ಒಲವು ಒಗ್ಗಟ್ಟು -ಸಂಘಟನಾತ್ಮಾಕ ಶಕ್ತಿ

ಕಿನ್ನಿಗೋಳಿ : ತಮ್ಮೊಳಗೆ ಕೀಳರಿಮೆ ಸಲ್ಲದು, ಸಂಘಟನೆಯ ಬಗ್ಗೆ ಒಲವು ಒಗ್ಗಟ್ಟು ಮೂಡಿದಾಗ ಸಂಘಟನಾತ್ಮಾಕ ಶಕ್ತಿ ಚಾತುರ್ಯ ಬೆಳೆಯುತ್ತದೆ ಎಂದು ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ರಾಜ್ಯ ಸಮಿತಿ ಅಧ್ಯಕ್ಷ ವಸಂತ್ ಬಿ ಹೇಳಿದರು
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಶಿಯೇಶನ್ ಕಿನ್ನಿಗೋಳಿ ವಲಯದ ಹದಿನೈದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ವಲಯ ಸಮಿತಿ ಅಧ್ಯಕ್ಷ ಚಂದ್ರಹಾಸ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು ಈ ಸಂದರ್ಭ ಹಿರಿಯ ವೃತ್ತಿ ಭಾಂಧವರಾದ ಶಾರದ ಎಸ್. ಕೊಟ್ಯಾನ್, ರಮೇಶ್ ಜಿ ಬಂಗೇರ, ಶಂಕರ್ ಬಿ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ೨೪ ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭ ಯುಗಪುರುಷ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ, ಜಿಲ್ಲಾ ಸಮಿತಿ ಅಧ್ಯಕ್ಷ ಉದಯಕುಮಾರ್ ಕೋಡಿಕಲ್, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್ ಮಲ್ಲಿಕಾರ್ಜುನ, ಮುಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿ ಅಧ್ಯಕ್ಷ ಬಾಸ್ಕರ ಶೆಟ್ಟಿಗಾರ್, ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ವಿಲಿಯಂ ಮಚಾದೋ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ವಲಯ ಸಮಿತಿ ಕಾರ್ಯದರ್ಶಿ ರಾಜಾರಾಮ್ ಸ್ವಾಗತಿಸಿದರು, ಸಾರಿಕಾ ಕೋಟ್ಯಾನ್ ವಾರ್ಷಿಕ ವರದಿ ವಾಚಿಸಿದರು. ವಿಶ್ವನಾಥ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು

Kinnigoli-18081513

Comments

comments

Comments are closed.

Read previous post:
Kinnigoli-18081506
ಕಿನ್ನಿಗೋಳಿ ರೋಟರಿ ಆಟಿ ಆಟರಣೆ

ಕಿನ್ನಿಗೋಳಿ : ಸಮಾಜ ಸಂಸ್ಕೃತಿ, ಆಚರಣೆಗಳಿಂದ ನಾವು ದೂರವಾಗಬಾರದು ಹಳ್ಳಿಗಳಲ್ಲಿರುವ ಗಿಡಮೂಲಿಕೆ ಔಷಧಿಗಳು ವೈಜ್ಞಾನಿಕವಾಗಿ ವೈದ್ಯಕೀಯ ಮಹತ್ವವುಳ್ಳವುದೆಂದು ಜಾಗತಿಕವಾಗಿ ಸಾಬೀತಾಗಿದೆ. ಮೂಡನಂಬಿಕೆ ಸಲ್ಲದು ಮೂಲನಂಬಿಕೆ ಇರಬೇಕು ಎಂದು ಆಯುರ್ವೇದ...

Close