ಸಾಹಿತ್ಯ ಜಾತ್ರೆಯ ದಿಬ್ಬಣ

ಕಿನ್ನಿಗೋಳಿ: 20ನೇ ಸಂಭ್ರಮಾಚರಣೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ದಿನಗಳ ಪರ್ಯಂತ ಕಟೀಲು ದೇವಳದ ಆವರಣದಲ್ಲಿ ನಡೆಯುತ್ತಿದ್ದು ಮೊದಲಿನ ದಿನ ಶುಕ್ರವಾರ ಕನ್ನಡ ಭುವನೇಶ್ವರಿಯ ಮೆರವಣಿಗೆಯು ಸಾಹಿತ್ಯ ಜಾತ್ರೆಯ ದಿಬ್ಬಣ ಕಟೀಲು ಗಿಡಿಗೆರೆ ಶ್ರೀ ಮಹಾಂಕಾಳಿ ದೈವಸ್ಥಾನದಿಂದ ಕಟೀಲು ದೇವಳದವರಗೆ ಸಾಗಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಮೆರವಣಿಗೆಗೆ ಚಾಲನೆ ನೀಡಿದರು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ. ಸರೋಜಿನಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಎಕ್ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಎಕ್ಕಾರು ದೀಪವನ್ನು ಬೆಳಗಿಸಿದರು.
ಸಮ್ಮೇಳನ ಅಧ್ಯಕ್ಷ ಡಾ. ಎನ್. ಸುಕುಮಾರ ಗೌಡ, ಸಚಿವ ಕೆ. ಅಭಯಚಂದ್ರ ಜೈನ್, ಕಾರ್ಯಾಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ್ ಅವರನ್ನು ಹೊತ್ತ ಪುಷ್ಪಾಲಂಕಾರದ ತೆರೆದ ವಾಹನ ಸಹಿತ ಬೇತಾಳಗಳು, ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಪ್ರಾಯೋಜಿಸಿದ ಮೈಸೂರು ದಸರದ ವೈಭವವನ್ನು ಬಿಂಬಿಸುವ ರಾಜರನ್ನು ಹೊತ್ತೊಯ್ಯುವ ಅಂಬಾರಿಯ ಆನೆಯ ಟ್ಯಾಬ್ಲೋ, ತಾಲೀಮು ತಂಡ, ಭಾರತ ಸೇವಾ ದಳ. ಕಟೀಲು ಶಾಲಾ ಮಕ್ಕಳ ಕರಾವಳಿಯ ದಸರಾ ಹುಲಿ ವೇಷ, ಸ್ಕೌಟ್ಸ್ ಮತ್ತು ಗೈಡ್ಸ್, ತಾಲೀಮು, ಕರಾವಳಿ ಚಂಡೆ, ಸ್ಯಾಕ್ಸೋಫೋನ್ ವಾದನ, ಧರ್ಮಗ್ರಂಥ ಭಗವದ್ಗೀತೆ ಮತ್ತು ತಾಳೆಗರಿಯ ಗ್ರಂಥ ಭಂಡಾರಗಳನ್ನು ಹೊತ್ತ ರಥ, ಜ್ಞಾನಪೀಠ ಪುರಸ್ಕೃತ ಮತ್ತು ಸಮ್ಮೇಳನಾಧ್ಯಕ್ಷರ ಕೃತಿಗಳನ್ನು ಹೊತ್ತ ಪಲ್ಲಕ್ಕಿಗಳು ಪೂರ್ಣಕುಂಭ ಕಲಶ ಹೊತ್ತ ಮಹಿಳೆಯರು ಮರವಣಿಗೆಯ ಸಾಗಿದರು.
ಕಟೀಲು ಸಮೂಹ ವಿದ್ಯಾ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಕನ್ನಡ ನಾಡು ನುಡಿಗಳ ಉದ್ಘೋಷಣೆಗಳನ್ನು ಮಾಡಿಕೊಂಡು ಭಾಗವಹಿಸಿದ್ದರು. ಗಿಡಿಗೆರೆ ದೈವಸ್ಥಾನದಲ್ಲಿ ಆರಂಭಗೊಂಡ ಮೆರವಣಿಗೆ, ಪದವಿ ಕಾಲೇಜು ರಸ್ತೆ, ಅಜಾರು ರಸ್ತೆ, ಮುಖ್ಯ ಬಸ್ ನಿಲ್ದಾಣ, ದೇವಸ್ಥಾನದ ರಥಬೀದಿಯಾಗಿ ಕಟೀಲು ಪದವಿಪೂರ್ವ ಕಾಲೇಜು ಆವರಣದಲ್ಲಿ ಸಮಾಪನಗೊಂಡಿತು.
ರಾಷ್ಟ್ರಧ್ವಜವನ್ನು ಕೊಂಡೆಮೂಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗೀತಾ ಪೂಜಾರ್ತಿ, ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ದ.ಕ. ಜಿಲ್ಲಾಧ್ಯಕ್ಷ ಎಸ್.ಪ್ರದೀಪ್‌ಕುಮಾರ ಕಲ್ಕೂರ, ಸಮ್ಮೇಳನದ ಧ್ವಜಾರೋಹಣವನ್ನು ಮಂಗಳೂರು ತಾಲ್ಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್ ನೆರವೇರಿಸಿದರು. ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಸಮಿತಿಯ ಭುವನಾಭಿರಾಮ ಉಡುಪ, ಕಟೀಲು ದೇವಳ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಂ ಪೂಂಜಾ, ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಹೈಸ್ಕೂಲು ಮುಖ್ಯ ಶಿಕ್ಷಕ ಸೋಮಪ್ಪ ಅಲಂಗಾರು. ಶಿಕ್ಷಕ ಸಾಯಿನಾಥ ಶೆಟ್ಟಿ, ದಯಾನಂದ ಮಾಡ ಕಟೀಲು, ಭಾರತ ಸೇವಾದಳದ ಜಿಲ್ಲಾ ಸಂಘಟಕ ಟಿ.ಎಸ್. ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

Kateel-2908201507

Kateel-28081501Kateel-28081502Kateel-28081503Kateel-28081504Kateel-28081505Kateel-28081506Kateel-28081507Kateel-28081508Kateel-28081509

Kateel-2908201501

Kateel-28081510Kateel-28081511Kateel-28081512Kateel-28081513Kateel-28081514Kateel-28081515Kateel-28081516Kateel-28081517Kateel-28081518Kateel-28081519

Comments

comments

Comments are closed.

Read previous post:
Kinnigoli-27081512
ಮುದಲಾಡಿ ಮನೆಗೆ ಶಿಲ್ಪಾ ಶೆಟ್ಟಿ ಭೇಟಿ

ಕಿನ್ನಿಗೋಳಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಹಾಗು ತನ್ನ ಮೂಲ ಕುಟುಂಬದ ಮನೆ ನಿಡ್ಡೋಡಿ ಮುದಲಾಡಿ ಮನೆಗೆ ಭೇಟಿ ನೀಡಿ ದೈವ ದೇವರುಗಳಿಗೆ...

Close