ಭಾಷೆಯ ಬಳಕೆ ಜ್ಞಾನದ ದಾರಿ

ಕಟೀಲು : ಯಕ್ಷಗಾನ ಹಾಗೂ ತಾಳಮದ್ದಳೆಗಳಿಗೆ ಶಬ್ದ ಬಳಕೆ ಮತ್ತು ಭಾಷಾಜ್ಞಾನ ಪ್ರ್ರಾಮುಖ್ಯ ಮಾತಿನ ಪ್ರಯೋಗದಲ್ಲಿ ಸಾರ್ಥ್ಯಕ್ಯವಿರಬೇಕು ಇಂದಿನ ಕಾಲದಲ್ಲಿ ವಿಭಿನ್ನ ಭಾಷೆಗಳ ಪ್ರಭಾವದಿಂದಾಗಿ ಭಾಷಾ ವೈಪರಿತ್ಯಗಳಾಗುತ್ತಿದೆ. ಆದರೆ ಯಕ್ಷಗಾನದ ಭಾಷೆಗೆ ಶುದ್ದಗನ್ನಡದ ಇತಿಹಾಸ ಇದೆ. ಯಕ್ಷಗಾನ ವಿವಿಧ ಭಾಷೆಗಳಲ್ಲಿ ನಡೆದರು ಸ್ವಾಗತ ಆದರೆ ಮೂಲ ಭಾಷೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಎಂದು ಕಟೀಲು ದೇವಳ ಅರ್ಚಕ ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಶನಿವಾರ ಕಟೀಲಿನಲ್ಲಿ ನಡೆಯುತ್ತಿರುವ 20ನೇ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕಟೀಲು ಪದವಿಪೂರ್ವ ಕಾಲೇಜಿನ ಯಕ್ಷಗಾನ ಕಲಾ ಮಂಟಪದ ಕಟೀಲು ಸದಾನಂದ ಆಸ್ರಣ್ಣ ವೇದಿಕೆಯಲ್ಲಿ ಯಕ್ಷಗಾನ ಹಾಗೂ ತಾಳಮದ್ದಲೆಯಲ್ಲಿ ಭಾಷೆ ಗೋಷ್ಠಿಯಲ್ಲಿ ಮಾತನಾಡಿದರು.
ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು.
ಸಂವಾದಕರಾಗಿ ಸರಯೂ ಬಾಲ ಮತ್ತು ಮಹಿಳಾ ಯಕ್ಷವೃಂದದ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ, ಮಕ್ಕಳ ಸಾಹಿತಿ ಸಾವಿತ್ರಿ ಎಸ್. ರಾವ್, ಪಣಂಬೂರು ಮಕ್ಕಳ ಮೇಳದ ಶಂಕರನಾರಾಯಣ ಮೈರ‍್ಪಾಡಿ ಉಪಸ್ಥಿತರಿದ್ದರು.
ವಾದಿರಾಜ ಕಲ್ಲೂರಾಯ ನಿರೂಪಿಸಿದರು, ಭಾಗವತರಾಗಿ ಅಂಡಾರು ದೇವಿಪ್ರಸಾದ ಶೆಟ್ಟಿ, ಮದ್ದಲೆಯಲ್ಲಿ ಗಣೇಶ್ ಸಹಕರಿಸಿದರು.

Kateel-29081503

Comments

comments

Comments are closed.

Read previous post:
Kateel-29081502
ಕಲಾವಿದ ಮೊದಲು ಪ್ರೇಕ್ಷಕನಾಗಿರಬೇಕು.

ಕಟೀಲು : ಯಕ್ಷಗಾನ ಮತ್ತು ತಾಳಮದ್ದಲೆಯ ಕಲಾಸ್ವರೂಪ ಸ್ವಲ್ಪ ಭಿನ್ನತೆಯಿದೆ. ಕಲಾವಿದ ಮೊದಲು ಪ್ರೇಕ್ಷಕನಾಗಿ ಪಾತ್ರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು, ಭಾಷಾ ಪ್ರೌಡಿಮೆಯ ಅಭ್ಯಾಸ ಮತ್ತು ಅಧ್ಯಯನ ಮಾಡಿಲ್ಲದಿದ್ದರೆ...

Close