ಶಿಕ್ಷಣ ನೀತಿಯನ್ನು ಬದಲಾಯಿಸ ಬೇಕು

ಮೂಲ್ಕಿ: ಓದಿನೊಂದಿಗೆ ಆಟ ಪಾಠ ಎನ್ನುವ ಶಿಕ್ಷಣವನ್ನು ನೀಡದಿದ್ದಲ್ಲಿ ಭವಿಷ್ಯದಲ್ಲಿ ಉತ್ತಮ ಕ್ರೀಡಾ ಸ್ಪೂರ್ತಿಗಳನ್ನು ನೀಡಲು ಸಾಧ್ಯವಿಲ್ಲ. ಸಾಹಿತ್ಯ, ಸಂಗೀತ, ಕಲೆಯ ಅಭಿರುಚಿ ಇಲ್ಲದವ ಪಶುವಿಗೆ ಸಮಾನ ಎನ್ನುವಂತಹ ಕಾಲವು ಬರಲಿದೆ ಈ ಹಿನ್ನಲೆಯಲ್ಲಿ ಶಿಕ್ಷಣ ನೀತಿಯು ಬದಲಾಗಬೇಕು ಎಂದು ಮಂಗಳೂರಿನ ಹಿರಿಯ ಚಾರ್ಟೆಡ್ ಅಕೌಂಟೆಟ್ ಎಸ್.ಎಸ್.ನಾಯಕ್ ಹೇಳಿದರು.
ಅವರು ಹಳೆಯಂಗಡಿಯ ಟಾರ್ಪೋಡೇಸ್ ಸ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಟೇಬಲ್ ಟೆನ್ನಿಸ್‌ನ ರಾಜ್ಯ ತಂಡದ ಆಯ್ಕೆಯ ಅರ್ಹತಾ ಸುತ್ತಿನ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪಂದ್ಯಾಟಕ್ಕೆ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಚಾಲನೆ ನೀಡಿದರು.
ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಹಳೆಯಂಗಡಿಯ ಟಾರ್ಪೋಡೇಸ್ ಸ್ಪೋರ್ಟ್ಸ್ ಕ್ಲಬ್‌ನ ಈಶಾನಿ ಹರೀಶ್, ಸಾತ್ವಿಕಾ ರಾವ್ ಮತ್ತು ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾದ ಜಿಲ್ಲೆಯ ನಾಗರಾಜ ಶೇಟ್‌ರನ್ನು ಸನ್ಮಾನಿಸಲಾಯಿತು.
ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷ ಮೋಹನದಾಸ, ಎಂಆರ್‌ಪಿಎಲ್ ಶಾಲೆಯ ಪ್ರಾಂಶುಪಾಲ ಆರ್.ಬಿ.ಮಾಥುರ್, ದ.ಕ.ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ.ಹರ್ಷಿತ್, ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಶನ್‌ನ ಜಿಲ್ಲಾ ಪ್ರತಿನಿಧಿ ಟಿ.ಜಿ.ಉಪಾಧ್ಯಾಯ, ಪ್ರಧಾನ ತೀರ್ಪುಗಾರ ಹರೀಶ್ ಪುತ್ರನ್, ಡಾ.ಅರವಿಂದ ಭಟ್, ನಾಗಭೂಷಣ್ ರೆಡ್ಡಿ, ಚಂದ್ರಕಾಂತ ಮರಾಠೆ, ರಾಜೇಶ್ ಶೆಟ್ಟಿ, ಸುನಿತಾ ರೋಡ್ರಿಗಸ್ ಹಾಜರಿದ್ದರು.
ಸಂಘಟಕ ಹಾಗೂ ಹಳೆಯಂಗಡಿಯ ಟಾರ್ಪೋಡೇಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿದರು, ರಾಜೇಶ್ವರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ದೇವೇಂದ್ರ ಶೆಟ್ಟಿ ವಂದಿಸಿದರು.
ನಾಲ್ಕು ದಿನಗಳಲ್ಲಿ ನಡೆಯುವ ಈ ಪಂದ್ಯಾಟವನ್ನು ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸೊಯೇಶನ್‌ನ ಜಂಟಿ ಸಹಕಾರದಲ್ಲಿ ನಡೆಸಲಾಗುತ್ತಿದ್ದು ವಿವಿಧ ವಿಭಾಗದಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಕೀಡಾಳುಗಳು ಭಾಗವಹಿಸಲಿದ್ದಾರೆ.

Mulki-3108201501 Mulki-3108201502

Comments

comments

Comments are closed.

Read previous post:
Kateel-30081505
ಯಕ್ಷೆಪಾಸನಾ ಶಿಬಿರ ಸಮಾರೋಪ

ಕಟೀಲು : ಕಲೆಯ ಬೆಳವಣಿಗೆಯಲ್ಲಿ ಯಕ್ಷಗಾನ ಸಾಹಿತ್ಯವೂ ಬಹುಮುಖ್ಯವಾಗಿದೆ. ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಎಲ್. ಸಾಮಗ ಹೇಳಿದರು. ಭಾನುವಾರ ಸಂಜೆ ಕಟೀಲಿನಲ್ಲಿ ನಡೆದ...

Close