ಮೆನ್ನಬೆಟ್ಟು : ರೈತರ ಅವಗಣನೆ ಸಲ್ಲದು

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 2015-16ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಗುರುವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ರೈತರಿಗೆ ಸಬ್ಸಿಡಿ, ಕಡಿಮೆ ಬಡ್ಡಿದರ ಹಾಗೂ ಇನ್ನಿತರ ಹಲವಾರು ಯೋಜನೆಗಳಿವೆ ಎಂಬ ಗ್ರಾಮ ಪಂಚಾಯಿತಿಯ ಸದಸ್ಯ ರೋನಿ ಡಿಸೋಜರ ಉಡಾಫೆ ಹೇಳಿಕೆಗೆ ಅಕ್ರೋಶಗೊಂಡ ಗ್ರಾಮಸ್ಥರ ಪರವಾಗಿ ಕಿನ್ನಿಗೋಳಿ ರೈತ ಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಮಾತನಾಡಿ ಬಿತ್ತಿದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಒಳ್ಳೆ ಬೆಂಬಲ ಬೆಲೆಯನ್ನು ತೆಗೆಸಿಕೊಡಲು ಜನಪ್ರತಿನಿಧಿಗಳು ಯಾಕೆ ಪ್ರಯತ್ನಿಸುತ್ತಿಲ್ಲ? ಕಿನ್ನಿಗೋಳಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಧ್ಯವರ್ತಿಗಳಿಲ್ಲದೆ ರೈತರಿಗೆ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆಯಿದ್ದು ಕೆಲವೇ ತಿಂಗಳಲ್ಲಿ ಕೆಲವರ ಕುಮ್ಮಕ್ಕಿನಿಂದಾಗಿ ರೈತರು ತಮ್ಮ ಮಾರಾಟವನ್ನು ನಿಲ್ಲಿಸಬೇಕಾದ ಪ್ರಸಂಗ ಬಂದೊದಗಿತ್ತು. ಗ್ರಾಹಕರು ನೇರವಾಗಿ ರೈತರಲ್ಲಿ ತರಕಾರಿ ವ್ಯಾಪಾರ ಮಾಡದೆ ಗಾಡಿ ನಿಲ್ಲಿಸುವವರಲ್ಲಿ ವ್ಯಾಪಾರ ಮಾಡುತ್ತಾರೆ. ಮಧ್ಯವರ್ತಿಗಳೇ ಹಣ ಮಾಡುತ್ತಾರೆ ಆಗ ಜನಪ್ರತಿನಿಧಿಗಳಾದ ಪಂಚಾಯಿತಿ ಸದಸ್ಯರು ಮೌನ ವಹಿಸಿದ್ದೀರಿ ಯಾಕೆ? ಇಲಾಖೆಯಲ್ಲಿ ಸಿಗುವಂತಹ ಯೋಜನೆಗಳನ್ನು ನೀವು ಯಾಕೆ ಗ್ರಾಮಸ್ಥರಿಗೆ ರೈತರಿಗೆ ತಿಳಿ ಹೇಳುತ್ತಿಲ್ಲ. ಮಾತಿನಲ್ಲಿ ಹೇಳದೆ ಕಾರ್ಯದಲ್ಲಿ ಮಾಡಿ ತೋರಿಸಿ ರೈತರನ್ನು ಅವಗಣಿಸದೆ ಅವರಿಂದ ಸಹಾನುಭೂತಿ ಗಳಿಸಿಕೊಳ್ಳಿ ಎಂದು ಪಂ. ಸದಸ್ಯ ರೋನಿ ಡಿಸೋಜರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಮ್ಮಡೆಯಲ್ಲಿ ನೀರಿನ ಸಮಸ್ಯೆ ಇದೆ ದಿನ ಬಿಟ್ಟು ದಿನ ನೀರು ಬಿಡುತ್ತಾರೆ ಎಂಬ ಒಬ್ಬ ಗ್ರಾಮಸ್ಥರ ಆರೋಪಕ್ಕೆ ಸಿಡಿದೆದ್ದ ಗ್ರಾಮಸ್ಥೆಯೊಬ್ಬರು ಉತ್ತರಿಸಿ ಮೊದಲು ಗಂಗಾ ಕಲ್ಯಾಣ ಯೋಜನೆಯಲ್ಲಿ ಕ್ಲಪ್ತ ಸಮಯದಲ್ಲಿ ಕೆಮ್ಮಡೆ ಕಾಲನಿಗಳಿಗೆ ಉಚಿತವಾಗಿ ನೀರು ಬರುತ್ತಿತ್ತು ಆದರೆ ಕೆಲವು ವರ್ಷಗಳ ಹಿಂದೆ ಸ್ಥಾಪಿತ ಹಿತಾಸಕ್ತಿಗಳು ನೀರಿನ ಪೂರೈಕೆಯನ್ನು ಕೈಗೊತ್ತಿಕೊಂಡು ನೀರಿನ ಬಿಲ್ಲುಗಳ ಹಣವನ್ನು ಪಂಚಾಯಿತಿಗೆ ಪಾವತಿಸದೆ ದುರುಪಯೋಗ ಪಡಿಸಿ ನೀರಿನ ಸಮರ್ಪಕ ಪೊರೈಕೆ ಮಾಡದಿರುವುದರಿಂದ ನೀರಿನ ತೊಂದರೆ ಬಂದಿದೆ. ಪಂಚಾಯಿತಿ ಆಡಳಿತ ಈ ಬಗ್ಗೆ ಸೂಕ್ತ ಗಮನ ನೀಡಬೇಕಾಗಿದೆ ಎಂದರು.
ನೀರಿನ ಸಮಸ್ಯೆ ಈಗ ಸಾಕಷ್ಟು ನಿವಾರಣೆಯಾಗಿದೆ ಆಯಾಯ ವಾರ್ಡುಗಳಿಗೆ ಗ್ರಾಮಸ್ಥರೇ ಉತ್ತಮ ವಾಟರ್ ಮ್ಯಾನ್ ಸೂಚಿಸಿದರೆ ಅಂತಹವರನ್ನು ನೇಮಿಸಲಾಗುವುದು. ಕೆಮ್ಮಡೆ ವ್ಯಾಪ್ತಿಯಲ್ಲಿ ಅರ್ಹ ಫಲಾನುಬಾವಿಗಳು ನಿವೇಶನ ರಹಿತರಿಗೆ ಕಾನೂನು ಪ್ರಕಾರ ನಿವೇಶನಗಳನ್ನು ಹಂಚಲಾಗುವುದು ಎಂದು ಪಂಚಾಯಿತಿ ಆಡಳಿತ ತಿಳಿಸಿತು.
ಉಲ್ಲಂಜೆಯಲ್ಲಿ ರಸ್ತೆ ಅವ್ಯವಸ್ಥೆ ಮೋರಿ ಬ್ಲಾಕ್ ಸಮಸ್ಯೆ, ಮುರಿಯುವ ಹಂತದಲ್ಲಿರುವ ಕಿರು ಸೇತುವೆ, ದಾರೀ ದೀಪ ಸಮಸ್ಯೆಗಳ ಬಗ್ಗೆ ಪಂಚಾಯಿತಿಯ ಗಮನಕ್ಕೆ ತರಲಾಯಿತು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಜಾನಕಿ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಪಿಡಿಒ ಜಾನಕಿ, ಕಾರ್ಯದರ್ಶಿ ಪ್ರಕಾಶ್ ಬಿ., ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-26081502

Comments

comments

Comments are closed.

Read previous post:
Kinnigoli-26081501
ಫ್ರೀಡಾ ಫ್ಲಾವಿಯಾರಿಗೆ ಸಂಮಾನ

ಕಿನ್ನಿಗೋಳಿ : ಕೊಲ್ಲೂರು ಕುಕ್ಕಟ್ಟೆ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಗ್ರಾಮದ ಪ್ರಥಮ ಡಾಕ್ಟರೇಟ್ ಪದವೀಧರೆ ಫ್ರೀಡಾ ಫ್ಲಾವಿಯಾ ರೊಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು. ಬಳ್ಕುಂಜೆ ಚರ್ಚ್ ಧರ್ಮಗುರು ಮೈಕಲ್...

Close