ಆ. 28-30 ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ


dksaahithyaಕಿನ್ನಿಗೋಳಿ : 
ಮೂರು ದಿನ ಮೂರು ವೇದಿಕೆ ಹದಿನೇಳು ಗೋಷ್ಟಿ, ಐವತ್ತು ಸಾಧಕರಿಗೆ ಸಂಮಾನ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಸುಪಾಸುಗಳಲ್ಲಿ ಆಗಸ್ಟ್ 28,29,30 ರಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ವೇದಿಕೆಗಳಲ್ಲಿ ವಿಭಿನ್ನವಾಗಿ ನಡೆಯಲಿದೆ.
ರಥಬೀದಿಯಲ್ಲಿರುವ ಸರಸ್ವತೀ ಸದನದಲ್ಲಿ ಮುಖ್ಯ ವೇದಿಕೆಯಿದ್ದರೆ, ಸಮಾನಾಂತರವಾಗಿ ಪದವೀಪೂರ್ವ ಕಾಲೇಜು ಸಭಾಂಗಣದಲ್ಲಿ ಯಕ್ಷೋಪಾಸನ ಶಿಬಿರ ನಡೆಯಲಿದೆ. ನಂದಿನಿ ಹೊಳೆಯ ಮಧ್ಯದಲ್ಲಿರುವ ದೇವಳದ ಆವರಣದಲ್ಲಿ ಮೂರು ದಿನಗಳ ಕಾಲವೂ ಬೆಳಿಗ್ಗೆ 9.30ರಿಂದ ರಾತ್ರಿ 9ರವರೆಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುವುದು ಈ ಬಾರಿಯ ವಿಶೇಷ.
ಡಾ. ಎನ್.ಸುಕುಮಾರ ಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದ ಆಶಯ ’ಶತಮಾನ : ಪ್ರಗತಿಯ ಧಾವಂತದೊಂದಿಗೆ ಪಾರಂಪರಿಕ ಸಂರಕ್ಷಣೆ’ಯಾಗಿದೆ.
ಆ.28ರಂದು ಕನ್ನಡ : ಬಳಕೆಯ ಆಯಾಮಗಳು, ಕಟೀಲು : ಇತಿಹಾಸ ಮತ್ತು ಸಂಸ್ಕೃತಿ, ಕರಾವಳಿಯ ಮಾಧ್ಯಮಗಳು,
ಆ.29ರಂದು ಕರಾವಳಿ ಜೀವನದಲ್ಲಿ ಹಾಸ್ಯ ಸ್ವಾರಸ್ಯ, ಕರಾವಳಿಯ ಮಹಾಕಾವ್ಯಗಳು, ಕರಾವಳಿ ಕಲಾಕ್ಷೇತ್ರ ಹೊಸ ಬೆಳವಣಿಗೆಗಳು, ತುಳುನಾಡಿನ ವಾಸ್ತು- ಸ್ವರೂಪ ಮತ್ತು ವಿನ್ಯಾಸ,
ಆ.30ರಂದು ಕರಾವಳಿ ಕರ್ನಾಟಕ ಇತ್ತೀಚಿನ ಬೆಳವಣಿಗೆಗಳು, ಕರಾವಳಿ ಕರ್ನಾಟಕದ ವರ್ತಮಾನದ ನೋಟ ಗೋಷ್ಟಿಗಳು ನಡೆದರೆ, ಸಮಾನಾಂತರ ವೇದಿಕೆ ಯಕ್ಷಗಾನ ಕಲಾ ಮಂಟಪದಲ್ಲಿ ತಾಳಮದ್ದಲೆ ಮತ್ತು ಯಕ್ಷಗಾನದಲ್ಲಿ ಪೀಠಿಕೆ ವಿನ್ಯಾಸ, ಪ್ರಬೇಧ, ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ಭಾಷೆ, ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ವೈಚಾರಿಕತೆ ಮತ್ತು ವರ್ತಮಾನ, ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ಪಾತ್ರ-ಆಕರ-ಆಕಾರ, ಆಟ ಕೂಟಗಳಲ್ಲಿ ಪ್ರಸಂಗ, ಭಾವೋತ್ಪತ್ತಿ, ರಸಪ್ರತಿಪಾದನೆ ಬಗ್ಗೆ ಗೋಷ್ಟಿಗಳು ನಡೆಯಲಿವೆ.
ಇವಲ್ಲದೆ ಕನ್ನಡ ಹೊರನಾಡ ಸ್ಪಂದನ ಕವಿಗೋಷ್ಟಿ, ವಿದ್ಯಾರ್ಥಿ ಕಥಾ ಗೋಷ್ಟಿ, ಶತಸಂಭ್ರಮ ಕವಿ ಗೋಷ್ಟಿಗಳಿವೆ.
ಜೊತೆಗೆ ಕಯ್ಯಾರ ಸಂಸ್ಮರಣೆ, ಮೂರು ವಿಶೇಷ ಉಪನ್ಯಾಸಗಳಿವೆ. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದವಿದೆ.
ಉದ್ಘಾಟನಾ ದಿನದಂದು ಹನ್ನೊಂದು ಮಂದಿಗೆ ಸನ್ಮಾನ, ಸಮಾರೋಪದಂದು ಸಮ್ಮೇಳನಾಧ್ಯಕ್ಷರು ಸೇರಿದಂತೆ 37ಮಂದಿಗೆ ಹಾಗೂ ಯಕ್ಷಗಾನ ವೇದಿಕೆಯಲ್ಲಿ ಪ್ರತ್ಯೇಕವಾಗಿ ಇಬ್ಬರು ಸಾಧಕರಿಗೆ ಸನ್ಮಾನ ನಡೆಯಲಿದೆ.

Comments

comments

Comments are closed.

Read previous post:
Kinnigoli-25081504
13 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ

 ಕಿನ್ನಿಗೋಳಿ : ಶಾಲಾ ಹಂತದಲ್ಲಿಯೇ ಮಕ್ಕಳು ನಾಯಕತ್ವ ಮತ್ತು ಸಮಾಜ ಸೇವೆಯ ಗುಣಗಳನ್ನು ಮೈಗೂಡಿಸಿದರೆ ಭವಿಷ್ಯದಲ್ಲಿ ಸತ್ಪ್ರಜೆಯಾಗುತ್ತಾರೆ. ಎಂದು ರೋಟರಿಜಿಲ್ಲೆ 3180 ವಲಯ 3 ರ ಸಹಾಯಕ ಗವರ್ನರ್ ಎನ್. ಸತ್ಯೇಂದ್ರ...

Close