ಕರಾವಳಿ ಕರ್ನಾಟಕ ವರ್ತಮಾನದ ನೋಟ

ಕಟೀಲು : ಕೃಷಿಯಾಧರಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಸೇವಾ ಕ್ಷೇತ್ರ ಹಾಗೂ ಸಂಸ್ಥೆಗಳು ಅಭಿವೃದ್ಧಿ ಹೊಂದಿದಂತೆ ಜಿಲ್ಲೆಯ ಜನ ಕೃಷಿಯಿಂದ ಹಿಮ್ಮುಖರಾಗಿ ಬೇರೆ ಕ್ಷೇತ್ರಗಳಿಗೆ ಕಾಲಿಡಲು ಪ್ರಾರಂಭಿಸಿದ್ದಾರೆ. ಆದರೆ ಕೃಷಿಗೆ ಹಿನ್ನಡೆಯಾದರೂ ಕುಚ್ಚಲ ಅಕ್ಕಿಯ ಬೆಲೆ ನಿರ್ಧರಿಸುವುದು ಮಾತ್ರ ನಮ್ಮ ಪಕ್ಕದ ಜಿಲ್ಲೆಯ ಹೆಬ್ರಿಯಲ್ಲಿ , ಗೇರು ಬೀಜ ಬೆಳೆಯುವುದು ಕಡಿಮೆ ಆದರೇ ವಿದೇಶಗಳಿಂದ ತರಿಸಿ ಅದನ್ನು ಸಂಸ್ಕರಿಸಿ ಪುನ: ವಿದೇಶಗಳಿಗೆ ರಪ್ತು ಮಾಡುವುದು ನಮ್ಮ ಗರಿಮೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥ ಎಲ್. ಎಚ್. ಮಂಜುನಾಥ್ 20 ನೇ ದ.ಕ.ಜಲ್ಲಾ ಸಾಹಿತ್ಯ ಸಮೇಳನದ ಕರಾವಳಿ ಕರ್ನಾಟಕ ವರ್ತಮಾನದ ನೋಟ ಎಂಬ ಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಕನ್ನಡ ಮಾದ್ಯಮ ಉಳಿಸಬೇಕಾಗಿದೆ, ಟಿ.ವಿ ಮಾಧ್ಯಮ, ಮೊಬಲ್, ಇಂಟರ್‌ನೆಟ್‌ನಿಂದಾಗಿ ಸಂಸ್ಕೃತಿ ಸಂಸ್ಕಾರ ನಾಶವಾಗಿದೆ. ಈ ಬಗ್ಗೆ ಚಿಂತನೆ ಅಗತ್ಯ ಎಂದರು .
ಪತ್ರಕರ್ತ ಬಾಲಕೃಷ್ಣ ಪುತ್ತಿಗೆ ಮಾತನಾಡಿ ಸಂಸ್ಕೃತಿ- ಸಮಾಜ ಬಗ್ಗೆ ಮಾತನಾಡಿ ಮೊಬೈಲ್ ಪೋನ್‌ಗಳಿಂದ ಅಪಾಯ ಜಾಸ್ತಿಯಾಗುತ್ತಿದೆ ಇದರಿಂದಾಗಿ ನಮ್ಮ ಸಂಸ್ಕೃತಿ ಹಾಗೂ ಸಾಮಾಜಿಕವಾಗಿ ದೊಡ್ಡ ಪರಿಣಾಮ ಬೀರಬಲ್ಲದು ಎಂದು ಹೇಳಿದರು. ಚಲನಚಿತ್ರನಿರ್ದೇಶಕ ಕೃಷ್ಣಪ್ಪ ಉಪ್ಪೂರು ಮತ್ಸೋದ್ಯಮದ ಬಗ್ಗೆ ಮಾತನಾಡಿ ಸರಕಾರದಿಂದ ಮತ್ಸೋದ್ಯಮಕ್ಕೆ ಹೆಚ್ಚಿನ ಸವಲತ್ತು ನೀಡಿಲ್ಲ, ಸಾಕಷ್ಟು ಸಂಖ್ಯೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಜನರು ಸಾಕಷ್ಟು ನಷ್ಟ ಅನುಭವಿಸಿದ್ದರೂ ಒಂದೇ ಒಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕಂಡು ಬಂದಿಲ್ಲ ಎಂದು ಹೇಳಿದರು. ಆಕಾಶವಾಣಿ ಸಹಾಯಕ ನಿರ್ದೇಶಕ ಡಾ| ವಸಂತ ಕುಮಾರ ಪೆರ್ಲ ಬಹು ಭಾಷಾ ಪರಿಸರ ಬಗ್ಗೆ ಮಾತನಾಡಿದರು.
ಡಾ. ದಯಾಕರ್ ಉಜಿರೆ, ಸಮ್ಮೇಳನಾಧ್ಯಕ್ಷ ಡಾ. ಎನ್. ಸುಕುಮಾರ ಗೌಡ, ದ.ಕ.ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಉಪಸ್ಥಿತರಿದ್ದರು. ಕೆ. ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.

Kateel-30081503

Comments

comments

Comments are closed.

Read previous post:
Kateel-30081502
ಯಕ್ಷಗಾನ ಪಾತ್ರ ಆಕರ ಆಕಾರ

ಕಟೀಲು : 20ನೇ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ನ ಸಮ್ಮೇಳನದ ಸಮಾನಾಂತರ ವೇದಿಕೆ ಪದವೀಪೂರ್ವ ಕಾಲೇಜಿನ ಸದಾನಂದ ಆಸ್ರಣ್ಣ ವೇದಿಕೆಯಲ್ಲಿ ಉರ್ವ ಯಕ್ಷಾರಾಧನಾ ಕಲಾ ಕೇಂದ್ರ ಹಾಗೂ...

Close