ಕಿರೆಂ ಗಾದ್ಯಾಂತ್ ಏಕ್ ದೀಸ್

ಕಿನ್ನಿಗೋಳಿ: ಊರ ಪರವೂರಿನ ಸಮುದಾಯ ಭಾಂಧವರನ್ನು ಪ್ರೀತಿ, ವಿಶ್ವಾಸ ಸೌಹಾರ್ಧತೆಯ ಬಾಂಧವ್ಯಗಳನ್ನು ಹೆಚ್ಚಿಸಲು ಮತ್ತು ಕೃಷಿ ಜೀವನದ ವಿವಿಧ ಮಜಲುಗಳನ್ನು ಯುವಕರಲ್ಲಿ ತಿಳಿ ಹೇಳಲು ಕೃಷಿಯ ಬಗ್ಗೆ ಆಸಕ್ತಿ ಮೂಡಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೋ ಹೇಳಿದರು.
ಭಾರತೀಯ ಕೆಥೋಲಿಕ್ ಯುವ ಸಂಚಾಲನ್ ಕಿರೆಂ ಘಟಕದ ವತಿಯಿಂದ ದಾಮಸ್‌ಕಟ್ಟೆ ಬಳಿಯ ಕೋಲ್ಬೆಟ್ ಗದ್ದೆಯಲ್ಲಿ ಭಾನುವಾರ ನಡೆದ ಗಾದ್ಯಾಂತ್ ಏಕ್ ದೀಸ್ ಕೆಸರು ಗದ್ದೆ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.

ಕಿನ್ನಿಗೋಳಿ ಪಂಚಾಯಿತಿ ಸದಸ್ಯ ಸಂತಾನ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಕಿರೆಂ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮ್ಯಾಕ್ಸಿ ಪಿಂಟೋ, ಕಾರ್ಯದರ್ಶಿ ಅನಿತಾ ಡಿಸೋಜಾ, ಭಾರತೀಯ ಕೆಥೋಲಿಕ್ ಯುವ ಸಂಚಲನ ಕಿರೆಂ ಘಟಕದ ಅಧ್ಯಕ್ಷ ರಿಕ್ಸನ್ ರೋಡ್ರಿಗಸ್ ಕಾರ್ಯದರ್ಶಿ ಲೆವಿಟಾ ಡಿಸೋಜ ವಿಲ್‌ಫ್ರೆಡ್ ಮೊನಿಸ್ ಉಪಸ್ಥಿತರಿದ್ದರು.

ಕ್ರೈಸ್ತರ ಸಮುದಾಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಗದ್ದೆಯಲ್ಲಿ ಆಟೋಟ ನಡೆಸಿದ ಕೀರ್ತಿ ಕಿರೆಂ ಚರ್ಚ್ ನಡೆದಿದೆ. ಮುಲ್ಕಿ ಹೋಬಳಿಯ ಸುಮಾರು 8 ಚರ್ಚ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ.

Kinnigoli-11081504

Kinnigoli-11081506 Kinnigoli-11081507

Comments

comments

Comments are closed.

Read previous post:
Kinnigoli-11081503
ಕಿನ್ನಿಗೋಳಿ ಕರಾಟೆ ಪಂದ್ಯಾಟ

ಕಿನ್ನಿಗೋಳಿ: ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ಹಾಗೂ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆ ಕಿನ್ನಿಗೋಳಿ ಇವರ ಸಹಯೋಗದಲ್ಲಿ ತಾಲೂಕು ಮಟ್ಟದ 2015-16ರ ಸಾಲಿನ...

Close