ಐಕಳ ಶಿಕ್ಷಕರ ಸಹಕಾರಿ ಸಂಘ ವಾರ್ಷಿಕ ಮಹಾಸಭೆ

ಕಿನ್ನಿಗೋಳಿ : ಐಕಳ ಶಿಕ್ಷಕರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರೋಕಿ. ಜಿ. ಲೋಬೊ ಇವರ ಅಧ್ಯಕ್ಷತೆಯಲ್ಲಿ ಪೋಂಪೈ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
2014-15 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಗಳಿಸಿದ ಸ್ಥಳೀಯ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ನಗದು ಬಹುಮಾನ ಹಾಗೂ ಪೊಂಪೈ ಕಾಲೇಜಿನ ನಿವೃತ್ತ ಸಿಬ್ಬಂದಿಗಳಾದ ಸೆಲಿನ್ ಕುಟಿನ್ಹೊ , ಜೆಪ್ರಿ ಅಲ್ಮೇಡಾ, ಲಿಟ್ಲ್ ಪ್ಲವರ್ ಶಾಲೆಯ ಡೆಲ್ಪಿನ್ ಗೋಮ್ಸ್, ಪೊಂಪೈ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ ರಾಮದಾಸ ಶೆಣೈ ಅವರನ್ನು ಸನ್ಮಾನಿಸಲಾಯಿತು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜಾನ್ ಕ್ಲಾರೆನ್ಸ್ ಮಿರಾಂದ, ಆಲ್ವಿನ್ ಮಿರಾಂದ, ಜೇಮ್ಸ್ ಒಲಿವರ್, ಸಂಘದ ಕಾರ್ಯದರ್ಶಿ ರೇಷ್ಮಾ ಸೆರಾವೋ, ಸಹ ಕಾರ್ಯದರ್ಶಿ ಮನಿಷಾ ಅಮೀನ್, ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಕೆ.ವಿ., ಬೊನವೆಂಚರ್ ಹೆರಾಲ್ಡ್ ಡಿಸೋಜ, ಸಿಬಿಲ್ ಡಯಾನಾ ಮಿನೆಜಸ್, ರೀಟಾ ಡಯಾಸ್ ಉಪಸ್ಥಿತರಿದ್ದರು.

KInnigoli-27081501

Comments

comments

Comments are closed.

Read previous post:
Kinnigoli-26081503
ಶ್ರೀನಿವಾಸ ಭಟ್

 ಕಿನ್ನಿಗೋಳಿ : ಕಿನ್ನಿಗೋಳಿ ಯಕ್ಷಲಹರಿಯ ಅಧ್ಯಕ್ಷ ಎಳತ್ತೂರು ಶ್ರೀನಿವಾಸ ಭಟ್ (62ವ.) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕಳೆದ ವಾರವಷ್ಟೇ ರಜತ ಮಹೋತ್ಸವ ಆಚರಿಸಿದ ಯಕ್ಷಲಹರಿ ಸಂಸ್ಥೆಯ ಅಧ್ಯಕ್ಷರಾಗಿ...

Close