ಕರಾವಳಿ ಜೀವನದಲ್ಲಿ ಹಾಸ್ಯ ಸ್ವಾರಸ್ಯ

ಕಟೀಲು : ಕಟೀಲು ಸರಸ್ವತೀ ಸದನದಲ್ಲಿ ನಡೆಯುತ್ತಿರುವ ೨೦ನೇ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕರಾವಳಿ ಜೀವನದಲ್ಲಿ ಹಾಸ್ಯ ಸ್ವಾರಸ್ಯ ಗೋಷ್ಟಿಯಲ್ಲಿ ಪುಂಡಿಕಾಯಿ ಗಣಪಯ್ಯ ಭಟ್ ಭಾಷೆಯ ಬಳಕೆಯಲ್ಲಿನ ಹಾಸ್ಯ ವ್ಯತ್ಯಾಸಗಳನ್ನು ಹೇಳಿ ಸಭಿಕರನ್ನು ನಗೆಗಡಲಲ್ಲಿ ತೇಲಾಡಿಸಿದರು. .
ಇಂದು ತಾಳಮದ್ದಲೆ : ಪಟ್ಲ, ಪದ್ಯಾಣ, ಕನ್ನಡಿಕಟ್ಟೆ, ಕಡಬ, ಕಟೀಲು, ಸೂರಿಕುಮೇರು, ಮಲ್ಪೆ, ಸುಣ್ಣಂಬಳ, ಪಾತಾಳ, ತೀರ್ಥಳ್ಳಿ, ವಳಕ್ಕುಂಜ, ವರ್ಕಾಡಿ… ಈಗಿನ ಪತ್ರಿಕಾ ಜಾಹೀರಾತು ಹಾಗೂ ಬ್ಯಾನರ್ ಜಾಹೀರಾತುಗಳಲ್ಲಿ ಹೀಗೆ ಮುದ್ರಣಗೊಳ್ಳುತ್ತಿದೆ. ಇದು ಕಲಾವಿದರ ಹೆಸರುಗಳೇ ಅಥವಾ ಕೇವಲ ಊರುಗಳ ಹೆಸರೇ.
ಅಚಲಾ ಮೋಟರ‍್ಸ್ ಗ್ಯಾರೇಜಿನ ಹೆಸರಾದರೆ ಅಲ್ಲಿ ರಿಪೇರಿಗೆ ಬರುವ ವಾಹನಗಳು ಚಲಿಸುವುದಿಲ್ಲ ಎಂದರ್ಥವೇ? ವಾಣಿಜ್ಯ ಸಂಕೀರ್ಣದ ಹೆಸರು ಶಿಥಿಲಾ ಟವರ‍್ಸ್. ಅಂದರೆ ಬೀಳಲು ಸಿದ್ದವಾಗಿರುವಂತಹದ್ದೇ? ಹೆಸರುಗಳಲ್ಲಿನ ಸ್ವಾರಸ್ಯಗಳನ್ನೂ ಅವರು ಹೇಳುತ್ತ ಸಭಿಕರಿಗೆ ಪದದ ಅರ್ಥ ಬಗ್ಗೆ ಯೋಚಿಸುವಂತೆ ಮಾಡಿದರು. ಹಲವು ದೃಷ್ಟಾಂತಗಳನ್ನು ಹೇಳಿ ಜನರನ್ನು ತಮ್ಮಲ್ಲಿಯೇ ಪ್ರಶ್ನಿಸಿಕೊಳ್ಳುವಂತೆ ಮಾಡಿದರು.
ದೇಗುಲಗಳಲ್ಲಿ ಜಾಗಟೆ ಬಡಿಯುವ ಯಂತ್ರ ಬಂದಾಗ ಜನ ದೇವರನ್ನು ಬಿಟ್ಟು ಜಾಗಟೆ ಯಂತ್ರವನ್ನು ನೋಡಲು ಹೋದದ್ದನ್ನು ನೆನಪಿಸಿ ಇಂತಹ ಬದಲಾವಣೆಗಳಾಗುತ್ತಿರುವುದು ಸರಿಯೇ? ದೇವರಿಗೆ ಪ್ಲಾಸ್ಟಿಕ್ ಪಾಕೀಟು ಹಾಲು ನೀಡಿದರೆ ಹೇಗೆ. ಕನಡದ ಮದುವೆಯ ಕರೆಯೋಲೆಯಲ್ಲಿ ಚಿ.ಸೌ ಇಂಗ್ಲೀಷ್ನಲ್ಲಿ ಹೇಗೆ ಬರೆಯುವುದು ಇದು ಕೇಳಲು ಹಾಸ್ಯವಾದರೂ ಭಾಷಾ ಪ್ರಗತಿಯೊಂದಿಗೆ ಶಿಸ್ತು ಸಂಸ್ಕಾರದ ಪಾರಂಪರಿಕ ವಿದಿ ವಿಧನಗಳು ಬಳಕೆಯಲ್ಲಿರಬೇಕು. ಎಚ್. ಗೋಪಾಲ ಭಟ್ ಮಕ್ಕಳಿಗೆ ಪುಸ್ತಕಗಳನ್ನು ಓದಲು ನೀಡಿ. ಹಾಸ್ಯದಿಂದ ಆರೋಗ್ಯ ಸಾಧ್ಯ ಎಂದರು.
ರವಿಶಂಕರ ವಳಕ್ಕಂಜ ಮಾತನಾಡಿ ಹಾಸ್ಯದ ಸ್ಥಾಯಿಭಾವ ನಗು. ಅತಿಯಾದ ಹಾಸ್ಯ ಹಾಸ್ಯಾಸ್ಪದವಾಗದಿರಲಿ ಎಂದರು.

Kateel-29081501

Comments

comments

Comments are closed.

Read previous post:
Kateel-28081531
20 ನೇ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕಟೀಲು : ಸಾಹಿತ್ಯ ಸಮ್ಮೇಳನಗಳಂತಹ ಕಾರ್ಯಕ್ರಮಗಳಿಂದ ರಾಜ್ಯದ ಎಲ್ಲಾ ವಿಚಾರಗಳ ಬಗ್ಗೆ ಚಿಂತನೆ ನಡೆಸಲು ಸಾಧ್ಯವಿದ್ದು ಭಾಷಾ ಸೌಹಾರ್ದತೆಗೆ ಪೂರಕ ವಾತಾವರಣ ನಿರ್ಮಾಣವಾದಾದ ಕನ್ನಡ ಭಾಷೆ ಬೆಳೆಯಲು ಸಾಧ್ಯ...

Close