ಮೂಲ್ಕಿ ದೇವಾಡಿಗ ಸಂಘದಲ್ಲಿ ಆಟಿದ ಗೌಜಿ

ಮೂಲ್ಕಿ: ಮಹಿಳೆಯರು ಸಂಘಟಿತರಾಗಿ ಸಮಾಜದ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಒಲವು ಗಳಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯಾಚರಿಸಿದಲ್ಲಿ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿ ಸೀಮಾ ಶೇಖರ್ ಕಾರ್ಕಳ ಹೇಳಿದರು. ಮೂಲ್ಕಿ ದೇವಾಡಿಗ ಸಮಾಜ ಸೇವಾ ಸಂಘದ ಮಹಿಳಾ ಸಂಘಟನೆ ಮತ್ತು ಯುವಜನಾ ಸಂಘಟನೆ ಆಶ್ರಯದಲ್ಲಿ ಭಾನುವಾರ ಮೂಲ್ಕಿ ದೇವಾಡಿಗ ಸಂಘದಲ್ಲಿ ನಡೆದ ಆಟಿದ ಗೌಜಿ ಕಾರ್ಯಕ್ರಮವನ್ನು ವಿಶೇಷವಾಗಿ ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪ್ರದೇಶದ ಸಂಸ್ಕೃತಿ ಆಚಾರ ವಿಚಾರಗಳು ಅವುಗಳ ವೈಜ್ಞಾನಿಕ ಉಪಯೋಗಗಳ ಬಗ್ಗೆ ಮಹಿಳೆಯರು ಅರಿತುಕೊಂಡು ತಮ್ಮ ಕುಟುಂಬ ಸದಸ್ಯರೊಂದಿಗೆ ಪಾಲಿಸುವ ಮೂಲಕ ಸಂಸ್ಕೃತಿಯ ಅಭಿವೃದ್ಧಿಗೆ ಶ್ರಮಿಸಬೇಕು ಮಾದಕ ವ್ಯಸನಗಳಿಗೆ ಕಾರಣವಾಗುವ ಗೊಡ್ಡು ಕಂದಾಚಾರಗಳನ್ನು ನಿರ್ದಾಕ್ಷಿಣ್ಯವಾಗಿ ನಿಶೇಧಿಸಿ ಸ್ವಸ್ಥ ಹಾಗೂ ಸಂಸ್ಕಾರ ಪೂರ್ಣ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಬುನಾದಿಯಾಗಬೇಕು ಎಂದರು.
ಸನ್ಮಾನ: ಹಳೆಯಂಗಡಿ ಗ್ರಾ.ಪಂ ಸದಸ್ಯ ಜೀವನ್ ಪ್ರಕಾಶ್ ಮತ್ತು ಕಿನ್ನಿಗೋಳಿ ಗ್ರಾ.ಪಂ ಸದಸ್ಯ ರವೀಂದ್ರ ದೇವಾಡಿಗ ಪುನರೂರು ರವರನ್ನು ಸಂಘಟನೆಯ ವತಿಯಿಂದ ಗೌರವಿಸಲಾಯಿತು.
ಮಂಚಕಲ್ ಡಾ. ಗೀತಾ ಪ್ರಕಾಶ್ ಮುಖ್ಯ ಅತಿಥಿಯಾಗಿ ಮಾತನಾಡಿ ಆಟಿ ನಂದರ್ಭ ಸಂಪ್ರದಾಯಿಕ ತಿನಿಸುಗಳು ವೈದ್ಯಕೀಯ ಗುಂಗಳನ್ನು ಹೊಂದಿದ್ದು ಸಮಾರಂಭಗಳಲ್ಲಿ ಒಂದೇ ದಿನ 30 ತಿನಸುಗಳ ತಿನ್ನುವುದರ ಬದಲುತಿನಿಸುಗಳ ತಯಾರಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರತಿ ದಿನ ಒಂದೊಂದು ಆಟಿ ವಿಶೇಷ ತಿನಸು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದರು.
ಮೂಲ್ಕಿ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಸಂಜೀವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷರುಗಳಾದ ದೊಡ್ಡಣ್ಣ ಮೊಲಿ ಬಪ್ಪನಾಡು ಮತ್ತು ಮುದ್ದಣ ದೇವಾಡಿಗ ಚಿತ್ರಾಪು, ಕಾರ್ಯಾಧ್ಯಕ್ಷ ಆನಂದ ಮೊಲಿ ಒಡೆಯರಬೆಟ್ಟು, ಖಜಾಂಚಿ ದಿನೇಶ್ ದೇವಾಡಿಗ ಬಪ್ಪನಾಡು, ಯುವ ಸಂಘಟನೆ ಅಧ್ಯಕ್ಷ ಜಯಾನಂದ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು.
ಪ್ರ.ಕಾರ್ಯದರ್ಶಿ ಬಿ.ಬಾಲಕೃಷ್ಣ ದೇವಾಡಿಗ ಕಾರ್ನಾಡು ಸ್ವಾಗತಿಸಿದರು. ಯುವ ಸಂಘಟನೆ ಕಾರ್ಯದರ್ಶಿ ಗಿರೀಶ್ ಚಿತ್ರಾಪು ಮತ್ತು ಶುಭವತಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಸಂಘಟನೆ ಅಧ್ಯಕ್ಷೆ ನಾಗರತ್ನ ಬಿ.ದೇವಾಡಿಗ ಕಾರ್ನಾಡು ಪ್ರಾಸ್ತಾವಿಸಿದರು. ಯುವ ಸಂಘಟನೆ ಅಧ್ಯಕ್ಷ ಜಯಾನಂದ ದೇವಾಡಿಗ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 26 ಬಗೆಯ ಆಟಿ ತಿನಸುಗಳು ಆಟಿ ತಮ್ಮನ ನಡೆಯಿತು. ಬಳಿಕ ಸಂಘದ ಸದಸ್ಯರಿಂದ ಆಟಿದ ನಲಿಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Bhagyavan Sanil

Mulki12081508

Comments

comments

Comments are closed.

Read previous post:
HaleThogate
ಆಗಸ್ಟ್ 14 ಹಾಲೆ ಮರದ ಕಷಾಯ ವಿತರಣೆ

ಕಿನ್ನಿಗೋಳಿ : ಆಟಿ ಅಮಾವಾಸ್ಯೆ ದಿನ ಆಗಸ್ಟ್ 14ರಂದು ರೋಗ ನಿರೋಧ ಶಕ್ತಿ ಇರುವ ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯವನ್ನು ಕಿನ್ನಿಗೋಳಿ ಸಜ್ಜನ ಬಂಧುಗಳ ವತಿಯಿಂದ ಕಿನ್ನಿಗೋಳಿ...

Close