ಮುದಲಾಡಿ ಮನೆಗೆ ಶಿಲ್ಪಾ ಶೆಟ್ಟಿ ಭೇಟಿ

ಕಿನ್ನಿಗೋಳಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಹಾಗು ತನ್ನ ಮೂಲ ಕುಟುಂಬದ ಮನೆ ನಿಡ್ಡೋಡಿ ಮುದಲಾಡಿ ಮನೆಗೆ ಭೇಟಿ ನೀಡಿ ದೈವ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ತನ್ನ ಗಂಡ ರಾಜ್‌ಕುಂದ್ರ ಮಗ ವಿಯಾನ್ ತಾಯಿ ಸುನಂದ ಹಾಗೂ ತಂದೆ ಸುರೇಂದ್ರ ಅವರೊಡನೆ ಬಂದಿದ್ದರು.
ಮುದಲಾಡಿ ಮನೆಯಲ್ಲಿದ್ದ 15 ದಿನದ ಪ್ರಾಯದ ದನದ ಕರು ದುರ್ಗಿಯೊಂದಿಗೆ ಆಟವಾಡಿದರು. ಕರುವಿನ ಜೊತೆ ತುಳುವಿನಲ್ಲೇ ಮಾತನಾಡುತ್ತಾ ಮಗು ವಿಯಾನ್‌ನೊಂದಿಗೆ ಕರುವಿಗೆ ಹುಲ್ಲು ತಿನ್ನಿಸುತ್ತಿದ್ದರು.
ನಂತರ ಮಾದ್ಯಮ ಮಿತ್ರರೊಂದಿಗೆ ಮಾತನಾಡಿ ನನಗೆ ಹುಟ್ಟೂರು ತುಳುನಾಡು ತುಂಬಾ ಇಷ್ಟ ಪ್ರತೀ ವರ್ಷ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಹಾಗೂ ಕುಟುಂಬದ ಮೂಲ ಮನೆ ಮುದಲಾಡಿಗೆ ಬೇಟಿ ನೀಡುತ್ತದ್ದೇನೆ. ಈಗಿನ ತುಳು ಚಿತ್ರ ರಂಗ ತುಂಭಾ ಬೆಳೆದಿದೆ ಎಂದು ಗೊತ್ತು, ಒಳ್ಳೆ ಕಥಾ ವಸ್ತುವಿದ್ದರೆ ಸಿನಿಮಾ ಹಿಟ್ ಆಗಲು ಸಾದ್ಯ ಎಂದರು ತುಳುವಿನಲ್ಲಿ ಅವಕಾಶ ಸಿಕ್ಕಿದರೆ ನಟಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ಹಿಂದಿ ಸಿನಿಮಾದ ಒತ್ತಡವೇ ಜಾಸ್ತಿಯಿದೆ. ಕನ್ನಡದಲ್ಲೂ ಸಾಕಷ್ಟು ಅವಕಾಶಗಳು ಲಭಿಸಿದ್ದು ಕಾಲ್ ಶೀಟ್ ಹೊಂದಿಸಲು ಆಗುವುದಿಲ್ಲ ಸಮಯವು ಸಿಗುತ್ತಿಲ್ಲ. ತುಳು ಚಿತ್ರದ ಹಾಡುಗಳನ್ನು ನಾನು ತುಂಬಾ ಇಷ್ಟ ಪಡುತ್ತೇನೆ ಇದರಲ್ಲಿ ಕೋಟಿ ಚೆನ್ನಯ ಸಿನೆಮಾದ ಹಾಡುಗಳು ಇಷ್ಟ ಎಂದು ಹೇಳಿದರು
ಗುರುವಾರ ರಾತ್ರಿ ಸುಬ್ರಮಣ್ಯಕ್ಕೆ ತೆರಳಿ ನಂತರ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಬಾನುವಾರ ಮುಂಬಾಯಿಗೆ ವಾಪಸಾಗುತ್ತಾರೆ ಎಂದು ಸುರೇಂದ್ರ ಶೆಟ್ಟಿ ತಿಳಿಸಿದ್ದಾರೆ.

Kinnigoli-27081513 Kinnigoli-27081512 Kinnigoli-27081511 Kinnigoli-27081510 Kinnigoli-27081509 Kinnigoli-27081508 Kinnigoli-27081507 Kinnigoli-27081506 Kinnigoli-27081505 Kinnigoli-27081504

Comments

comments

Comments are closed.

Read previous post:
Kinnigoli-27081503
ಕಲಾನಿಕೇತನ ಕಲಾಕೇಂದ್ರದ ದಶಮಾನೋತ್ಸವ

ಮೂಲ್ಕಿ: ಕಾರ್ನಾಡು ಕಲಾನಿಕೇತನ ಕಲಾಕೇಂದ್ರದ ದಶಮಾನೋತ್ಸವದ ಪ್ರಯುಕ್ತ  1ನೇ ತರಗತಿಯಿಂದ  10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯ ಪ್ರಾಥಮಿಕ ವಿಭಾಗ ಪ್ರಥಮ ಬಹುಮಾನವನ್ನು ಅಮೋಘ ಆಳ್ವಾಸ್ ಪ್ರೈಮರಿ ಶಾಲೆ...

Close