ಕಲಾವಿದ ಮೊದಲು ಪ್ರೇಕ್ಷಕನಾಗಿರಬೇಕು.

ಕಟೀಲು : ಯಕ್ಷಗಾನ ಮತ್ತು ತಾಳಮದ್ದಲೆಯ ಕಲಾಸ್ವರೂಪ ಸ್ವಲ್ಪ ಭಿನ್ನತೆಯಿದೆ. ಕಲಾವಿದ ಮೊದಲು ಪ್ರೇಕ್ಷಕನಾಗಿ ಪಾತ್ರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು, ಭಾಷಾ ಪ್ರೌಡಿಮೆಯ ಅಭ್ಯಾಸ ಮತ್ತು ಅಧ್ಯಯನ ಮಾಡಿಲ್ಲದಿದ್ದರೆ ಭಾಷೆಯ ಮೇಲೆ ಅಹಂ ಇದ್ದರೆ ಕಲಾವಿದ ಬೆಳೆಯುವುದಿಲ್ಲ ಎಂದು ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ಹೇಳಿದರು.
ಶನಿವಾರ ಕಟೀಲಿನಲ್ಲಿ ನಡೆಯುತ್ತಿರುವ 20ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕಟೀಲು ಪದವಿಪೂರ್ವ ಕಾಲೇಜಿನ ಯಕ್ಷಗಾನ ಕಲಾ ಮಂಟಪದ ಕಟೀಲು ಸದಾನಂದ ಆಸ್ರಣ್ಣ ವೇದಿಕೆಯಲ್ಲಿ ತಾಳಮದ್ದಲೆ ಮತ್ತು ಯಕ್ಷಗಾನದಲ್ಲಿ ಪೀಠಿಕೆ- ವಿನ್ಯಾಸ- ಪ್ರಭೇದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಪಾತ್ರದ ಸ್ಪಷ್ಟ ಕಲ್ಪನೆಯೇ ಫೀಠಿಕೆ. ಪ್ರಸಂಗಕ್ಕೆ ನಿರ್ದಿಷ್ಟ ಅವಧಿಯ ಪೀಠಿಕೆ ಇರಬೇಕು, ಪ್ರಾಥಮಿಕ ಮಾಧ್ಯಮಿಕ ಪ್ರೌಢ ರೀತಿಯಲ್ಲಿ ಪೀಠಿಕೆಯನ್ನು ವಿಶ್ಲೇಷಿಸಬಹುದು, ಸಮಯದ ಪರಿಮಿತಿಯಲ್ಲಿ ಅರ್ಥಗಾರಿಕೆ ಮುಖ್ಯ ಸುದೀರ್ಘ ಅರ್ಥಗಾರಿಕೆ ಪ್ರಸಂಗವನ್ನೇ ಇಕ್ಕಟ್ಟಿಗೆ ಸಿಲುಕಿಸಬಹುದು. ಮಕ್ಕಳು ಹೆಚ್ಚಾಗಿ ಅಧ್ಯಯನ ಹಾಗೂ ಯಕ್ಷಗಾನ ತಾಳಮದ್ದಲೆ ಕೇಳಿದಾಗ ಅವರ ಭಾಷಾಪ್ರೌಡಿಮೆ ಆಸಕ್ತಿ ಬೆಳೆಯುತ್ತದೆ. ಎಂದು ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಪೀಠಿಕೆಯ ಬಗ್ಗೆ ವಿಶ್ಲೇಷಿಸಿದರು.
ಕಟೀಲು ಮೇಳದ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಪಾತ್ರದ ವಿನ್ಯಾಸ ಮತ್ತು ಪ್ರಭೇದದ ಬಗ್ಗೆ ವಿಚಾರ ಮಂಡಿಸಿ ಕಥೆಯ ಅನುಬೋಗಕ್ಕೆ ಪಾತ್ರವನ್ನು ವಿನಿಯೋಗಿಸಬೇಕು ಕಥೆಯ ಉಪಕ್ರಮ ಹಾಗೂ ಪಾತ್ರಕ್ಕಾಗಿ ಪೀಠಿಕೆ ಅಗತ್ಯ ಬಯಲಾಟದಲ್ಲಿ ನಿಯಮಬದ್ಧರಾಗಿ ಪಾತ್ರಧಾರಿ ನಡೆಯಬೇಕು, ಪ್ರಧಾನ ಪಾತ್ರಕ್ಕೆ ಪೀಠಿಕೆ ಇಲ್ಲದಿದ್ದಲ್ಲಿ ಪಾತ್ರ ನಗಣ್ಯ ಎಂದು ಹೇಳಿದರು.
ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈ, ಯಕ್ಷಗಾನ ಕಲಾವಿದೆ ವಿದ್ಯಾ ರಮೇಶ್ ಭಟ್, ಪತ್ರಿಕಾ ಛಾಯಾಗ್ರಾಹಕ ಸುಧಾಕರ ಜೈನ್, ಯಕ್ಷಗಾನ ಅಭಿಮಾನಿಗಳು ಸಂವಾದ ನಡೆಸಿದರು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನ, ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಮತ್ತು ಮಂಗಳೂರಿನ ಯಕ್ಷಾರಾಧನಾ ಕಲಾಕೇಂದ್ರವು ಜಂಟಿಯಾಗಿ ಈ ಕಾರ್ಯಕ್ರಮ ಸಂಯೋಜಿಸಿತ್ತು
ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು, ಭಾಗವತರಾಗಿ ಸತೀಶ್ ಶೆಟ್ಟಿ ಬೋಂದೆಲ್, ಚಂಡೆಯಲ್ಲಿ ರಾಜೇಶ್ ಕಟೀಲು, ಮದ್ದಲೆಯಲ್ಲಿ ಗಣೇಶ್ ಸಹಕರಿಸಿದರು.

Kateel-29081502

Comments

comments

Comments are closed.

Read previous post:
Kateel-29081501
ಕರಾವಳಿ ಜೀವನದಲ್ಲಿ ಹಾಸ್ಯ ಸ್ವಾರಸ್ಯ

ಕಟೀಲು : ಕಟೀಲು ಸರಸ್ವತೀ ಸದನದಲ್ಲಿ ನಡೆಯುತ್ತಿರುವ ೨೦ನೇ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕರಾವಳಿ ಜೀವನದಲ್ಲಿ ಹಾಸ್ಯ ಸ್ವಾರಸ್ಯ ಗೋಷ್ಟಿಯಲ್ಲಿ ಪುಂಡಿಕಾಯಿ ಗಣಪಯ್ಯ ಭಟ್...

Close