ಕಟೀಲು ವಿಜ್ಞಾನ ನಾಟಕ ಸ್ಪರ್ಧೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಮಂಗಳೂರು ಉತ್ತರ ವಲಯದ ಪ್ರೌಢಶಾಲೆಗಳ ವಿಜ್ಞಾನ ನಾಟಕ ಸ್ಪರ್ಧೆ ನಡೆಯಿತು.
ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಬಿಒ ರಾಜಲಕ್ಷ್ಮೀ, ಸಿಇಒ ಜಾನೆಟ್ ಲೋಬೋ, ವೈಸ್ ಪ್ರಿನ್ಸಿಪಾಲ್ ಸೋಮಪ್ಪ ಅಲಂಗಾರು, ದೇವಳದ ಮೆನೇಜರ್ ವಿಜಯಕುಮಾರ್, ಸಾಯಿನಾಥ ಶೆಟ್ಟಿ, ಅಲೆಕ್ಸ್, ವಸಂತ ಕೆ. ಮತ್ತಿತರರು ಉಪಸ್ಥಿತರಿದ್ದರು.
ಪ್ರಥಮ ಬಹುಮಾನ ಕಿಲ್ಪಾಡಿ ಮಹರ್ಷಿ ಪ್ರೌಢಶಾಲೆ, ದ್ವಿತೀಯ ಲೇಡಿಹಿಲ್ ಶಾಲೆ, ತೃತೀಯ ಕಟೀಲು ಪ್ರೌಢಶಾಲೆ ಪಡೆಯಿತು.

Kinnigoli-18081507

Comments

comments

Comments are closed.

Read previous post:
Kinnigoli-18081513
ಒಲವು ಒಗ್ಗಟ್ಟು -ಸಂಘಟನಾತ್ಮಾಕ ಶಕ್ತಿ

ಕಿನ್ನಿಗೋಳಿ : ತಮ್ಮೊಳಗೆ ಕೀಳರಿಮೆ ಸಲ್ಲದು, ಸಂಘಟನೆಯ ಬಗ್ಗೆ ಒಲವು ಒಗ್ಗಟ್ಟು ಮೂಡಿದಾಗ ಸಂಘಟನಾತ್ಮಾಕ ಶಕ್ತಿ ಚಾತುರ್ಯ ಬೆಳೆಯುತ್ತದೆ ಎಂದು ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ರಾಜ್ಯ ಸಮಿತಿ...

Close