ರಕ್ತದಾನ ಹಲವಾರು ಜೀವಗಳಿಗೆ ಆಧಾರ

ಕಿನ್ನಿಗೋಳಿ : ರಕ್ತದಾನ ಹಲವಾರು ಜೀವಗಳಿಗೆ ಆಧಾರ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೇರೊ ಎಂದು ಹೇಳಿದರು.
ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಆಶ್ರಯದಲ್ಲಿ ಸಂಜೀವಿನಿ ಸಂಸ್ಥೆ, ಲಯನ್ಸ್-ಲಯನೆಸ್ ಕ್ಲಬ್, ರೋಟರಿ-ರೋಟರ‍್ಯಾಕ್ಟ್-ಇನ್ನರ್‌ವೀಲ್ ಕ್ಲಬ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಭಾರತೀಯ ಕೆಥೋಲಿಕ್ ಯುವ ಸಂಚಲನ ಕಿನ್ನಿಗೋಳಿ ವಲಯ ಮತ್ತು ಕಿನ್ನಿಗೋಳಿ ಘಟಕ, ಪೊಂಪೈ ಕಾಲೇಜು ಐಕಳ ಜುಮ್ಮಾ ಮಸೀದಿ ಕಿನ್ನಿಗೋಳಿ ಮತ್ತು ಗುತ್ತಕಾಡು, ಶ್ರೀ ವಿಠೋಭ ರಖುಮಾಯಿ ಭಜನಾ ಮಂದಿರ ಬಳ್ಕುಂಜೆ ಹಾಗೂ ಮಂಗಳೂರು ಕೆ. ಎಂ. ಸಿ ಆಸ್ಪತ್ರೆ ರಕ್ತನಿಧಿ ಘಟಕ ಸಹಭಾಗಿತ್ವದಲ್ಲಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಭಾಭವನದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಕನ್ಸೆಟ್ಟಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಜೀವಿತಾ ಅಧ್ಯಕ್ಷತೆ ವಹಿಸಿದ್ದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ವಿತಾಲಿಸ್, ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಜಾಕ್ಸನ್ ಸಲ್ದಾನಾ, ರೋಟರಿ ಮಾಜಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಇನ್ನರ್‌ವೀಲ್ ಕಾರ್ಯದರ್ಶಿ ವಿಮಲ ಆಚಾರ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಪ್ರೇಮಲತಾ ಎಸ್. ಶೆಟ್ಟಿ, ಕೆ. ಎಂ. ಸಿ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ. ಸುಜಿತ್ ಚಕ್ರವರ್ತಿ, ಐ. ಸಿ. ವೈ. ಎಮ್ ಕಿನ್ನಿಗೋಳಿ ಘಟಕ ಅಧ್ಯಕ್ಷೆ ಮೆಲಿಶಾ ರೊಡ್ರಿಗಸ್, ಐ. ಸಿ. ವೈ. ಎಮ್ ಕಿನ್ನಿಗೋಳಿ ವಲಯ ಅಧ್ಯಕ್ಷ ಮರ್ವಿನ್ ಫೆರ್ನಾಂಡೀಸ್, ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರದ ದಿನಕರ ಶೆಟ್ಟಿ ಬಳ್ಕುಂಜೆ, ಸಂಜೀವಿನಿ ಸಂಸ್ಥೆ ಸಂಚಾಲಕಿ ಭಗಿನಿ ಹೋಪ್ ಮತ್ತಿತರರು ಉಪಸ್ಥಿತರಿದ್ದರು.
ವಲೇರಿಯನ್ ಸಿಕ್ವೇರಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭಗಿನಿ ಡಾ. ಸೋಫಿಯಾ ವಂದಿಸಿದರು.

Kinnigoli-18081502

Comments

comments

Comments are closed.

Read previous post:
Kinnigoli-18081505
ಪಕ್ಷಿಕೆರೆ ರಿಕ್ಷಾ ಪಾರ್ಕ್ ಮೇಲ್ಛಾವಣಿ ಉದ್ಘಾಟನೆ

ಕಿನ್ನಿಗೋಳಿ : ಪಕ್ಷಿಕೆರೆ ರಿಕ್ಷಾ ಪಾರ್ಕಿನಲ್ಲಿ ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ಪಾರ್ಕ್ ಮೇಲ್ಛಾವಣಿಯನ್ನು ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ ಉದ್ಘಾಟಿಸಿದರು. ಈ ಸಂದರ್ಭ ಸುರಗಿರಿ...

Close