ಪಾವಂಜೆ ನದಿ ತೀರದ ‘ತುದೆ ತುಲಿಪು’ ಕಾರ್ಯಕ್ರಮ

ಮೂಲ್ಕಿ: ಕರಾವಳಿಗರ ಶ್ರಮ ಜೀವನ ಸಮುದ್ರ ಮತ್ತು ನದಿಗಳ ಸಂಬಂಧವನ್ನು ತಿಳಿಸುತ್ತದೆ, ಕೃಷಿ ಮತ್ತು ಮೀನುಗಾರಿಕೆಯ ಪ್ರಧಾನ ವೃತ್ತಿ ಬದುಕನ್ನು ತಿಳಿಹೇಳುವ ಹಂತದಲ್ಲಿರುವ ನಾವು ಗತಕಾಲದ ಇತಿಹಾಸವನ್ನು ಪ್ರಚಾರ ಪಡಿಸುವ ಮೂಲಕ ಈ ಬಾರಿ ಕರಾವಳಿ ಉತ್ಸವದಲ್ಲಿ ಪಾವಂಜೆಯ ನದಿ ತೀರದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಕೆ. ಅಭಯಚಂದ್ರ ಹೇಳಿದರು.
ಅವರು ಪಾವಂಜೆಯ ಅಗೋಳಿ ಮಂಜಣ ಜಾನಪದ ಕೇಂದ್ರ ಮತ್ತು ಮೂಲ್ಕಿ ಪ್ರೆಸ್ ಕ್ಲಬ್‌ನ ಜಂಟಿ ಸಂಯೋಜನೆಯಲ್ಲಿ ಭಾನುವಾರ ನಂದಿನಿ ನದಿ ತಟದ ರಾಮಪ್ಪ ಪೂಜಾರಿ ಕಟ್ಟದ ಪುಣಿಯಲ್ಲಿ ‘ತುದೆ ತುಲಿಪು’ ಎನ್ನುವ ತುಳು ಬದುಕಿನ ವಿಶಿಷ್ಠ ಕಾರ್ಯಕ್ರಮವನ್ನು ನದಿ ದಡದ ರಕ್ಷಣಾ ಗೋಡೆಯಾಗಿರುವ ಕಾಂಡ್ಲ ಗಿಡವನ್ನು ನೆಟ್ಟು ಉದ್ಘಾಟಿಸಿ ಮಾತನಾಡಿದರು.
ಕಪ್ಪೆಯನ್ನು ನದಿಗೆ ಬಿಟ್ಟು ಚಿಂತನಾ ಗೋಷ್ಠಿಗೆ ಚಾಲನೆ ನೀಡಲಾಯಿತು. ದೋಣಿ ಸವಾರಿಯಲ್ಲಿಯೇ ನಡೆದ ಮಳೆ ಮತ್ತು ಹೊಳೆ ಎಂಬ ವಿಶೇಷ ಚಿಂತನಾ ಗೋಷ್ಠಿಯಲ್ಲಿ ಉದಯವಾಣಿ ಸಹ ಉಪಾಧ್ಯಕ್ಷ ಆನಂದ ಕೆ. ಮಾತನಾಡಿ ಪ್ರಕೃತಿಯೇ ಜನ ಶಿಕ್ಷಣ ಮಾಧ್ಯಮ ಆಗಿದೆ, ನದಿಯನ್ನು ಉಳಿಸಲು ಕಟ್ಟು ನಿಟ್ಟಿನ ಕಾನೂನು ಜಾರಿಯಾಗಬೇಕು, ನೀರಿನ ಬಗ್ಗೆ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮಾಧ್ಯಮಗಳು ವೇದಿಕೆ ನೀಡಲಿ ಎಂದರು.
ವಿಜಯ ಕರ್ನಾಟಕದ ಸ್ಥಾನೀಯ ಸಂಪಾದಕ ಯು.ಕೆ.ಕುಮಾರ್‌ನಾಥ್ ಮಾತನಾಡಿ ಜೀವನದಿಯ ಬಗ್ಗೆ ನಮ್ಮೆಲ್ಲ ವಿಶ್ಲೇಷಣೆಗಳು ಕಾರ್ಯರೂಪಕ್ಕೆ ಬಂದಲ್ಲಿ ಮಾತ್ರ ನದಿಗಳನ್ನು ಉಳಿಸಬಹುದು, ಈ ಬಾರಿ ಕರಾವಳಿಯಲ್ಲಿಯೂ ಮಳೆ ಪ್ರಮಾಣ ಕಡಿಮೆ ಇದೆ ಇದು ಭವಿಷ್ಯದಲ್ಲಿ ಜಲಕ್ಷಾಮದ ಮುನ್ಸೂಚನೆ ಎಂದು ಹೇಳಿದರು.
ಪಿಂಗಾರ ಪತ್ರಿಕೆಯ ರೆಮೆಂಡ್ ತಾಕೋಡೆ, ಆಧ್ಯಾತ್ಮಿಕ ಚಿಂತಕ ರಾಧಾಕೃಷ್ಣ ಕೆ, ಸಾಮಾಜಿಕ ಹೋರಾಟಗಾರರಾದ ವಿದ್ಯಾ ದಿನಕರ್, ನ್ಯಾಯವಾದಿ ಮಧುಕರ ಅಮಿನ್ ಶಿಬರೂರು, ಆಕಾಶವಾಣಿಯ ಡಾ.ಸದಾನಂದ ಪೆರ್ಲ, ಜಾನಪದ ಚಿಂತಕ ಡಾ. ವೈ.ಎನ್. ಶೆಟ್ಟಿ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.
ಶಿಕ್ಷಣ ತಜ್ಞ ಸಾದು ಪೂಜಾರಿ ಕುಳಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ನಿನಾದ ಚಾರಿಟೇಬಲ್ ಟ್ರಸ್ಟ್ ನ ಕಡಂಬೋಡಿ ಮಹಾಬಲ ಪೂಜಾರಿ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ರಾಜ್ಯ ದೇವಾಡಿಗರ ಸಂಘದ ದೇವದಾಸ್, ಉದ್ಯಮಿ ರಾಜಾರಾಮ ಸಾಲ್ಯಾನ್, ಕಲ್ಲೂರು ನಾಗೇಶ್, ಮಾಧ್ಯಮ ಪ್ರತಿನಿಧಿಗಳು, ಜಾನಪದ ಕೇಂದ್ರದ ಚಂದ್ರಶೇಖರ ಸುವರ್ಣ, ಎಚ್. ವಸಂತ ಬೆರ್ನಾರ್ಡ್, ಯೋಗೀಶ್ ಕೋಟ್ಯಾನ್, ದೀಪಕ್ ಪೆರ್ಮುದೆ, ಜಯ ದೇವಾಡಿಗ, ಜ್ಯೋತಿ ಚೆಳಯರು, ವಿಜಯಕುಮಾರ್ ಕುಬೆವೂರು, ಗಗನ್ ಸುವರ್ಣ, ಈಶ್ವರ ದೇವಾಡಿಗ, ದಿನೇಶ್ ಕೋಟ್ಯಾನ್ ಕಟ್ಟದ ಮನೆ, ಜಯಂತಿ ಸಂಕಮಾರ್, ಯಶೋಧರ ಸಾಲ್ಯಾನ್ ಮತ್ತಿತರರು ಉಪಸ್ಥರಿದ್ದರು.
ಅಗೋಳಿ ಮಂಜಣ ಜಾನಪದ ಕೇಂದ್ರದ ಗೌರವಾಧ್ಯಕ್ಷ ಚಂದ್ರಶೇಖರ ನಾನಿಲ್ ಸ್ವಾಗತಿಸಿದರು, ಅಧ್ಯಕ್ಷ ಹಾಗೂ ಸಂಘಟಕ ಡಾ.ಗಣೇಶ್ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು, ಮೂಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು ವಂದಿಸಿದರು.

Narendra Kerekadu

DSC_0651 DSC_0660 DSC_0670 DSC_0689 DSC_0707 DSC_0728 DSC_0778 (1) DSC_0778

Comments

comments

Comments are closed.

Read previous post:
Mulki-3108201502
ಶಿಕ್ಷಣ ನೀತಿಯನ್ನು ಬದಲಾಯಿಸ ಬೇಕು

ಮೂಲ್ಕಿ: ಓದಿನೊಂದಿಗೆ ಆಟ ಪಾಠ ಎನ್ನುವ ಶಿಕ್ಷಣವನ್ನು ನೀಡದಿದ್ದಲ್ಲಿ ಭವಿಷ್ಯದಲ್ಲಿ ಉತ್ತಮ ಕ್ರೀಡಾ ಸ್ಪೂರ್ತಿಗಳನ್ನು ನೀಡಲು ಸಾಧ್ಯವಿಲ್ಲ. ಸಾಹಿತ್ಯ, ಸಂಗೀತ, ಕಲೆಯ ಅಭಿರುಚಿ ಇಲ್ಲದವ ಪಶುವಿಗೆ ಸಮಾನ ಎನ್ನುವಂತಹ...

Close