ಶ್ರೀನಿವಾಸ ಭಟ್

 ಕಿನ್ನಿಗೋಳಿ : ಕಿನ್ನಿಗೋಳಿ ಯಕ್ಷಲಹರಿಯ ಅಧ್ಯಕ್ಷ ಎಳತ್ತೂರು ಶ್ರೀನಿವಾಸ ಭಟ್ (62ವ.) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಕಳೆದ ವಾರವಷ್ಟೇ ರಜತ ಮಹೋತ್ಸವ ಆಚರಿಸಿದ ಯಕ್ಷಲಹರಿ ಸಂಸ್ಥೆಯ ಅಧ್ಯಕ್ಷರಾಗಿ ತಾಳಮದ್ದಲೆ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟ ಸಂಘಟಕ. ತಾಳಮದ್ದಲೆ ಸಪ್ತಾಹ, ಸ್ಪರ್ಧೆ, ಗಾನವೈಭವ, ಯಕ್ಷಪಕ್ಷ ಗಳಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಅತ್ಯಂತ ಶಿಸ್ತುಬದ್ಧವಾಗಿ ಸಂಯೋಜಿಸಿ, ಕಾಲಮಿತಿ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಿನ ಚೌಕಟ್ಟಿನೊಳಗೆ ನಿರ್ವಹಿಸಿ ಕಿರಿಯ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದ ಹಿರಿಮೆ ಅವರಿಗಿದೆ. ಯಕ್ಷಗಾನ ಕಲಾವಿದರ ಮಕ್ಕಳಿಗಾಗಿ ಶಾಶ್ವತ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೊಳಿಸಿದ್ದರು.
ಹವ್ಯಾಸಿ ಕಲಾವಿದರಾದ ಅವರು ಮುಂಡ್ಕೂರು ಮೇಳದಲ್ಲಿ ಸ್ತ್ರೀವೇಷ , ಪುಂಡುವೇಷ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ವೇಷಧಾರಿಯಾಗಿ ಭಾಗವಹಿಸಿ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದೆ.
ಶ್ರೀನಿವಾಸ ಭಟ್ಟರು ಅತ್ಯುತ್ತಮ ಬಯಲಾಟ ಸಂಯೋಜಕರಾಗಿದ್ದರು. ಮಣಿಪಾಲ ಫೈನಾನ್ಸ್ ಸಂಸ್ಥೆಯಲ್ಲಿ ಅಕಾರಿಯಾಗಿ, ಕಿನ್ನಿಗೋಳಿ ಲಯನ್ಸ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ವಿವಿಧ ಸ್ತರದ ಪದಾಕಾರಿಯಾಗಿ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ವಿಪ್ರ ಸಂಪದ, ಗಣೇಶೋತ್ಸವ ಮುಂತಾದ ಸಂಘಟನೆಗಳಲ್ಲದೆ, ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಭಾಗವತರಾಗಿ, ನಾಟಕ ಕಲಾವಿದರಾಗಿ, ಕೃಷಿಕರಾಗಿ, ಚತುರವಾಗ್ಮಿಯಾಗಿ ಜನಪ್ರಿಯರಾಗಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಶ್ರೀನಿವಾಸ ಭಟ್ಟರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Kinnigoli-26081503

Comments

comments

Comments are closed.

Read previous post:
Kinnigoli-26081502
ಮೆನ್ನಬೆಟ್ಟು : ರೈತರ ಅವಗಣನೆ ಸಲ್ಲದು

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 2015-16ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಗುರುವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ...

Close