ಆಟಿ ಆಚರಣೆಯಲ್ಲಿ ಆರೋಗ್ಯ, ನೆಮ್ಮದಿಯಿದೆ

ಕಿನ್ನಿಗೋಳಿ : ಆಟಿ ಆಚರಣೆಯಲ್ಲಿ ಆರೋಗ್ಯ ಮತ್ತು ನೆಮ್ಮದಿಯ ಹಿನ್ನೆಲೆಯಿದೆ ಇದು ಕೃಷಿ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ತುಳು ಕವಿ, ಸಾಹಿತಿ ಉಗ್ಗಪ್ಪ ಪೂಜಾರಿ ಪುಚ್ಚಮೊಗರು ಹೇಳಿದರು.
ಐಕಳ ಪೊಂಪೈ ಕಾಲೇಜು ಮಾನವಿಕ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ತಾವೇ ರಚಿಸಿದ ಕೆಲವು ಆಯ್ದ ಪಾಡ್ದನಗಳನ್ನು ಹಾಡಿ ಮಾತನಾಡಿದರು.
ಕಾಲೇಜು ಪ್ರಿನ್ಸಿಪಾಲ್ ಡಾ.ಜೆ.ಸಿ ಮಿರಾಂದ ಅಧ್ಯಕ್ಷತೆ ವಹಿಸಿ ಆಟಿ ಕಳಂಜನಿಗೆ ಭತ್ತ ನೀಡುವುದರ ಮೂಲಕ ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ನಮ್ಮನ್ನಗಲಿದ ಖ್ಯಾತ ಗಡಿನಾಡ ಸಾಹಿತಿ ಡಾ| ಕಯ್ಯಾರ ಕಿಞಣ್ಣ ರೈ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಟೀಲು ಪ್ರೌಡಶಾಲಾ ಎನ್ ಸಿ ಸಿ ಅಧಿಕಾರಿ ಸಾಯಿನಾಥ್ ಶೆಟ್ಟಿ, ಐಕಳ ಕಾಲೇಜು ಎನ್ ಸಿ ಸಿ ಅಧಿಕಾರಿ ಪುರುಷೋತ್ತಮ. ಕೆ.ವಿ., ಪ್ರೊ. ಯೋಗೀಂದ್ರ ಬಿ, ಪ್ರೊ. ತೋಮಸ್ ಜಿ.ಎಮ್, ಉಪನ್ಯಾಸಕರಾದ ವಿಶ್ವಿತ್ ಶೆಟ್ಟಿ, ಸವಿತಾ ಕುಮಾರಿ, ಕು. ರಂಜಿತಾ, ಗ್ರಂಥಪಾಲಕ ಮೈಕಲ್ ಪಿಂಟೊ, ಮಾನವಿಕ ಸಂಘದ ಜೊತೆ ಕಾರ್ಯದರ್ಶಿ ಕಾವ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿ ಭರತ್ ರಾಜ್ ವಂದಿಸಿ ಸಂದೇಶ್ ಕಾರ್ಯಕ್ರಮ ನಿರೂಪಿಸಿದರು.

ತುಳು ಒಗಟು ಬಿಡಿಸುವ ಸ್ಪರ್ದೆ ಹಾಗೂ ತುಳು ಶಬ್ದಾರ್ಥ ಹೇಳುವ ಸ್ಪರ್ಧೆಗಳನ್ನು ನಡೆಸಲಾಯಿತು.

Kinnigoli-12081505

Comments

comments

Comments are closed.

Read previous post:
Kinnigoli-12081504
ಪಕ್ಷಿಕೆರೆ ವನಮಹೋತ್ಸವ

ಕಿನ್ನಿಗೋಳಿ: ರೋಟರ‍್ಯಾಕ್ಟ್ ಕ್ಲಬ್ ಕಿನ್ನಿಗೋಳಿ ಐಸಿವೈಮ್ ಪಕ್ಷಿಕೆರೆ ಜಂಟೀ ಆಶ್ರಯದಲ್ಲಿ ಪಕ್ಷಿಕೆರೆ ಸೈಂಟ್ ಜೂಡ್ ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ನಡೆಯಿತು. ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ.ಆಂಡ್ರ್ಯೂ ಲಿಯೋ...

Close