ಮೂಲ್ಕಿ ಶೃದ್ದಾಂಜಲಿ ಸಭೆ

ಮೂಲ್ಕಿ: ಆರ್ಥಿಕ ಬಡತನವನ್ನು ಎದುರಿಸಿ ಅಸಾಮಾನ್ಯ ವಿಜ್ಞಾನಿಯಾಗಿ ದೇಶದ ರಾಷ್ಟ್ರಪತಿಯಾಗಿ ವಿಶ್ವ ಗೌರವಿಸುವ ಶ್ರೇಷ್ಠ ವ್ಯಕ್ತಿಯಾಗಿ ಬೆಳಗಿದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರ ಸಮೃದ್ಧ ಭಾರತ ನಿರ್ಮಾಣದ ಕನಸು ಕೈಗೂಡಿಸುವ ಮೂಲಕ ಅವರಿಗೆ ಶೃದ್ಧಾಂಜಲಿ ನೀಡಬೇಕಾಗಿದೆ ಎಂದು ತೋಕೂರು ತಪೋವನದ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಕೇಂದ್ರ ಪ್ರಾಂಶುಪಾಲ ವೈ,ಎನ್.ಸಾಲ್ಯಾನ್ ಹೇಳಿದರು.
ಮೂಲ್ಕಿ ರೋಟರಿ ಕ್ಲಬ್ ವತಿಯಿಂದ ನಡೆದ ಶೃದ್ದಾಂಜಲಿ ಸಭೆಯ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ದೇಶದ ರಕ್ಷಖಾ ತಂತ್ರಜ್ಞಾನ ವಿಜ್ಞಾನ ಕಾರ್ಯಗಳಿಂದ ಪ್ರಾರಂಭಿಸಿ, ಕ್ಗೈಗಾರಿಕೆಗಳ ತಂತ್ರಜ್ಞಾನ, ಪರಿಸರ,ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ವಿಜ್ಞಾನಿಯಾಗಿ ತಮ್ಮ ಸೇವೆ ನೀಡಿದ ಉನ್ನತ ವ್ಯಕ್ತಿತ್ವದ ಸರಳ ಜೀವನ ಶೈಲಿಯ ಡಾ. ಕಲಾಂರವರು ಎಲ್ಲರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ರೋಟರಿ ಅಧ್ಯಕ್ಷ ರವಿಚಂದ್ರ ಮೌನ ಪ್ರಾಥನೆಯೊಂದಿಗೆ ಕಲಾಂ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು.
ಪೂರ್ವಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ,ಅಶೋಕ್ ಕುಮಾರ್ ಶೆಟ್ಟಿ, ವಿಲ್‌ಹೆಲ್ಮ್ ಮಾಬೆನ್,ರವೀಂದ್ರ ಭಟ್,ಅಬ್ಬಾಸ್ ಆಲಿ, ರೈಮಂಡ್ ರೆಬೆಲ್ಲೊ ಉಪಸ್ಥಿತರಿದ್ದರು.

Mulki-14081501

Comments

comments

Comments are closed.

Read previous post:
Kinnigoli-12081512
ಬಿಜೆಪಿ ವರ್ಚಸು ಹೆಚ್ಚಾಗುತ್ತಿದೆ

ಕಿನ್ನಿಗೋಳಿ : ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ನಡೆದ 30 ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 21 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬಹುಮತ ಗಳಿಸಿ ಆಡಳಿತ ನಡೆಸುತ್ತಿದೆ. ದಿನದಿಂದ ದಿನಕ್ಕೆ ಬಿಜೆಪಿ ವರ್ಚಸ್ಸು ಹೆಚ್ಚಾಗುತ್ತಿದೆ...

Close