ಯಕ್ಷೆಪಾಸನಾ ಶಿಬಿರ ಸಮಾರೋಪ

ಕಟೀಲು : ಕಲೆಯ ಬೆಳವಣಿಗೆಯಲ್ಲಿ ಯಕ್ಷಗಾನ ಸಾಹಿತ್ಯವೂ ಬಹುಮುಖ್ಯವಾಗಿದೆ. ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಎಲ್. ಸಾಮಗ ಹೇಳಿದರು.
ಭಾನುವಾರ ಸಂಜೆ ಕಟೀಲಿನಲ್ಲಿ ನಡೆದ 20ನೇ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷೆಪಾಸನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಯಕ್ಷಗಾನ ಛಾಂದಸ ಪ್ರಸಂಗಕರ್ತ ಗಣೇಶ ಕೊಲಕಾಡಿ ಅವರಿಗೆ ಯಕ್ಷಕಲಾರಾಧಕ ಹಾಗೂ ಅಮ್ಮುಂಜೆ ಮೋಹನ ಕುಮಾರ್ ಅವರಿಗೆ ಯುವ ಯಕ್ಷಕಲಾರಾಧಕ ಪ್ರಶಸ್ತಿಯನ್ನು ಯಕ್ಷರಾಧನಾ ಕಲಾ ಕೇಂದ್ರದ ವತಿಯಿಂದ ನೀಡಿ ಸನ್ಮಾನಿಸಲಾಯಿತು.
ಯಕ್ಷಗಾನ ಕಲಾವಿದ ರವಿ ಅಲೆವೂರಾಯ, ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಹಿರಿಯ ಭಾಗವತ ಕುಬಣೂರು ಶ್ರೀಧರ ರಾವ್, ಯಕ್ಷರಾಧನ ಸಂಸ್ಥೆಯ ರಾಧಾಕೃಷ್ಣ, ಸುಮಂಗಲಾ ರತ್ನಾಕರ ರಾವ್, ಡಾ. ಕವಿ ನಾರಾಯಣ ಶೆಟ್ಟಿ, ಸಾವಿತ್ರೀ ಎಸ್. ರಾವ್, ಪೂರ್ಣಿಮಾ ಯತೀಶ್ ಮತ್ತಿತರಿದ್ದರು

Kateel-30081505

Comments

comments

Comments are closed.

Read previous post:
Kateel-30081504
ದೇಗುಲಗಳ ಸಾನ್ನಿಧ್ಯ ಕ್ಷೀಣವಾಗುತ್ತಿದೆ

ಕಟೀಲು : ಇತ್ತೀಚಿನ ವರ್ಷಗಳಲ್ಲಿ ಅವಸರದ ಅವದಿಗೆ ಮುನ್ನ ದೇವಳಗಳ ನಿರ್ಮಾಣದಿಂದ ದೇವಾಲಯಗಳ ಸಾನ್ನಿಧ್ಯತೆ ಕ್ಷೀಣವಾಗುತ್ತಿದೆ. ದೇವಳಗಳಲ್ಲಿ ಐರಾನ್, ರೌ, ಕಹಳೆಯಂತಹ ವಾದ್ಯಗಳು ನಿಧನವಾಗಿ ನೇಪಥ್ಯಕ್ಕೆ ಸರಿಯುತ್ತಿದೆ. ಅವುಗಳ...

Close