ಆಟಿ ಕಷಾಯ ವಿತರಣೆ ವಿನೂತನ ಪ್ರಯೋಗ

ಕಿನ್ನಿಗೋಳಿ : ಕಿನ್ನಿಗೊಳಿ ಸಜ್ಜನ ಬಂಧುಗಳು ವತಿಯಿಂದ ಆಟಿ ಅಮಾವ್ಯಾಸೆ ಶುಕ್ರವಾರದಂದು ಉಚಿತವಾಗಿ ಸಾರ್ವಜನಿಕರಿಗೆ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಹಾಲೆ ಮರದ ತೊಗಟೆಯ ಕಷಾಯ ನೀಡುವ ಕಾರ್ಯಕ್ರಮ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ನಡೆಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಔಷಧಿ ಶಾಸ್ತ್ರದಲ್ಲಿ ಬದಲಾವಣೆಯಾದರೂ ಹಾಲೆ ಕಷಾಯ ಬಗ್ಗೆ ಜನರ ನಂಬಿಕೆ ಬದಲಾಗಿಲ್ಲ. ಸಾಮಾಜಿಕವಾಗಿಯೂ ಧಾರ್ಮಿಕವಾಗಿಯೂ ತನ್ನದೇ ಸ್ಥಾನ ಉಳಿಸಿಕೊಂಡಿದೆ ಎಂದು ಹೇಳಿದರು.
ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ಸಜ್ಜನ ಬಂಧುಗಳು ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಸಜ್ಜನ ಬಂಧುಗಳು ಸಂಚಾಲಕ ಜನಾರ್ದನ ಕಿಲೆಂಜೂರು, ಜೊಸ್ಸ್ಸಿ ಪಿಂಟೊ, ಪ್ರಕಾಶ್ ಆಚಾರ್, ದೇವದಾಸ ಮಲ್ಯ, ಮಿಥುನ್ ಕೊಡೆತ್ತೂರು, ದಾಮೋದರ ಶೆಟ್ಟಿ, ನಿಶಾಂತ್ ಕಿಲೆಂಜೂರು, ಹರಿಪ್ರಸಾದ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 500 ಜನರು ಕಷಾಯದ ಪ್ರಯೋಜನ ಪಡೆದುಕೊಂಡರು. ನಿಗದಿತ ಸಮಯದಲ್ಲಿ ಸಾರ್ವಜನಿಕರು ಸ್ವಪ್ರೇರಣೆಯಿಂದ ಕಷಾಯ ಸ್ವೀಕರಿಸಿದರು.
ಹಲವರು ತಮ್ಮ ಮನೆಯವರಿಗೆ ಬಾಟಲುಗಳಲ್ಲಿ ಕಷಾಯ ತುಂಬಿಕೊಂಡು ಹೋಗುತ್ತಿದ್ದರು. ಹಲವಾರು ವರ್ಷಗಳಿಂದ ಈ ರೀತಿಯ ಮದ್ದು ಸಿಗದ ಜನರು ಹಾಗೂ ಚರ್ಚ್‌ಗೆ ಹೋಗುವವರು ಕೂಡಾ ಆಸಕ್ತಿಯಿಂದ ಕಷಾಯ ಸೇವನೆ ಮಾಡಿ ಸಂತೃಪ್ತಿ ಹೊಂದಿದರು.

Kinnigoli-14081501 Kinnigoli-14081502 Kinnigoli-14081503 Kinnigoli-14081504 Kinnigoli-14081505 Kinnigoli-14081506 Kinnigoli-14081507 Kinnigoli-14081508

Comments

comments

Comments are closed.

Read previous post:
Mulki-14081501
ಮೂಲ್ಕಿ ಶೃದ್ದಾಂಜಲಿ ಸಭೆ

ಮೂಲ್ಕಿ: ಆರ್ಥಿಕ ಬಡತನವನ್ನು ಎದುರಿಸಿ ಅಸಾಮಾನ್ಯ ವಿಜ್ಞಾನಿಯಾಗಿ ದೇಶದ ರಾಷ್ಟ್ರಪತಿಯಾಗಿ ವಿಶ್ವ ಗೌರವಿಸುವ ಶ್ರೇಷ್ಠ ವ್ಯಕ್ತಿಯಾಗಿ ಬೆಳಗಿದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರ ಸಮೃದ್ಧ ಭಾರತ...

Close