25ನೇ ಜಿಲ್ಲಾ ಇಂಟರ‍್ಯಾಕ್ಟ್ ಅಧಿವೇಶನ

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಹೆಚ್ಚಿಸಿ ಅವರಲ್ಲಿ ಸೇವಾ ಮನೋಭಾವ ರೂಪಿಸುವುದರ ಜೊತೆಗೆ ಅವರನ್ನು ಸಮಾಜ ಮುಖಿಯಾಗಿ ತರಬೇತಿ ನೀಡಿ ಅವರಲ್ಲಿನ ಆತ್ಮ ಸ್ಥೈರ್ಯ ಹೆಚ್ಚಿಸಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ಬಿಂಬಿಸುವ ಕಾರ್ಯವನ್ನು ಇಂಟರ‍್ಯಾಕ್ಟ್ ಮೂಲಕ ರೋಟರಿ ಸಂಸ್ಥೆಯು ಮಾಡುತ್ತಿದೆ ಎಂದು ರೋಟರಿಯ ಜಿಲ್ಲಾ ಗವರ್ನರ್ ಡಾ ಭರತೇಶ್ ಆದಿರಾಜ್ ಹೇಳಿದರು.
ಮೂಲ್ಕಿಯ ರೋಟರಿ ಕ್ಲಬ್ಬಿನ ಆತಿಥ್ಯದಲ್ಲಿ ಮೂಲ್ಕಿಯ ಬಿಲ್ಲವ ಸಂಘದ ರುಕ್ಕರಾಮ ಸಾಲ್ಯಾನ್ ಸಭಾಗೃಹದಲ್ಲಿ ಜರಗಿದ 25ನೇ ಜಿಲ್ಲಾ ಇಂಟರ‍್ಯಾಕ್ಟ್ ಅಧಿವೇಶನ ” ಕೊಡುಗೆ-2015″ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಎಳೆಯ ಮನಸ್ಸನ್ನು ಧನಾತ್ಮಕವಾಗಿ ರೂಪಿಸಿ ಅವರಲ್ಲಿ ಸ್ವಾವಲಂಭಿ ಸ್ವಾಭಿಮಾನಿ ಗುಣಗಳನ್ನು ಹೆಚ್ಚಿಸಿದಲ್ಲಿ ಅವರು ಭವಿಷ್ಯದ ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲಗಳಾಗಿ ದೇಶದ ಅಭಿವೃದ್ಧಿಯಲ್ಲಿ ಸಹಕರಿಸುವಂತಾಗುತ್ತದೆ ಎಂಬ ನಿಲುವಿನಲ್ಲಿ ರೋಟರಿ ಶ್ರಮ ವಹಿಸುತ್ತಿದೆ ಎಂದರು.
ಅಧಿವೇಶನದ ಅದ್ಯಕ್ಷತೆಯನ್ನು ಮೂಲ್ಕಿ ರೋಟರಿ ಕ್ಲಬ್ಬಿನ ಅಧ್ಯಕ್ಷ ರವಿಚಂದ್ರ ವಹಿಸಿದ್ದರು. ಜಿಲ್ಲಾ ಇಂಟರ‍್ಯಾಕ್ಟ್ ಪ್ರತಿನಿಧಿ ರೋಹನ್ ಜಿ ಎಡಕೆಯವರು ಇಂಟರ‍್ಯಾಕ್ಟ್ ಸಂಚಿಕೆಯನ್ನು ಬಿಡುಗಡೆಗೊಳಿಸಿ ನೂತನ ಜಿಲ್ಲಾ ಇಂಟರ‍್ಯಾಕ್ಟ್ ಪ್ರತಿನಿಧಿ ಅದಿತಿ ರಾವ್ ರಿಗೆ ಅಧಿಕಾರ ಹಸ್ತಾಂತರಿಸಿದರು.ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕ್ರತ ಉಪನ್ಯಾಸಕ ಡಾ ಶ್ರೀಶ ಕುಮಾರ್ ಎಂ ಕೆ ಶಿಖರೋಪನ್ಯಾಸ ಗೈದರು. ರೋಟರಿಯ ಸಹಾಯಕ ಗವರ್ನರ್ ಸತ್ಯೇಂದ್ರ ಪೈ, ವಲಯ ಸೇನಾನಿ ಜೋಯಲ್ ಡಿ ಸೋಜಾ, ಜಿಲ್ಲಾ ಇಂಟರ‍್ಯಾಕ್ಟ್ ಸಭಾಪತಿ ಹರೀಶ್ ಕುಮಾರ್ ಎಚ್ ಎಮ್, ಉಪ ಸಭಾಪತಿ ಜಿನರಾಜ್ ಸಿ ಸಾಲ್ಯಾನ್, ವಲಯ ಸಂಯೋಜಕ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೂಲ್ಕಿ ರೋಟರಿ ಕ್ಲಬ್ ಅದ್ಯಕ್ಷ ರವಿಚಂದ್ರ ಸ್ವಾಗತಿಸಿದರು. ಹರೀಶ್ ಕುಮಾರ್ ಎಚ್ ಎಮ್ ಪ್ರಸ್ತಾವನೆಗೈದರು, ಮೂಲ್ಕಿ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು, ವೈ ಎನ್ ಸಾಲ್ಯಾನ್ ಮತ್ತು ರಾಜಾ ಪತ್ರಾವೋ ನಿರೂಪಿಸಿದರು.

Bhagyavan Sanil

Kinnigoli-27081501

Comments

comments

Comments are closed.

Read previous post:
KInnigoli-27081502
ಪ್ರಕ್ರೃತಿ ವೈಶಿಷ್ಟ

ಕಿನ್ನಿಗೋಳಿ : ಕಿನ್ನಿಗೋಳಿಯ ಸಂಗಮ್ ಪ್ರ್ರೂಟ್ ಸೆಂಟರ್ ಮಾಲಕ ವಿಜಯ್ ಅವರ ಅಂಗಡಿಯಲ್ಲಿ ಕಂಡು ಬಂದ ತ್ರಿಶೂಲ ಕ್ಯಾರೆಟ್

Close