ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಬೇಕು

ಕಿನ್ನಿಗೋಳಿ : ಶಿಸ್ತು ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ತಮ್ಮ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಬೇಕು ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪುನರೂರು ವಿಪ್ರಸಂಪದ ( ಪುನರೂರು, ತೋಕೂರು, ಕೆರೆಕಾಡು ) ವಲಯದ ಆಶ್ರಯದಲ್ಲಿ ಶನಿವಾರ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಆಚಾರ-ವಿಚಾರದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ವಾತಿ ಐ, ಆದಿತ್ಯ ಎಮ್, ಶ್ರೀಲತಾ ತಂತ್ರಿ, ಜಾಹ್ನವಿ, ಹರ್ಷಿತಾ ಪಿ, ಹಾಗೂ ಸಾಧಕರಾದ ವಿಶ್ವನಾಥ ರಾವ್, ಸುಬ್ರಹ್ಮಣ್ಯ ಭಟ್ ತೋಕೂರು ಅವರನ್ನು ಸನ್ಮಾನಿಸಲಾಯಿತು.
ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಟೇಲ್ ವೆಂಕಟೇಶ್ ರಾವ್, ಕೆ. ಭುವನಾಭಿರಾಮ ಉಡುಪ, ಪಟೇಲ್ ವಾಸುದೇವ ರಾವ್, ಸುಬ್ರಹ್ಮಣ್ಯ ಉಡುಪ, ಭಾರತಿ ರಾವ್, ದೇವಪ್ರಸಾದ್ ಪುನರೂರು, ಉಷಾರಾಣಿ, ವಿಶ್ವನಾಥ ಭಟ್, ಪುರುಷೋತ್ತಮ ರಾವ್, ಹರಿದಾಸ ಭಟ್ ತೋಕೂರು, ಕಾಶಿ ವಿಶ್ವನಾಥ ರಾವ್, ಯಶೋದಾ ಪಿ. ರಾವ್, ಜನಕರಾಜ್ ಮತ್ತಿತರರು ಉಪಸ್ಥಿತರಿದ್ದರು. ಸುಧಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-18081501

Comments

comments

Comments are closed.

Read previous post:
Kinnigoli-14081503
ಆಟಿ ಕಷಾಯ ವಿತರಣೆ ವಿನೂತನ ಪ್ರಯೋಗ

ಕಿನ್ನಿಗೋಳಿ : ಕಿನ್ನಿಗೊಳಿ ಸಜ್ಜನ ಬಂಧುಗಳು ವತಿಯಿಂದ ಆಟಿ ಅಮಾವ್ಯಾಸೆ ಶುಕ್ರವಾರದಂದು ಉಚಿತವಾಗಿ ಸಾರ್ವಜನಿಕರಿಗೆ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಹಾಲೆ ಮರದ ತೊಗಟೆಯ ಕಷಾಯ ನೀಡುವ...

Close