ಉಮೇಶ್ ನೀಲಾವರ ವಸಂತ ದೇವಾಡಿಗ ಪ್ರಶಸ್ತಿ ಪತ್ರ ವಾಚಿಸಿದರು.
ಕಟೀಲು ದೇವಳ ಅರ್ಚಕ ವೆ.ಮೂ. ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ಧಾರ್ಮಿಕ ಚಿಂತನೆಯ ಯಕ್ಷಗಾನ ತಾಳಮದ್ದಲೆಯಿಂದ ಅಪಾರ ಜ್ಞಾನಶಾಕ್ತಿ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಜಿಲ್ಲೆ ಕ.ಸಾಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್, ವಿಶ್ವ ಬಂಟರ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಯುಗಪುರುಷ ಪ್ರಧಾನ ಸಂಪಾದಕ ಕೆ, ಭುವನಾಭಿರಾಮ ಉಡುಪ, ಕರ್ಣಾಟಕ ಬ್ಯಾಂಕ್ ಅಧಿಕಾರಿ ಶ್ರೀನಿವಾಸ್ ದೇಶಪಾಂಡೆ ಉಪಸ್ಥಿತರಿದ್ದರು.
ಯಕ್ಷಲಹರಿ ಕಾರ್ಯದರ್ಶಿ ಪಿ.ಸತೀಶ್ ರಾವ್ ಸ್ವಾಗತಿಸಿ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ವಂದಿಸಿದರು. ಡಾ. ರಾಧಾಕೃಷ್ಣ ಭಟ್ ಪೆಲ ಮತ್ತು ಜಗದೀಶ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
ತಾಳಮದ್ದಲೆ ದಶಾಹಃದಲ್ಲಿ 280 ಮಂದಿ ಕಲಾವಿದರು ಭಾಗವಹಿಸಿದ್ದರು. ಜಿಲ್ಲೆಯ ಪ್ರಸಿದ್ದ ಯಕ್ಷಗಾನ ಕಲಾವಿದರಿಂದ ಬೆಳಿಗ್ಗೆ ಯಕ್ಷ ಗಾನಸುಧಾ (ಪ್ರಾತ್ಯಕ್ಷಿತೆ) ಮಧ್ಯಾಹ್ನ ಕರ್ಣಾರ್ಜುನ, ಸಂಜೆ ಗದಾಯುದ್ಧ ಯಕ್ಷಗಾನ ತಾಳಮದ್ದಲೆ ನಡೆಯಿತು.

Kinnigoli-11081501

Comments

comments

Comments are closed.

Read previous post:
Kinnigoli-1081506
ಕನ್ನಡತ್ವದ ಯಕ್ಷಗಾನ ತಾಳಮದ್ದಲೆ

ಕಿನ್ನಿಗೋಳಿ: ಸಂಸ್ಕಾರ ಸಂಸ್ಕೃತಿ ಹಾಗೂ ಶುದ್ಧ ಕನ್ನಡತ್ವವನ್ನು ಉಳಿಸಿ ಬೆಳಸುವ ಯಕ್ಷಗಾನ ತಾಳಮದ್ದಲೆಯಂತಹ ಕಲಾ ಪ್ರಕಾರಗಳು ಹಾಗೂ ಸಮಾಜಪಯೋಗಿ ಯೋಜನೆಗಳನ್ನು ಪ್ರೋತ್ಸಾಹಿಸಬೇಕು. ಎಂದು ಡಾ. ಐ.ವಿ. ರಾಘವೇಂದ್ರ ಆಸ್ರಣ್ಣ...

Close