ಪ್ರಬಂಧ, ಭಾಷಣ ಸ್ಪರ್ಧೆ ಪ್ರಶಸ್ತಿ ವಿತರಣೆ

ಮೂಲ್ಕಿ: ಮೂಲ್ಕಿಯ ಕಾರ್ನಾಡ್ ಯಂಗ್‌ಸ್ಟಾರ‍್ಸ್ ಅಸೋಸಿಯೇಶನ್ ವತಿಯಿಂದ ಅಸೋಸಿಯೇಶನ್ ನಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು.
ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ವಿಷ್ಣುಮೂರ್ತಿ ಹಾಗೂ ತೋಕೂರು ಎಂ. ಆರ್. ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ವೈ. ಎನ್. ಸಾಲ್ಯಾನ್ ರವರು ವಿಜೇತರಿಗೆ ಬಹುಮಾನಗಳನ್ನು ನೀಡಿದರು.
ಸಂಘದ ಅಧ್ಯಕ್ಷರಾದ ಜಗದೀಶ್ ಶೆಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಕೃಷ್ಣ ದೇವಾಡಿಗ ವಂದಿಸಿದರು. ಪ್ರೊ| ವಿನೋಬ್‌ನಾಥ್ ಐಕಳ್ ಕಾರ್ಯಕ್ರಮ ನಿರೂಪಿಸಿದರು. ಮುಲ್ಕಿಯ ಸುತ್ತಮುತ್ತಲಿನ ಎಲ್ಲಾ ಹೈಸ್ಕೂಲುಗಳಿಂದ ಅಧಿಕ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Prakash Suvarna

Mulki12081509

Comments

comments

Comments are closed.

Read previous post:
Mulki12081508
ಮೂಲ್ಕಿ ದೇವಾಡಿಗ ಸಂಘದಲ್ಲಿ ಆಟಿದ ಗೌಜಿ

ಮೂಲ್ಕಿ: ಮಹಿಳೆಯರು ಸಂಘಟಿತರಾಗಿ ಸಮಾಜದ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಒಲವು ಗಳಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯಾಚರಿಸಿದಲ್ಲಿ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ ಎಂದು ನಿವೃತ್ತ ಬ್ಯಾಂಕ್...

Close