ಕಲಾನಿಕೇತನ ಕಲಾಕೇಂದ್ರದ ದಶಮಾನೋತ್ಸವ

ಮೂಲ್ಕಿ: ಕಾರ್ನಾಡು ಕಲಾನಿಕೇತನ ಕಲಾಕೇಂದ್ರದ ದಶಮಾನೋತ್ಸವದ ಪ್ರಯುಕ್ತ  1ನೇ ತರಗತಿಯಿಂದ  10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯ ಪ್ರಾಥಮಿಕ ವಿಭಾಗ ಪ್ರಥಮ ಬಹುಮಾನವನ್ನು ಅಮೋಘ ಆಳ್ವಾಸ್ ಪ್ರೈಮರಿ ಶಾಲೆ ಮೂಡಬಿದಿರೆ, ದ್ವಿತೀಯ ಬಹುಮಾನವನ್ನು ಜ್ಞಾನೇಶ್ ವಿ. ಡಾ| ಎಮ್.ಆರ್.ಎಸ್.ಎಮ್ ಶಾಲೆ ತೋಕೂರು ಹಾಗೂ ತೃತೀಯ ಬಹುಮಾನವನ್ನು ಇಶಿತ್. ವೈ.ಎಸ್. ಶ್ರೀ ಶಾರದಾ ಮೊಡೆಲ್ ಸ್ಕೂಲ್ ಶಿಮಂತೂರು. ಹಿರಿಯ ಪ್ರಾಥಮಿಕ ವಿಭಾಗ ಪ್ರಥಮ ಬಹುಮಾನವನ್ನು ಸಂಜನ ಶ್ರೀ ನಾರಾಯಣ ಗುರು ಶಾಲೆ ಮೂಲ್ಕಿ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪ್ರಜ್ವಾಲಿ.ಜೆ.ಪಿ. ಡಾ| ಎಮ್. ಆರ್.ಎಸ್. ಎಮ್.ಶಾಲೆ ತೋಕೂರು ಮತ್ತು ಸ್ಪರ್ಶ ಪಿ.ಶೆಟ್ಟಿ ಇವರು ಪಡೆದಿರುತ್ತಾರೆ. ಪ್ರೌಢ ವಿಭಾಗ ಪ್ರಥಮ ಬಹುಮಾನವನ್ನು ಪ್ರಥ್ವಿ ಎನ್.ದೇವಾಡಿಗ ಎಂ.ಸಿ.ಟಿ ಪಬ್ಲಿಕ್ ಸ್ಕೂಲ್ ಮೂಲ್ಕಿ ದ್ವಿತೀಯ ಬಹುಮಾನವನ್ನು ರೋಶ್ನಿ ಬೆಥನಿ ಹೈಸ್ಕೂಲ್ ಕಿಲ್ಪಾಡಿ, ತೃತೀಯ ಬಹುಮಾನವನ್ನು ಲಮ್ಯ ಸಿ.ಎಸ್.ಐ ಇಂಗ್ಲೀಷ್ ಮೀಡಿಯಂ ಶಾಲೆ ಇವರು ಪಡೆದಿರುತ್ತಾರೆ. ಕಾರ್ನಾಡಿನ ಸಿ.ಎಸ್.ಐ ಇಂಗ್ಲೀಷ್ ಮಿಡಿಯಂ ಶಾಲೆಯಲ್ಲಿ ಜರಗಿದ ಸ್ಪರ್ಧೆಯನ್ನು ಮಂಗಳೂರಿನ ಚಿತ್ರ ಕಲಾವಿದರಾದ ಜಿ.ಕೆ.ಕಂದನ್ ಇವರು ರೇಖಾಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು ಈ ಸಮಾರಂಭದಲ್ಲಿ ಕಲಾವಿದ ಜೀವನ್ ಸಾಲ್ಯಾನ್ ಹಾಗೂ ಕಲಾನೀಕೇತನದ ನಿರ್ದೆಶಕರಾದ ಎಡ್ವಿನ್ ಡಿ ಸೋಜ ಮತ್ತು ಕಲಾ ಶಿಕ್ಷಕ ತಾರಾನಾಥ ಮೂಳೂರು ಇವರು ಭಾಗವಹಿಸಿದ್ದರು ಈ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು ಈ ಸ್ಪರ್ಧೆಯಲಿ ಮಕ್ಕಳಲ್ಲಿನ ಚಿತ್ರಕಲಾ ಪ್ರತಿಭೆಗೆ ಪ್ರೋತ್ಸಹ ಹಾಗೂ ರಾಷ್ಟ್ರ ಪ್ರೇಮ ಮೂಡಿಸುವುದಕ್ಕಾಗಿ ಈ ಚಿತ್ರಕಲಾ ಸ್ಪರ್ಧೆಯು ಸಾಕ್ಷಿಯಾಯಿತು.

Bhagyavan Sanil

Kinnigoli-27081503

Comments

comments

Comments are closed.

Read previous post:
Kinnigoli-27081502
ವಿಶ್ವ ಮಾನವತೆಯ ಸಂಕೇತವಾದ ರೆಡ್ ಕ್ರಾಸ್

ಮೂಲ್ಕಿ: ವಿಶ್ವ ಮಾನವತೆಯ ಸಂಕೇತವಾದ ರೆಡ್ ಕ್ರಾಸ್ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿಗಳು ಆಪತ್ಕಾಲಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜೊತೆಗೆ ಇತರರನ್ನು ರಕ್ಷಿಸುವ ಸೇವಾ ಕಾರ್ಯ ನಡೆಸಲು...

Close