ಕರಾವಳಿ ಕರ್ನಾಟಕ ಇತ್ತೀಚಿನ ಬೆಳವಣಿಗೆಗಳು

ಕಟೀಲು : 20ನೇ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಸಮ್ಮೇಳದ ಕೊನೆಯ ದಿನದ ಕರಾವಳಿ ಕರ್ನಾಟಕ ಇತ್ತೀಚಿನ ಬೆಳವಣಿಗೆಗಳು ಗೋಷ್ಠಿಯಲ್ಲಿ ಜಾನಪದ ವಿದ್ವಾಂಸ ಗಣೇಶ ಅಮೀನ್ ಸಂಕಮಾರ್ ಮಾತನಾಡಿ ಕರಾವಳಿಯ ಕೃಷಿ ಕ್ಷೇತ್ರದಲ್ಲಿ ಹಲವು ವರ್ಷಗಳ ಹಿಂದೆ 3000 ಕೋಣಗಳಿದ್ದರೆ ಈಗ ಬರೇ 300 ಮಾತ್ರ ಇರಬಹುದು. ಕೋಣಗಳ ಜಾಗಕ್ಕೆ ಟ್ರಾಕ್ಟರ್ ಟಿಲ್ಲರ್‌ಗಳು ಬಂದಿದೆ. ಕೃಷಿ ಕಾರ್ಯಕ್ಕಾಗಿ ಕೂಲಿ ಜನರು ಸಿಗುತ್ತಿಲ್ಲ ಜಾಗತೀಕರಣದ ದೆಸೆಯಿಂದ ಶ್ರಮ, ಜಾನಪದ, ಆಚರಣೆ ಸಂಸ್ಕೃತಿ ಸಲುಗಿ ಹೋಗುತ್ತಿದೆ. ಸಾವಯವ ಕೃಷಿ ವಿಧಾನ, ಜೀವನಪದ್ದತಿ ಕಾಣದೆ ಉತ್ಪನ್ನಗಳನ್ನು ಹೆಚ್ಚಿಸುವ ದೃಷ್ಟಿಯಲ್ಲಿ ರಾಸಾಯನಿಕ ಕೃಷಿ ವಿಧಾನಗಳಿಗೆ ಮಾರುಹೋಗಿ ಜನರಲ್ಲಿ ಆರೋಗ್ಯವೂ ಸಮಸ್ಯೆಯೂ ಕಾಡುತ್ತಿದೆ. ಮನೆಯಲ್ಲಿ ನಡೆಯುವ ಆಟಿ ಆಚರಣೆಗಳು ಉತ್ಸವದ ಸ್ವರೂಪ ಪಡೆದಿವೆ ಎಂದು ಹೇಳಿದರು

ಕೃಷಿ ಶಿಕ್ಷಣದಲ್ಲಿ ಎಡವಿದ್ದೇವೆ- ಚಿನ್ನಪ್ಪ ಗೌಡ
ಹಲವು ವರ್ಷಗಳ ಹಿಂದೆ ಕರಾವಳಿಯಲ್ಲಿ ಗದ್ದೆಗಳಿದ್ದು ಮನುಷ್ಯನಲ್ಲಿ ಹೆಚ್ಚಿನ ಇಳುವರಿ ಕಡಿಮೆ ಶ್ರಮದ ಫಲವಾಗಿ ಗದ್ದೆ ಹೋಗಿ ತೋಟ ಬಂದು ಈಗ ಅದೂ ಹೋಗುತ್ತಿರುವ ಸ್ಥಿತಿ ಬಂದಿದೆ. ಅದರೊಂದಿಗೆ ಸಂಸ್ಕೃತಿಯೂ ಪಲ್ಲಟಗೊಂಡಿದೆ. ಕೃಷಿ ಮತ್ತು ಶಿಕ್ಷಣದ ನಿರ್ವಹಣೆಯಲ್ಲಿ ಎಡವಿದ್ದೇವೆ. ಯುವ ಪೀಳಿಗೆಯಲ್ಲಿ ಕೃಷಿಯ ಬಗ್ಗೆ ನಿರ್ಲಕ್ಷ ಹೆಚ್ಚಾಗಿದೆ ಜಡ್ಡುಗಟ್ಟಿದ ಶಿಕ್ಷಣ ವ್ಯಾಪಾರೀಕರಣವಾಗಿದೆ. ಎಂದು ಸಂಶೋಧಕರು ಮತ್ತು ಪ್ರಾಧ್ಯಾಪಕರಾದ ಡಾ. ಚಿನ್ನಪ್ಪ ಗೌಡ ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಕರಾವಳಿ ಕರ್ನಾಟಕ ಇತ್ತೀಚಿನ ಬೆಳವಣಿಗೆಗಳು ಗೋಷ್ಟಿಯಲ್ಲಿ ಮಾತನಾಡಿದರು.
ತಂದೆ ತಾಯಿ ಹಾಗೂ ವೃದ್ಧರನ್ನು ವೃದ್ಧಾಶ್ರಮಕ್ಕೆ ತಳ್ಳುವ ಶಿಕ್ಷಣ ಬೇಡ. ಎಲ್ಲರಿಗೂ ಮಾನ್ಯತೆ ನೀಡುವ ಸಂಸ್ಕಾರಯುತ ಶಿಕ್ಷಣ ಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಕುತ್ತು ಬಂದಿರುವುದು ಭಾಷೆಯ ಉಳಿವಿಗೂ ತೊಂದರೆ. ಎಂದು ಶಿಕ್ಷಣ ಕ್ಷೇತ್ರದ ಬಗ್ಗೆ ಮಾತನಾಡಿದ ಸೋಂದಾ ಭಾಸ್ಕರ ಭಟ್ ಹೇಳಿದರು.
ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಟೀಲು ದೇವಳ ಪದವಿಪೂರ್ವ ಕಾಲೇಜು ಪ್ರಿನ್ಸ್‌ಪಾಲ್ ಜಯರಾಮ ಪೂಂಜ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸತೀಶ ಬಿ. ಮತ್ತಿತರರು ಉಪಸ್ಥಿತರಿದ್ದರು.
ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Kateel-30081501

Comments

comments

Comments are closed.

Read previous post:
Kateel-2908201511
ಪುಸ್ತಕ ಮಳಿಗೆ ಬಳಿಗೆ ಮಕ್ಕಳು

ಕಿನ್ನಿಗೋಳಿ: ಪುಸ್ತಕಗಳ ಮಳಿಗೆಗೆ ಮೊದಲ ದಿನ ಮಕ್ಕಳ ದಂಡೇ ಆಗಮಿಸುತ್ತಿದ್ದು ಸಾಹಿತ್ಯಾಸಕ್ತ ಅಭಿಮಾನಿಗಳು ಶನಿವಾರ ಭಾನುವಾರ ಭೇಟಿ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಪುಸ್ತಕ ಮಳಿಗೆಯ ಮಾರಾಟಗಾರರು ಗ್ರಾಹಕರ ಬರುವಿಕೆಗೆ...

Close