ಮಿತ್ತಬೈಲ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಕಟೀಲು ಪೆಟ್ರೋಲ್ ಪಂಪಿನ ಬಳಿಯಿಂದ ಮಿತ್ತಬೈಲ್‌ವರೆಗಿನ ರಸ್ತೆಯನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅನುದಾನದ ೫ಲಕ್ಷ ಹಾಗೂ ಕಟೀಲು ಜಿ.ಪಂ ಸದಸ್ಯ ಈಶ್ವರ್ ಕಟೀಲ್ ಅನುದಾನದ ೭ಲಕ್ಷ ರೂ ಗಳ ರಸ್ತೆಯನ್ನು ಭಾನುವಾರ ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಕಟೀಲು ಜಿ.ಪಂ ಸದಸ್ಯ ಈಶ್ವರ್ ಕಟೀಲ್, ಕೊಂಡೆಮೂಲ ಗಾ. ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ, ಅರುಣ್ ಕುಮಾರ್, ದಾಮೋದರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಕಿಟ್ಟಣ್ಣ ಶೆಟ್ಟಿ ಶಿಬರೂರು ಗುತ್ತು, ದೇವಪ್ರಸಾದ್ ಪುನರೂರು, ಆದರ್ಶ್ ಶೆಟ್ಟಿ ಎಕ್ಕಾರು, ದೊಡ್ಡಯ್ಯ ಮೂಲ್ಯ, ಗುರುರಾಜ್ ಮಲ್ಲಿಗೆಯಂಗಡಿ, ಲೋಕಯ್ಯ ಸಾಲ್ಯಾನ್, ಪ್ರಸಾದ್ ಮಿತ್ತಬೈಲು, ದೇವಿ ಪ್ರಸಾದ್ ಕೊಡೆತ್ತೂರು, ದಯಾನಂದ ಶೆಟ್ಟಿ, ಗಣೇಶ್ ಶೆಟ್ಟಿ ಮಿತ್ತಬೈಲ್, ಅಭಿಲಾಷ್ ಶೆಟ್ಟಿ, ಸುಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01091501

Comments

comments

Comments are closed.

Read previous post:
Mulki-0109201510
ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಜಾಥಾ

ಮೂಲ್ಕಿ : ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆಯ ವಿದ್ಯಾರ್ಥಿಗಳಿಂದ ಕಿಲ್ಪಾಡಿ ಶಾಲೆಯಿಂದ ಕಾರ್ನಾಡು ಜಂಕ್ಷನ್ ವರೆಗೆ ಜರಗಿದ ರಸ್ತೆ ಸುರಕ್ಷಾ ಸಪ್ತಾಹ ಜಾಥವನ್ನು...

Close