13 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ

 ಕಿನ್ನಿಗೋಳಿ : ಶಾಲಾ ಹಂತದಲ್ಲಿಯೇ ಮಕ್ಕಳು ನಾಯಕತ್ವ ಮತ್ತು ಸಮಾಜ ಸೇವೆಯ ಗುಣಗಳನ್ನು ಮೈಗೂಡಿಸಿದರೆ ಭವಿಷ್ಯದಲ್ಲಿ ಸತ್ಪ್ರಜೆಯಾಗುತ್ತಾರೆ. ಎಂದು ರೋಟರಿಜಿಲ್ಲೆ 3180 ವಲಯ 3 ರ ಸಹಾಯಕ ಗವರ್ನರ್ ಎನ್. ಸತ್ಯೇಂದ್ರ ಪೈ ಹೇಳಿದರು.
ಶನಿವಾರ ಯುಗಪುರುಷ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ರೋಟರಿ ಸಂಸ್ಥೆ ಪ್ರವರ್ತಿತ 13 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ, ಇಂಟರ‍್ಯಾಕ್ಟ್‌ನ ನೂತನ ಅಧ್ಯಕ್ಷ, ಕಾರ್ಯದರ್ಶಿ, ಶಿಕ್ಷಕ ನಿರ್ದೇಶಕ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಜ್ವಲ್ ಪಿಂಟೊ, ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ರಾಹುಲ್ ಶೆಟ್ಟಿ, ಶಿಮಂತೂರು ಶ್ರೀ ಶಾರದಾ ಪ್ರೌಡ ಶಾಲೆಯ ಶರಣ್ ಕುಮಾರ್, ಬಳ್ಕುಂಜೆ ಸಂತ ಫೌಲರ ಪ್ರೌಢಶಾಲೆಯ ಜೆವಿಶಾ ಡಿಸೋಜ, ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಸುಮಂತ್, ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನ ಚೇತನ್, ನಡುಗೋಡು ಸರಕಾರಿ ಪ್ರೌಢಶಾಲೆಯ ಸಂಧ್ಯಾ, ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯ ದೇವಿ ಪ್ರಸಾದ್, ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯ ಮಫಿದಾ, ಮೆರಿವೆಲ್ ಆಂಗ್ಲ ಮಾಧ್ಯಮ ಶಾಲೆಯ ನಿಶಾಂತ್, ಎಕ್ಕಾರು ಸರಕಾರಿ ಪ್ರೌಢ ಶಾಲೆಯ ಸುಷ್ಮಿತಾ ಎಸ್., ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ಹೂವಕ್ಕ, ಕಟೀಲು ಪ್ರೌಢಶಾಲೆಯ ವಿಶ್ವನಾಥ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ರೋಟರಿ ಜಿಲ್ಲೆ 3180 ರ ಇಂಟರಾಕ್ಟ್ ಜಿಲ್ಲಾ ಉಪಸಭಾಪತಿ ಜಿನರಾಜ್ ಸಿ. ಸಾಲ್ಯಾನ್, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ವಲಯ ಸೇನಾನಿ ರಾಬರ್ಟ್ ಎಫ್. ರೇಗೋ, ಕಿನ್ನಿಗೋಳಿ ನಿಕಟಪೂರ್ವ ಅಧ್ಯಕ್ಷ ವಿಲಿಯಂ ಸಿಕ್ವೇರಾ ಉಪಸ್ಥಿತರಿದ್ದರು.
ಕಿನ್ನಿಗೋಳಿ ಇಂಟರಾಕ್ಟ್ ಸಭಾಪತಿ ಜೊಸ್ಸಿ ಪಿಂಟೊ ಸ್ವಾಗತಿಸಿದರು, ರೋಟರಿ ಜಿಲ್ಲೆ 3180 ಇಂಟರಾಕ್ಟ್ ವಲಯ ಸಂಯೋಜಕ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ಜೆರಾಲ್ಡ್ ಮಿನೇಜಸ್ ವಂದಿಸಿದರು. ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-25081504

Comments

comments

Comments are closed.

Read previous post:
Kinnigoli-25081501
ಪೈಪ್ ಕಾಂಪೋಸ್ಟ್

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಪೈಪ್ ಕಾಂಪೋಸ್ಟ್ ಘಟಕದ ಉಧ್ಘಾಟನೆ ಮಂಗಳವಾರ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು...

Close