ಬಿಜೆಪಿ ವರ್ಚಸು ಹೆಚ್ಚಾಗುತ್ತಿದೆ

ಕಿನ್ನಿಗೋಳಿ : ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ನಡೆದ 30 ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 21 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬಹುಮತ ಗಳಿಸಿ ಆಡಳಿತ ನಡೆಸುತ್ತಿದೆ. ದಿನದಿಂದ ದಿನಕ್ಕೆ ಬಿಜೆಪಿ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ನಾಯಕ ಉಮಾನಾಥ ಕೋಟ್ಯಾನ್ ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ ಸದಸ್ಯರ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭ ನಾಗೇಶ್ ಅಂಚನ್, ಸುಧಾಕರ ಶೆಟ್ಟಿ, ಸೇಸಪ್ಪ ಸಾಲ್ಯಾನ್, ಪ್ರಮೀಳಾ ಡಿ. ಶೆಟ್ಟಿ, ಮಮತಾ, ಲೋಹಿತ್ ಕುಮಾರ್, ಮಾಲತಿ ಆಚಾರ್ಯ, ತುಳಸಿ ಶೆಟ್ಟಿಗಾರ್, ಜಯಲಕ್ಷ್ಮಿ, ರಾಕೇಶ್ ಶೆಟ್ಟಿ ಪಂಜ, ಗುಲಾಬಿ, ಚಂದ್ರಹಾಸ, ಗೀತಾ, ಸ್ನೇಹಿತ ಪಿ ಶೆಟ್ಟಿಗಾರ್, ಹರಿಪ್ರಸಾದ್ ಅವರನ್ನು ಗೌರವಿಸಲಾಯಿತು. ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ತಾ. ಪಂ. ಸದಸ್ಯೆರಾದ ಬೇಬಿ ಸುಂದರ ಕೋಟ್ಯಾನ್, ಸಾವಿತ್ರಿ ಸುವರ್ಣ, ಬಿಜೆಪಿ ನಾಯಕರಾದ ಡಿ. ಕೆ. ಶೆಟ್ಟಿ, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಜನಾರ್ಧನ ಕಿಲೆಂಜೂರು, ಜಯರಾಮ ಆಚಾರ್ಯ, ಸಚಿನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರಾಮದಾಸ ಶೆಟ್ಟಿ ಸ್ವಾಗತಿಸಿದರು. ವಿನೋದ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.

Kinnigoli-12081512

Comments

comments

Comments are closed.

Read previous post:
Kinnigoli-12081511
ಭಾಗ್ಯ ಜ್ಯೋತಿ ಸ್ತ್ರೀಶಕ್ತಿ ಸಂಘ : 15 ನೇ ವಾರ್ಷಿಕೊತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೆರೆಕಾಡು ಭಾಗ್ಯ ಜ್ಯೋತಿ ಸ್ತ್ರೀಶಕ್ತಿ ಸಂಘದ 15ನೇ ವರ್ಷದ ವಾರ್ಷಿಕೊತ್ಸವ ಭಾನುವಾರ ಕೆರೆಕಾಡುವಿನಲ್ಲಿ ನಡೆಯಿತು. ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ...

Close