ವಿದ್ಯಾರ್ಥಿಗಳಿಗೆ ಶಿಕ್ಷಣ, ನಾಯಕತ್ವ ತರಬೇತಿ

ಮೂಲ್ಕಿ: ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ತರಬೇತಿಯೊಂದಿಗೆ ಅವರ ಆಸಕ್ತಿಗನುಗುಣವಾಗಿ ವೃತ್ತಿ ಮಾರ್ಗದರ್ಶನ ನೀಡುವ ಮೂಲಕ ದೇಶದ ಭವಿಷ್ಯತ್ತಿನ ಮಾನವ ಸಂನ್ಮೂಲ ಅಭಿವೃದ್ಧಿಗೆ ಕಾರ್ಯತತ್ಪರರಾಗಬೇಕು ಎಂದು ಸುರತ್ಕಲ್ ಗೋವಿಂದ ದಾಸ ಕಾಲೇಜು ಇಕೋನೋಮಿಕ್ಸ್ ವಿಭಾಗ ಮುಖ್ಯಸ್ಥ ಡಾ.ಶಿವಶಂಕರ್ ಭಟ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಮುಂಬೈ ಎಂ.ಆರ್.ಫೈ ಫೌಂಡೇಶನ್ ಮತ್ತು ಫೋರಂ ಫ್ರೀ ಎಂಟರ್‌ಪ್ರೈಸಸ್ ಮುಂಬೈ ಇವರ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ನಾಯಕತ್ವ ತರಬೇತಿ ಶಿಭಿರ 2015-16 ವನ್ನು ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತರಬೇತಿ ಶಿಭಿರದಲ್ಲಿ ಮುಕ್ತ ಭಾಗವಿಸುವಿಕೆಯೊಂದಿಗೆ ತಮ್ಮ ಶೃಜನಾತ್ಮಕ ಚಿಂತನೆಗಳನ್ನು ಪ್ರಕಟಿಸಿ ಪ್ರಭಾವಿ ನಾಯಕತ್ವಗುಣಗಳನ್ನು ಗಳಿಸುವಲ್ಲಿ ತರಬೇತಿ ಶಿಬಿರಗಳು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮುಂಬೈ ಎಂ.ಆರ್.ಫೈ ಫೌಂಡೇಶನ್‌ನ ರಾಜೀವ್ ಲುವ್,ಸಚಿನ್ ಕಾಮತ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್, ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್, ಶಮಿನಾ ಆಳ್ವಾ, ಕಾರ್ಯಕ್ರಮ ಸಂಯೋಜಕ ಪ್ರೊ.ಹೆಚ್.ಜಿ.ನಾಗರಾಜ ನಾಯಕ್, ಉಪನ್ಯಾಸಕಿ ಸ್ವಾತಿ ಶೆಟ್ಟಿ ಉಪಸ್ಥಿತರಿದ್ದರು.
ಪ್ರೊ.ಕೆ.ಆರ್.ಶಂಕರ್ ಸ್ವಾಗತಿಸಿದರು. ರಾಜೀವ್ ಲುವ್ ಪ್ರಸ್ತಾವಿಸಿದರು. ಮುರಳಿ ಪರಿಚಯಿಸಿದರು,ಸ್ವಾತಿ.ಬಿ. ಶೆಟ್ಟಿ ನಿರೂಪಿಸಿದರು. ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ವಂದಿಸಿದರು.

Bhagyavan Sanil

Mulki12081506

Comments

comments

Comments are closed.

Read previous post:
Kinnigoli-12081505
ಆಟಿ ಆಚರಣೆಯಲ್ಲಿ ಆರೋಗ್ಯ, ನೆಮ್ಮದಿಯಿದೆ

ಕಿನ್ನಿಗೋಳಿ : ಆಟಿ ಆಚರಣೆಯಲ್ಲಿ ಆರೋಗ್ಯ ಮತ್ತು ನೆಮ್ಮದಿಯ ಹಿನ್ನೆಲೆಯಿದೆ ಇದು ಕೃಷಿ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ತುಳು ಕವಿ, ಸಾಹಿತಿ ಉಗ್ಗಪ್ಪ ಪೂಜಾರಿ ಪುಚ್ಚಮೊಗರು ಹೇಳಿದರು....

Close