ಐಕಳ ಗ್ರಾಮ ಸಭೆ

ಕಿನ್ನಿಗೋಳಿ : ಹಲವಾರು ವರ್ಷಗಳಿಂದ ದಾಮಸಕಟ್ಟೆ- ಸುಂಕದಕಟ್ಟೆ ರಸ್ತೆ ಹಾಗೂ ಪಟ್ಟೆ- ಶುಂಠಿಪಾಡಿ ರಸ್ತೆ ತೀವ್ರ ಹದೆಗೆಟ್ಟಿದೆ ಡಾಮಾರೀಕರಣ ಹೆಚ್ಚಿನ ಕಡೆಗಳಲ್ಲಿ ಕಿತ್ತು ಹೋಗಿದೆ ತ್ವರಿತವಾಗಿ ರಸ್ತೆ ಕಾಮಗಾರಿ ಕಾರ್ಯ ಕೈಗೊತ್ತಿಕೊಳ್ಳಬೇಕು ಎಂದು ಐಕಳ ಗ್ರಾಮಸ್ಥರು ಐಕಳ ಗ್ರಾಮ ಸಭೆಯಲ್ಲಿ ಬಿನ್ನವಿಸಿಕೊಂಡರು.
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಅಧ್ಯಕ್ಷತೆಯಲ್ಲಿ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಐಕಳ ಏಳಿಂಜೆ ಮತ್ತು ಉಳೆಪಾಡಿ ಗ್ರಾಮಗಳ 2015-16 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಗುರುವಾರ ಐಕಳ ಗ್ರಾಮ ಪಂಚಾಯಿತಿಯ ರಾಜೀವಗಾಂದಿ ಸೇವಾ ಕೇಂದ್ರದಲ್ಲಿ ನಡೆಯಿತು.
ದಾಮಸ್‌ಕಟ್ಟೆ-ಸುಂಕದಕಟ್ಟೆ ರಸ್ತೆ ಕಾಮಾಗಾರಿ ಯಾಕಾಗಿಲ್ಲ ಎಂಬ ದುರ್ಗಾಪ್ರಸಾದ್ ಹೆಗ್ಡೆ ಅವರ ಪ್ರಶ್ನೆಗೆ ಉತ್ತರಿಸಿದ ಮಾಜೀ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಜನವರಿಯಲ್ಲಿಯೇ ಗುತ್ತಿಗೆದಾರರು ರಸ್ತೆ ಕಾಮಾಗಾರಿಗೆ ಬಂದಿದ್ದರು ಆದರೆ ಕೆಲವು ಕಡೆ ರಸ್ತೆಗೆ ಮರಳಿನ ಅಗತ್ಯತೆ ಇದ್ದರಿಂದ ಸಮೀಪದ ಶಾಂಭವಿ ನದಿಯ ಮರಳು ತೆಗೆಯಲು ಸ್ಥಳೀಯರ ವಿರೋಸಿದ್ದರಿಂದ ಕಾಮಾಗಾರಿ ನಡೆಸಿಲ್ಲ ಎಂಬ ಕ್ಷುಲ್ಲಕ ಉತ್ತರದಿಂದ ಕ್ರೋಧಗೊಂಡ ಗಾಮಸ್ಥರು ಗುತ್ತಿಗೆದಾರರು ಗುತ್ತಿಗೆ ಪಡೆದ ಮೇಲೆ ಅದನ್ನು ಸಂಪೂರ್ಣಗೊಳಿಬೇಕಾಗಿತ್ತು ಅದಕ್ಕಾಗಿ ಮರಳಿನ ನೆಪ ಹೇಳುವುದು ಸರಿಯಲ್ಲ ಬಿಟ್ಟಿಯಾಗಿ ಮರಳು ತೆಗೆಯುವುದು, ಜಿಲ್ಲಾಡಳಿತದಿಂದ ಅನುಮತಿ ಪಡೆಯದೆ ಅಲ್ಲದೆ ಪಂಚಾಯಿತಿಗೆ ಯಾವುದೇ ಕರ ನೀಡದೆ ಮರಳು ತೆಗೆಯುವುದು ಯಾವ ನ್ಯಾಯ. ಗುತ್ತಿಗೆದಾರರಿಗೆ ಸರಕಾರದಿಂದ ಕಾಮಾಗಾರಿಯ ಹಣ ಸಿಗುತ್ತದೆಯಲ್ಲವೆ ಎಂದು ಮಾಜಿ ಅಧ್ಯಕ್ಷರನ್ನು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡರು.
ದಾಮಸ್‌ಕಟ್ಟೆ-ಸುಂಕದಕಟ್ಟೆ ಹೋಗುವ ರಸ್ತೆ ಸಂಪೂರ್ಣ ಹದ ಗೆಟ್ಟಿದ್ದು ದೊಡ್ದ ದೊಡ್ದ ಕೆಂಪು ಕಲ್ಲನು ಹಾಕಿದ್ದು ಇಲ್ಲಿ ನಡೆದಾಡಲು ಕಷ್ಟ ಸಾಧ್ಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ನಿವೇಶನ ರಹಿತರಿಗೆ ಕೊಮಂಡೇಲುನ ಗೋಮಾಳ ಜಮೀನು ಮತ್ತು ಕಂಗುರಿಯಲ್ಲಿ ಸರಕಾರಿ ಜಾಗದಲ್ಲಿ ವಸತಿಗಾಗಿ ಜಾಗ ನೀಡಬೇಕು ಎಂದು ಗ್ರಾಮಸ್ಥರ ಅಹವಾಲಿಗೆ ಗ್ರಾಮಕರಣಿಕ ಮಂಜುನಾಥ ಗೋಮಾಳ ಜಾಗವನ್ನು ಗೋಶಾಲೆ ಹೊರತು ಪಡಿಸಿ ಬೇರೆ ಯಾರಿಗೂ ನೀಡುವಂತಿಲ್ಲ ಎಂದರು.
ಜನ ನಿಬಿಡವಾಗಿರುವ ಪಟ್ಟೆ ಕ್ರಾಸ್ ಮೂರುಕಾವೇರಿ ಜಂಕ್ಷನ್‌ಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಉಳೆಪಾಡಿ ಪದವುನಲ್ಲಿ ದಾರಿದೀಪದ ವ್ಯವಸ್ಥೆ, ಮುಲ್ಕಿಯ ರೈತ ಸಂಪರ್ಕ ಕೇಂದ್ರ ಎಲ್ಲಾಗ್ರಾಮಗಳಿಗೆ ಅನುಕೂಲವಾಗುವಂತೆ ಕಿನ್ನಿಗೋಳಿಗೆ ಸ್ಥಳಾಂತರ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ನೋಡೆಲ್ ಅಕಾರಿಯಾಗಿ ಗ್ರಾಮ ಉದ್ಯೋಗ ತಾಲೂಕು ಪಂಚಾಯಿತಿ ಮಂಗಳೂರು ಸಹಾಯಕ ನಿರ್ದೇಶಕ ಲೋಕನಾಥ್ ಭಾಗವಹಿಸಿದ್ದರು.
ಐಕಳ ಗ್ರಾ.ಪಂ. ಉಪಾಧ್ಯಕ್ಷೆ ಸುಂದರಿ ಸಾಲಿಯಾನ್, ತಾಲೂಕು ಪಂಚಾಯತ್ ಸದಸ್ಯ ನೆಲ್ಸನ್ ಲೋಬೋ, ಪಿಡಿಒ ನಾಗರತ್ನ ಇಂಜೀನಿಯರ್ ಪ್ರಶಾಂತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು

Kinnigoli-18081509

Comments

comments

Comments are closed.

Read previous post:
Kinnigoli-18081507
ಕಟೀಲು ವಿಜ್ಞಾನ ನಾಟಕ ಸ್ಪರ್ಧೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಮಂಗಳೂರು ಉತ್ತರ ವಲಯದ ಪ್ರೌಢಶಾಲೆಗಳ ವಿಜ್ಞಾನ ನಾಟಕ ಸ್ಪರ್ಧೆ ನಡೆಯಿತು. ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ್ಯಕ್ರಮ...

Close