ಯಕ್ಷಗಾನ ಪಾತ್ರ ಆಕರ ಆಕಾರ

ಕಟೀಲು : 20ನೇ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ನ ಸಮ್ಮೇಳನದ ಸಮಾನಾಂತರ ವೇದಿಕೆ ಪದವೀಪೂರ್ವ ಕಾಲೇಜಿನ ಸದಾನಂದ ಆಸ್ರಣ್ಣ ವೇದಿಕೆಯಲ್ಲಿ ಉರ್ವ ಯಕ್ಷಾರಾಧನಾ ಕಲಾ ಕೇಂದ್ರ ಹಾಗೂ ಕಟೀಲು ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ನಡೆದ ಯಕ್ಷೆಪಾಸನಾ ಶಿಬಿರದ ಯಕ್ಷಗಾನ ಮತ್ತು ತಾಳಮ್ದದಲೆಯಲ್ಲಿ ಪಾತ್ರ ಆಕರ ಆಕಾರ ಗೋಷ್ಠಿ ಭಾನುವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಯಕ್ಷಗನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಹಿಂದಿನ ವರ್ತಮಾನವೇ ಪುರಾಣ ಕನ್ನಡದಲ್ಲಿ ಸಾಕಷ್ಟು ಸಂಸ್ಕ್ರತ ಪದಗಳಿವೆ. ಯಕ್ಷಗಾನ ತಾಳಮದ್ದಲೆಗಳ ಪ್ರಧನ ಆಕರ ಪ್ರಸಂಗವಗಿದೆ. ಯಕ್ಷಗಾನದಲ್ಲಿ ಒಂದು ಸೂತ್ರದಿಂದ ಹಲವಾರು ರೂಪ ಭಾವನೆಗಳನ್ನು ವ್ಯಕ್ತಪಡಿಸಬಹುದು. ಎಂದರು.
ಸಂಪನೂಲ ವ್ಯಕ್ತಿ ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ ಅವರು ಪಾತ್ರಗಳ ಔಚಿತ್ಯ ಅರಿತು ಕಥೆಗೆ ಸಂಬಂದಪಟ್ಟ ಪ್ರಸಂಗದ ಒಳಗಡೆಯೇ ಪಾತ್ರಗಳನ್ನು ಮಾತನ್ನು ಸಾಹಿತ್ಯ ಭರಿತ ಎಲ್ಲರಿಗೂ ಅರ್ಥವಾಗುವಂತೆ ಬಳಸಬೇಕೆಂದು ಅಭಿಪ್ರಾಯ ಪಟ್ಟರು.
ಮೂಡಬಿದ್ರೆ ಯಕ್ಷ ಸಂಗಮದ ಶಾಂತಾರಾಮ ಕುಡ್ವ, ಸ್ವರೂಪ ಅಧ್ಯಯನ ಕೇಂದ್ರದ ಸುಮಾಡ್ಕರ್, ಯಕ್ಷಗಾನ ಕಲಾವಿದ ಶಶಿಕಾಂತ ಶೆಟ್ಟಿ, ಪುರುಷೋತ್ತಮ ಭಟ್ ನಿಡುವಜೆ, ಅಪೂರ್ವ ಸುರತ್ಕಲ್, ವಾದಿರಾಜ ಕಲ್ಲೂರಾಯ, ಯಕ್ಷರಾಧನಾ ಕಲಾ ಕೇಂದ್ರದ ಸುಮಂಗಲಾ ರತ್ನಾಕರ ರಾವ್ ಉಪಸ್ಥಿತರಿದ್ದರು.

Kateel-30081502

Comments

comments

Comments are closed.

Read previous post:
Kateel-30081501
ಕರಾವಳಿ ಕರ್ನಾಟಕ ಇತ್ತೀಚಿನ ಬೆಳವಣಿಗೆಗಳು

ಕಟೀಲು : 20ನೇ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಸಮ್ಮೇಳದ ಕೊನೆಯ ದಿನದ ಕರಾವಳಿ ಕರ್ನಾಟಕ ಇತ್ತೀಚಿನ ಬೆಳವಣಿಗೆಗಳು ಗೋಷ್ಠಿಯಲ್ಲಿ ಜಾನಪದ ವಿದ್ವಾಂಸ ಗಣೇಶ ಅಮೀನ್ ಸಂಕಮಾರ್ ಮಾತನಾಡಿ...

Close