20 ನೇ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕಟೀಲು : ಸಾಹಿತ್ಯ ಸಮ್ಮೇಳನಗಳಂತಹ ಕಾರ್ಯಕ್ರಮಗಳಿಂದ ರಾಜ್ಯದ ಎಲ್ಲಾ ವಿಚಾರಗಳ ಬಗ್ಗೆ ಚಿಂತನೆ ನಡೆಸಲು ಸಾಧ್ಯವಿದ್ದು ಭಾಷಾ
ಸೌಹಾರ್ದತೆಗೆ ಪೂರಕ ವಾತಾವರಣ ನಿರ್ಮಾಣವಾದಾದ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಟೀಲಿನಲ್ಲಿ ಮೂರು ದಿನಗಳ ಕಾಲ ಜರಗಲಿರುವ 20 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಕಟೀಲಿನ ದೇವಳದ ವಠಾರದಲ್ಲಿನ ಸರಸ್ವತಿ ಸದನ ಸಭಾ ಮಂಟಪದ ಗೋಪಾಲ ಕೃಷ್ಣ ಆಸ್ರಣ್ಣ ವೇದಿಕೆಯಲ್ಲಿ ಜರಗಿದ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನ ಗೊಳಿಸಿ ಮಾತನಾಡಿದ ಆವರು ಸಮ್ಮೇಳನದಲ್ಲಿ ಜಲ್ಲೆಯ ಆಶಯಗಳ ಬಗ್ಗೆ,ಸಾಮಾಜಿಕ ಬದಲಾವಣೆಯ,ಭವಿಷ್ಯದ ಚಿಂತನೆ ಮುಂತಾದ ವಿಷಯಗಳ ಬಗ್ಗೆ ಚಿಂತಕರ ಚಾವಡಿಯಲ್ಲಿ ಚರ್ಚೆಯ ಅಗತ್ಯವಿದ್ದು ಇಂದಿನ ದಿನಗಳಲ್ಲಿ ಸೌಹಾರ್ದತೆಯ ಕೊರತೆ ಎದ್ದು ಕಾಣುತ್ತಿದೆ..ಅವಿಭಜಿತ ದ.ಕ.ಜಿಲ್ಲೆಯು ಉತ್ತಮ ಪರಿಸರ ಹಾಗೂ ವಾತಾವರಣವನ್ನು ಹೊಂದಿದ್ದು ಬ್ಯಾಂಕಿಂಗ್,ಶಿಕ್ಷಣ ಸೇರಿದಂತೆ ಅವಿಭಜಿತ ದ.ಕ.,ಜಿಲ್ಲೆ ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು ಇಲ್ಲಿಯ ಹೆಚ್ಚಿನ ಗಣ್ಯರು ದೇಶ ವಿದೇಶಗಳಲ್ಲಿ ಗುರುತಿಸಿ ಗೌರವಿಸಲ್ಪಟ್ಟಿದ್ದು ಇಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು ಯುವ ಜನತೆಯನ್ನು ಸಾಹಿತ್ಯದತ್ತ ಒಲೈಸುವ ಕಾರ್ಯವಾಗಬೇಕೆಂದು ಅವರು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸಭಾಪತಿ ಡಿ ಎಚ್ ಶಂಕರ ಮೂರ್ತಿಯವರು ಆಯಾ ಜಿಲ್ಲೆಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವ ಮೂಲಕ ಕನ್ನಡ ಭಾಷೆಯ ಬೆವಣಿಗೆಗೆ ಪ್ರಯತ್ನ ನಡೆಯುತ್ತಿದ್ದು ವಿಧಾನ ಪರಿಷತ್ ನಲ್ಲಿ ಕನ್ನಡಕ್ಕೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ.ಪರಿಷತ್,ಸದನದಲ್ಲಿ ಆಂಗ್ಲ ಭಾಷೆಯಲ್ಲಿ ವಿಷಯಗಳನ್ನು ಮಂಡಿಸುತ್ತಿದ್ದು ಪಾಂಡಿತ್ಯವನ್ನು ಮೆರೆಯುವವರು ಆಂಗ್ಲ ಭಾಷೆಗೆ ಒತ್ತು ನೀಡುತ್ತಿದ್ದು ಕನ್ನಡ ಆಡಳಿತ ಭಾಷೆಯಾಗದೇ ಸಾಮಾನ್ಯ ಜನರ ಭಾಷೆಯಾಗಿ ಬೆಳೆಯುತ್ತಿದೆ.ಕನ್ನಡ ಸಿನೆಮಾಗಳು ಭಾಷೆಯ ಬೆಳವಣಿಗೆಗೆ ಉತ್ತಮ
ಕೊಡುಗೆ ನೀಡಿದ್ದು ಪುಟ್ಟಣ್ಣ ಕಣಗಲ್ ರಂತಹವರು ಪ್ರಮುಖರಾಗಿದ್ದು ಇಂದಿನ ದಿನಗಳಲ್ಲಿ ಕಥೆ,ಸಾಹಿತ್ಯ,ಸಂದೇಶ ಯಾವುದು ಇಲ್ಲದೆ ವ್ಯತ್ಯಾಸ ವಾಗುತ್ತಿದ್ದು ಸಮ್ಮೇಳನಗಳ ಮೂಲಕ ಚರ್ಚೆ ನಡೆಯಬೇಕು.ಮಕ್ಕಳಿಗೆ ಸವಾಲನ್ನು ನೀಡುವಂತಹ ಸಾಹಿತ್ಯ ರಚನೆಯ ಅಗತ್ಯವಿದ್ದು ಭಾಷೆಯ ಬೆಳವಣಿಗೆಗೆ ಉತ್ತಮ ಸಾಹಿತ್ಯ ರಚನೆಯ ಅಗತ್ಯವಿದ್ದು ಉತ್ತಮ ಸಾಹಿತಿಗಳಿಗೆ ಬೆಂಬಲ ನೀಡಬೇಕೆಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಸಮ್ಮೇಳನದ ಅಧ್ಯಕ್ಷ ಡಾ ಎನ್ ಸುಕುಮಾರ್ ಗೌಡ ವಹಿಸಿದ್ದು ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂ ಅಂಗಡಿ ಮಾರು ಕೃಷ್ಣ ಭಟ್,ಪಾವಂಜೆ ಕೃಷ್ಣ ಭಟ್,ಬಹು ಭಾಷಾ ವಿದ್ವಾಂಸ ಲಕ್ಷ್ಮಣದಾಸ ವೇಲಣಕರ್,ಆಗಮ ವಿದ್ವಾಂಸ ಶಿಬರೂರು ವೇದವ್ಯಾಸ ತಂತ್ರಿ,ಭರತ ನಾಟ್ಯ ವಿದ್ವಾಂಸ ಕೆ ಮುರಳೀಧರ ರಾವ್,ಹಿರಿಯ ಸಾಹಿತಿ ಕೇಶವ ಉಚ್ಚಿಲ್,ವಾದ್ಯ ಸಂಗೀತಗಾರ ವಿದ್ವಾನ್ ಲಿಂಗಪ್ಪ ಶೇರಿಗಾರ,ಪಾಡ್ಡನ ಕಲಾವಿದೆ ಗಿಡಗೆರೆ ರಾಮಕ್ಕ,ಸಂಗೀತಗಾರ್ತಿ ಸರೋಜ ಎಂ ರಾವ್,ಸಾಹಿತಿ ಎ ಪಿ ಮಾಲತಿ,ಯಕ್ಷಗಾನ ವಿದ್ವಾಂಸ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರನ್ನು ಪ್ರೊ ಬಿ ಎಂ ಹೆಗಡೆಯವರು ಸನ್ಮಾನಿಸಿದರು.ನಿತ್ಯಾನಂದ ಕಾರಂತ ಪೊಳಲಿ ಅಭಿನಂದನಾ ಬಾಷಣಗೈದರು.ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಪದ್ಮಶ್ರೀ ಡಾ ಕದ್ರಿ ಗೋಪಾಲನಾಥ್ ರವರು,ಕಲಾ ಪ್ರದರ್ಶನವನ್ನು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ರವರು, ಯಕ್ಷಗಾನ ಸಾಹಿತ್ಯ ಪ್ರದರ್ಶನವನ್ನು ಸಂಸದ ನಳಿನ್ ಕುಮಾರ್ ಕಟೀಲು,ವಸ್ತು ಪ್ರದರ್ಶನ ಪ್ರಾಂಗಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಶಾ ತಿಮ್ಮಪ್ಪ ಗೌಡ,ಪುಸ್ತಕ ಪ್ರದರ್ಶನವನ್ನು ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ,ಸ್ವಾವಲಂಬಿ ಸಂತೆಯನ್ನು ಕಟೀಲು ಚಚನ ಧರ್ಮಗುರು ಫ್ರಾನ್ಸಿಸ್ ಗೋಮ್ಸ್ ಹಾಗೂ ಪುಸ್ತಕ ಮಾಲೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು
ಉದ್ಘಾಟಿಸಿದರು.ಶ್ರೀ ಕ್ಷೇತ್ರ ಕಟೀಲಿನ ವೇದಮೂರ್ತಿ ವಾಸುದೇವ ಆಸ್ರಣ್ಣ ಮತ್ತು ವೇದಮೂರ್ತಿ ಕೆ ಲಕ್ಷ್ಮೀನಾರಾಯಣ ಆಸ್ರಣ್ಣರು ಶುಭಾಶಂಸನೆಗೈದರು.ನಿಕಟಪೂರ್ವಸಮ್ಮೇಳನಾಧ್ಯಕ್ಷ ನಾಡೋಜ ಕೆ ಪಿ ರಾವ್ ಸಮ್ಮೇಳನಾಧ್ಯಕ್ಷರ ನುಡಿಗೈದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣೀಕ್,ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲು,ಎಕ್ಕಾರು ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಎಕ್ಕಾರು,ಕೊಂಡೆಮೂಲ ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರ‍್ತಿ,ತಾಲೂಕು ಶಿಕ್ಞಣಾಧಿಕಾರಿ ವಾಲ್ಟರ್ ಡಿಮೆಲ್ಲೊ, ಮತ್ತಿತರರು ಉಪಸ್ಠಿತರಿದ್ದರು.
ಸಮ್ಮೇಳನದ ಕಾರ್ಯಾಧ್ಯಕ್ಷ ಹರಿನಾರಾಯಣ ದಾಸ ಆಸ್ರಣ್ಣರು ಸ್ವಾಗತಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ಭಾಷಣಗೈದರು.ಮಂಗಳೂರಿನ ಶೀಲ ದಿವಾಕರ ಮತ್ತು ಬಳಗದವರು ನಾಡಗೀತೆ ಹಾಗೂ ಗೀತ ಗಾಯನ ಮಾಡಿದರು.ಕಟೀಲು ಕಾಲೇಜಿನ ವಿದ್ಯಾರ್ಥಿಗಳು ರೈತ ಗೀತೆಯನ್ನು ಹಾಡಿದರು.ಸಮ್ಮೇಳನದ ಕಾರ್ಯದರ್ಶಿ ಕೆ ಭುವನಾಭಿರಾಮ ಉಡುಪ ವಂದಿಸಿದರು.ಪುತ್ತೂರಿನ ಉಪನ್ಯಾಸಕ ಬಿ ವಿ ಸೂರ್ಯ ನಾರಾಯಣ ಸಮ್ಮೇಳನಾಧ್ಯಕ್ಷರ ಪರಿಚಯಗೈದರು.ಮಂಜುಳಾ ಶೆಟ್ಟಿ ಮತ್ತು ಶರತ್ ಶೆಟ್ಟಿ ನಿರೂಪಿಸಿದರು.

Kateel-28081531 Kateel-28081532 Kateel-28081533

Comments

comments

Comments are closed.

Read previous post:
Kateel-28081534
ಗೋಪಾಲಕೃಷ್ಣ ದೇಲಂಪಾಡಿ ಯೋಗ

ಕಿನ್ನಿಗೋಳಿ : ಕಟೀಲಿನಲ್ಲಿ ನಡೆಯುತ್ತಿರುವ 20ನೇ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಗೋಪಾಲಕೃಷ್ಣ ದೇಲಂಪಾಡಿ ತಂಡದಿಂದ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶನಗೊಂಡಿತು.

Close