ದೇಗುಲಗಳ ಸಾನ್ನಿಧ್ಯ ಕ್ಷೀಣವಾಗುತ್ತಿದೆ

ಕಟೀಲು : ಇತ್ತೀಚಿನ ವರ್ಷಗಳಲ್ಲಿ ಅವಸರದ ಅವದಿಗೆ ಮುನ್ನ ದೇವಳಗಳ ನಿರ್ಮಾಣದಿಂದ ದೇವಾಲಯಗಳ ಸಾನ್ನಿಧ್ಯತೆ ಕ್ಷೀಣವಾಗುತ್ತಿದೆ. ದೇವಳಗಳಲ್ಲಿ ಐರಾನ್, ರೌ, ಕಹಳೆಯಂತಹ ವಾದ್ಯಗಳು ನಿಧನವಾಗಿ ನೇಪಥ್ಯಕ್ಕೆ ಸರಿಯುತ್ತಿದೆ. ಅವುಗಳ ದಾಖಲೀಕರಣವೂ ಆಗಿಲ್ಲ ಕಲಿಯುವವರೂ ಇಲ್ಲದಿರುವುದು ಖೇದಕರ ಸಂಗತಿ
ದೇವಾಲಯಗಳಲ್ಲಿ ಚೆಂಡೆ ಸುತ್ತು, ಸೂರ‍್ಯ ಸುತ್ತು, ಭೂತಬಲಿಯಂತಹ ಸಂಪ್ರದಾಯಗಳೂ ಸರಿಯಾಗಿ ಆಗುತ್ತಿಲ್ಲ ಅಥವಾ ಇಲ್ಲವಾಗಿವೆ. ಮನವನ ಪ್ರಗತಿಪರ ಆಲೋಚನೆಗಳಿಂದಾಗಿ ಗೋಮೂತ್ರ ಗೋಮಯ, ಶುದ್ಧ ಹಾಲು ಕೂಡ ದೇವಸ್ಥಾನಗಳಲ್ಲಿ ಲಭ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಎಂದು ಪಂಜ ಭಾಸ್ಕರ ಭಟ್ ಹೇಳಿದರು.
ಕಟೀಲಿನಲ್ಲಿ ನಡೆಯುತ್ತಿರುವ 20ನೇ ದ.ಕ. ಜಿಲ್ಲಾ ಸಮ್ಮೇಳನದ ಎರಡನೇ ದಿನದ ತುಳುನಾಡಿನ ವಾಸ್ತು ಸ್ವರೂಪ ಮತ್ತು ವಿನ್ಯಾಸ ಗೋಷ್ಟಿಯಲ್ಲಿ ಮಾತನಾಡಿದರು.
ತುಳುನಾಡಿನ ಧಾರ್ಮಿಕ ವಾಸ್ತುವಿನ ಬಗ್ಗೆ ಮಾತನಾಡಿದ ಡಾ. ಪದ್ಮನಾಭ ಭಟ್ ದೇವಳಗಳು ಶಾಪಿಂಗ್ ಮಾಲ್‌ಗಳಂತಾಗುತ್ತಿವೆ. ಅನಗತ್ಯ ಪ್ರಶ್ನೆಗಳನ್ನಿರಿಸಿ ಒಂದು ದೇವರು ಇದ್ದಲ್ಲಿ ಇನ್ನಷ್ಟು ದೇವರನ್ನು ಸೃಷ್ಟಿಸಲಾಗುತ್ತಿದೆ. ವಾಸ್ತು ವಿಜ್ಞಾನವೂ ಹೌದು, ತಂತ್ರಜ್ಞಾನವೂ ಹೌದು. ವಾಸ್ತು ಅಳವಡಿಕೆ ದಾರಿ ತಪ್ಪುತ್ತಿದೆ ಎಂದರು.
ತುಳುನಾಡಿನ ಗೃಹವಾಸ್ತುವಿನ ಬಗ್ಗೆ ಡಾ.ಪ್ರಕಾಶಚಂದ್ರ ಶಿಶಿಲ ಮಾತನಾಡಿದರು. ಜಿ.ಕೆ.ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.
Kateel-30081504

Comments

comments

Comments are closed.

Read previous post:
Kateel-30081503
ಕರಾವಳಿ ಕರ್ನಾಟಕ ವರ್ತಮಾನದ ನೋಟ

ಕಟೀಲು : ಕೃಷಿಯಾಧರಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಸೇವಾ ಕ್ಷೇತ್ರ ಹಾಗೂ ಸಂಸ್ಥೆಗಳು ಅಭಿವೃದ್ಧಿ ಹೊಂದಿದಂತೆ ಜಿಲ್ಲೆಯ ಜನ ಕೃಷಿಯಿಂದ ಹಿಮ್ಮುಖರಾಗಿ ಬೇರೆ ಕ್ಷೇತ್ರಗಳಿಗೆ ಕಾಲಿಡಲು ಪ್ರಾರಂಭಿಸಿದ್ದಾರೆ. ಆದರೆ...

Close