ಭಾರತಕ್ಕೆ ರಾಜಕೀಯ ಸ್ವಾತಂತ್ಯ ಮಾತ್ರ ದಕ್ಕಿದೆ

ಕಿನ್ನಿಗೋಳಿ: ಭಾರತಕ್ಕೆ ರಾಜಕೀಯ ಸ್ವಾತಂತ್ಯ ಮಾತ್ರ ದಕ್ಕಿದೆ ಇಂದು ಸಮುದಾಯ ಸಮುದಾಯಗಳನ್ನು ಸಂತುಷ್ಟಿಗೊಳಿಸುವ ಭರದಲ್ಲಿ ರಾಜಕೀಯ ಶಕ್ತಿಗಳು ದೇಶವನ್ನು ವಿಭಜಿಸುವ ರೀತಿ ವರ್ತಿಸುತ್ತಿರುವುದು ವಿಪರ‍್ಯಾಸ ಆದ್ದರಿಂದ ನಾವೆಲ್ಲರೂ ಒಗ್ಗೂಡಿ ಜನಜಾಗೃತಿಗಾಗಿ ಅಖಂಡ ಭಾರತದ ನಿರ್ಮಾಣ ಮಾಡಲು ನಾವು ಪಣ ತೊಡಬೇಕು ಎಂದು ರಾ. ಸ್ವ. ಸಂಘದ ಮಂಗಳೂರು ವಿಭಾಗದ ಸುರೇಶ್ ಪರ್ಕಳ ಹೇಳಿದರು.
ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಹಿಂದೂ ಜಾಗರಣ ವೇದಿಕೆಯ ಕಿನ್ನಿಗೋಳಿ ಮಂಡಲದ ಆಶ್ರಯದಲ್ಲಿ ಶುಕ್ರವಾರ ರಾತ್ರಿ ನಡೆದ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ಶಾಂತಿನಗರ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ ಅಧ್ಯಕ್ಷತೆ ವಹಿಸಿ ಮಾತಾಡಿ ಸೌಹಾರ್ಧಯುತ ಜೀವನ, ಧರ್ಮಗಳಲ್ಲಿ ಸಮನ್ವಯತೆಯ ದೃಷ್ಟಿಕೋನ ಮೂಡಿದಾಗ ನಮ್ಮ ದೇಶ ಬಲಿಷ್ಠವಾಗುತ್ತದೆ. ಎಂದರು.
ಹಿಂದು ಜಾಗರಣ ವೇದಿಕೆಯ ಕಿನ್ನಿಗೋಳಿ ಮಂಡಲದ ಅಧ್ಯಕ್ಷ ನವೀನ್ ಪೂಜಾರಿ, ಮೂಲ್ಕಿ ಅಧ್ಯಕ್ಷ ಸನತ್ ಕುಮಾರ್, ಸಂಚಾಲಕ ಸೂರಜ್ ಕೊಂಡೇಲ, ದಿನೇಶ್ ಹರಿಪಾದೆ, ಮತ್ತಿತರರು ಉಪಸ್ಥಿತರಿದ್ದರು.
ಉಮೇಶ್ ಪಂಜ ಪ್ರಸ್ತಾವನೆಗೈದರು. ರಾಮಚಂದ್ರ ಶೆಣೈ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲು ಪಕ್ಷಿಕೆರೆ-ಹೊಸಕಾಡು-ಪದ್ಮನೂರು ಮೂಲಕ ಕಿನ್ನಿಗೋಳಿ ಸುಖಾನಂದ ಶೆಟ್ಟಿ ಸರ್ಕಲ್ ತನಕ ಪಂಜಿನ ಮೆರವಣೆಗೆ ನಡೆಯಿತು.

Kinnigoli-23081501

Comments

comments

Comments are closed.

Read previous post:
Kinnigoli-23081503
ತೋಕೂರು : ನಾಗರಪಂಚಮಿ

ಕಿನ್ನಿಗೋಳಿ : ನಾಗರಪಂಚಮಿ ಪ್ರಯುಕ್ತ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ನಾಗ ಸನ್ನಿಧಿಯಲ್ಲಿ ಹಾಲು ಹಾಗೂ ಸಿಯಾಳಾಭಿಷೇಕ ಬುಧವಾರ ನಡೆಯಿತು.

Close