ಪುಸ್ತಕ ಮಳಿಗೆ ಬಳಿಗೆ ಮಕ್ಕಳು

ಕಿನ್ನಿಗೋಳಿ: ಪುಸ್ತಕಗಳ ಮಳಿಗೆಗೆ ಮೊದಲ ದಿನ ಮಕ್ಕಳ ದಂಡೇ ಆಗಮಿಸುತ್ತಿದ್ದು ಸಾಹಿತ್ಯಾಸಕ್ತ ಅಭಿಮಾನಿಗಳು ಶನಿವಾರ ಭಾನುವಾರ ಭೇಟಿ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಪುಸ್ತಕ ಮಳಿಗೆಯ ಮಾರಾಟಗಾರರು ಗ್ರಾಹಕರ ಬರುವಿಕೆಗೆ ಕಾಯುತ್ತಿರುವುದು ಕಟೀಲಿನಲ್ಲಿ ಶುಕ್ರವಾರ ಪ್ರಾರಂಭಗೊಂಡ ದಕ್ಷಿಣ ಕನ್ನಡ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕಂಡುಬರುತ್ತಿತ್ತು
ಕಟೀಲು ಪದವಿ ಪೂರ್ವ ಕಾಲೇಜಿನ ಹೊರಾಂಗಣದ ಆವರಣದಲ್ಲಿ ಸುಮಾರು ೫೦ ವಿವಿಧ ಪ್ರಕಾಶನ ಸಂಸ್ಥೆಗಳ ಪುಸ್ತಕ ಮಳಿಗೆಗಳು, ಸ್ವಸಹಾಯ ಸಂಘದ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆಯರೇ ತಯಾರಿಸುತ್ತಿರುವ ವಸ್ತುಗಳ ೪೦ ಮಳಿಗೆಗಳಿವೆ.
ಪ್ರಥಮ ದಿನದಲ್ಲಿ ಕಟೀಲು ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೇ ಪುಸ್ತಕ ಮಳಿಗೆಯಲ್ಲಿ ತುಂಬಿದ್ದರು. ಪುಸ್ತಕ ಮಳಿಗೆಗಳು ಹೇಗಿವೆ ಯಾವ ಬಗೆಯ ಜ್ಞಾನ ಸಂಪತ್ತುಗಳನ್ನು ನೀಡುವ ಪುಸ್ತಕಗಳಿವೆ ಏಮಬುದನ್ನು ಕಂಡುಕೊಂಡರು.
ಮೈಸೂರು ದಿವ್ಯ ಬುಕ್ ಏಜೆನ್ಸಿಯ ತೇಜೋಪಾಲ್ ಮಾತನಾಡಿ ೧೯೮೭ರಿಂದ ವಿವಿಧ ಸಮ್ಮೇಳನ, ಸಾಹಿತ್ಯ ಸಮಾವೇಶಗಳಲ್ಲಿ ಭಾಗವಹಿಸಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದು ಮನ ಸಂತೃಪ್ತಿ ಜೊತೆಗೆ ಜೀವನಾಧಾರ ಪುಸ್ತಕ ಮಾರಾಟದಿಂದಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಸಾಹಿತ್ಯದ ಜಾತ್ರೆ ನಡೆಯುವುದು ಸಮಂಜಸ. ಎಂದರು.
ಬೆಳಿಗ್ಗೆಯಿಂದಲೇ ಬರೀ ಮಕ್ಕಳೇ ಬರ‍್ತಾ ಇದ್ದು ದೊಡ್ಡ ದೊಡ್ಡ ಪುಸ್ತಕ ಪ್ರೇಮಿಗಳು ಬಂದ್ರೆ ನಮಗೆ ಒಳ್ಳೆ ವ್ಯಾಪಾರ, ವ್ಯವಸ್ಥೆ ಚೆನ್ನಾಗಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಬೆಳೆದರೆ ಮಾತ್ರ ಪುಸ್ತಕ ಮಾರಾಟಗಾರ ಬದುಕು ಹಾಗೂ ಕೃತಿಗಾರರಿಗೆ ಪ್ರೋತ್ಸಾಹ ಕೊಟ್ಟಂತೆ. ಮಕ್ಕಳು ಹಾಸ್ಯ ಪುಸ್ತಕಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎಂದು ಬೆಂಗಳೂರಿನ ನವಭಾರತ ಪ್ರಕಾಶನದ ವೆಂಕಟಮುನಿ ಹೇಳಿದರು.
ಕಟೀಲು ಪಿಯು ಕಾಲೇಜಿನ ವಿದ್ಯಾರ್ಥಿ ಅಜಿತ್ ಪ್ರತಿಕ್ರಿಯಿಸಿ ಇಲ್ಲಿನ ಪುಸ್ತಕ ಮಳಿಗೆಯ ಬಗ್ಗೆ ಬಹಳ ಕುತೂಹಲ ಕೆರಳಿಸಿದೆ ನಾವೆಲ್ಲಾ ವಿದ್ಯಾರ್ಥಿಗಳು ಒಂದೊಂದು ಬಗೆಯ ಒಂದು ಪುಸ್ತಕಗಳನ್ನು ಖರೀದಿಸಿ ಪರಸ್ಪರ ಹಂಚಿಕೊಂಡಿದ್ದೇವೆ ಎಂದನು.
ಪುಸ್ತಕ ಮಳಿಗೆಯು ರಥಬೀದಿಯಲ್ಲಿಯೇ ಇದ್ದಿದ್ದರೆ ದೇವಳಕ್ಕೆ ಭೇಟಿ ನೀಡುವ ಭಕ್ತರು ಆಗಮಿಸುತ್ತಿದ್ದರು ಎಂಬ ಪುಸ್ತಕ ಮಳಿಗೆಯವರ ಅಭಿಪ್ರಾಯ ಆಯುರ್ವೇದ ಔಷದಿ ಮಳಿಗೆ, ದಿ. ಪು. ಶ್ರೀನಿವಾಸ ಭಟ್‌ರವರ ಸಂಗ್ರಹದ ಯಕ್ಷಗಾನ ಪುಸ್ತಕ ಪ್ರಪಂಚ, ಚಿತ್ರಕಲಾ ಪ್ರದರ್ಶನ, ಯಕ್ಷಗಾನ ಕಂಬಳ ಚಿತ್ರಗಳ ಪ್ರದರ್ಶನ, ಅಡುಗೆ ಮನೆಯ ಉಪಯುಕ್ತ ಸಾಧನಗಳು, ಕರಕುಶಲ ವಸ್ತುಗಳ ಪ್ರದರ್ಶನ, ಪತ್ರಿಕೆಯ ಸಂಗ್ರಾಹಕ ಹಿರಿಯ ಸಾಹಿತಿ ಉಮೇಶ್‌ರಾವ್ ಎಕ್ಕಾರು ಅವರ ಹಲವು ಭಾಷೆಗಳ ಪತ್ರಿಕೆ ಪುಸ್ತಕಗಳ ಸಂಗ್ರಹ ಸಾಹಿತ್ಯಾಸಕ್ತರನ್ನು ಮನಸೆಳೆಯುವಂತಿತ್ತು.

Kateel-2908201511 Kateel-2908201512

Comments

comments

Comments are closed.

Read previous post:
Kateel-2908201510
ಕಟೀಲು ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ

ಕಿನ್ನಿಗೋಳಿ: ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ನಡೆಯಿತು.

Close