ಅತಿಕಾರಿ ಬೆಟ್ಟು ಗ್ರಾಮ ಸಭೆ

ಮೂಲ್ಕಿ: ಅಂಗರಗುಡ್ಡೆ ಬಳಿ ರಸ್ತೆ ಒತ್ತುವರಿ ಸಮಸ್ಯೆ, ನಿಗದಿತ ಸಮಯಕ್ಕೆ ಬಾರದ ಗ್ರಾಮ ಕರಣಿಕರು, ಪಂಚಾಯಿತಿ ಕಾಮಗಾರಿ ವೀಕ್ಷಣೆ ಸಮಿತಿ ನಿರ್ಮಾಣಕ್ಕೆ ಆಗ್ರಹ, ದೂರು ಕೊಟ್ಟರೂ ಬಾರದ ಮೆಸ್ಕಾಂ ಸಿಬ್ಬಂದಿ ಕೆಲವು ಅಧಿಕಾರಿಗಳ ಗೈರು ಹಾಜರಿಯೊಂದಿಗೆ ಅತಿಕಾರಿ ಬೆಟ್ಟು ಗ್ರಾಮದ 2015-16 ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅತಿಕಾರಿಬೆಟ್ಟು ಕೆ.ಪಿ.ಎಸ್.ಕೆ ಸ್ಮಾರಕ ಪ್ರೌಢ ಶಾಲೆಯ ಸಭಾಂಗಣದಲ್ಲಿ ಅತಿಕಾರಿ ಬೆಟ್ಟು ಗ್ರಾಮ ಪಂ ಅಧ್ಯಕ್ಷೆ ಪೂರ್ಣಿಮಾ ವಸಂತ್ ಅಧ್ಯಕ್ಷತೆಯಲ್ಲಿ ಜರುಗಿತು.
ಅಂಗರಗುಡ್ಡೆ ವಸತಿ ನಿವೇಶನಗಳಲ್ಲಿ ಕೆಲವರು ರಸ್ತೆ ಒತ್ತುವರಿ ಮಾಡಿ ಕಟ್ಟಡ ಕಂಪೌಂಡ್ ನಿರ್ಮಿಸಿದ್ದಾರೆ ಈ ಬಗ್ಗೆ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಶೆಟ್ಟಿಗಾರ್ ದೂರಿದರು. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಕಂದಾಯ ಇಲಾಖೆ ಅಧಿಕಾರಿ ತಿಳಿಸಿದರು. ಪಕ್ಕದ ಮನೆಯವರ ತೆಂಗಿನ ಕಾಯಿ ಮನೆ ಮಾಡಿಗೆ ಬಿದ್ದು ಸಮಸ್ಯೆಯಾಗುತ್ತಿದೆ ನಮ್ಮ ದೂರಿಗೆ ಆ ಮನೆಯವರು ಸ್ಪಂದಿಸುತ್ತಿಲ್ಲ ಪ್ರಕ್ರತಿ ವಿಕೋಪ ನೆಲೆಯಲ್ಲಿ ಪರಿಹಾರ ಸಿಗುವುದೇ ಎಂದು ಕೃಷ್ಣ ಶೆಟ್ಟಿಗಾರ್ ಪ್ರಶ್ನಿಸಿದರು. ಕಾರಿ ಬಿದ್ದರೆ ಸಿಗದು ಮರವೇ ಬಿದ್ದರೆ ಸಿಗಬಹುದು ಎಂದು ಅಧಿಕಾರಿ ಉತ್ತರಿಸಿದರು. ಅತಿಕಾರಿಬೆಟ್ಟು ಗ್ರಾಮಕ್ಕೆ ವಾರದಲ್ಲಿ ಮೂರು ಬಾರಿ ಗ್ರಾಮ ಕರಣಿಕರು ಬರುವಂತೆ ಹಿಂದೆ ಕಿಲ್ಪಾಡಿ ಗ್ರಾಮ ಸಭೆಯಲ್ಲಿ ವಿನಂತಿಸಲಾಗಿತ್ತು ಆದರೂ ಅವರು ಗ್ರಾಮ ಸಭೆಗೆ ಮತ್ತು ಅವರ ಕಛೇರಿಗೂ ಬರುತ್ತಿಲ್ಲ ಈ ಬಗ್ಗೆ ಕ್ರಮ ಮೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಫೋನ್ ಮೂಲಕ ಕರೆಸುವುದಾಗಿ ಜಿಪಂ ಸದಸ್ಯರು ತಿಳಿಸಿದರು. ಜಿಲ್ಲೆ ತಾಲೂಕು ಮತ್ತು ಗ್ರಾಮ ಪಂಚಾಯತಿ ಸೇರಿ ಕಾಮಗಾರಿ ನಿರ್ವಹಿಸುವ ಸಂದರ್ಭ ಕಾಮಗಾರಿ ಕಳಪೆಯಾಗದಂತೆ ಗ್ರಾಮಸ್ಥರನ್ನು ಒಳಗೊಂಡ ಉಸ್ತುವಾರಿ ಸಮಿತಿ ನೇಮಿಸಬೇಕು ಎಂದು ತಿಮ್ಮಪ್ಪ ಶೆಟ್ಟಿ ಆಗ್ರಹಿಸಿದರು.ಈವರೆಗೆ ಕಾಮಗಾರಿಗಳು ಸರಿಯಾಗಿ ಇವೆ ಮುಂದಿನ ದಿನಗಳಲ್ಲಿ ಸಮಸ್ಯೆಯಾದರೆ ಕ್ರಮ ಕೈಗೊಳ್ಲಲಾಗುವುದು ಎಂದು ಜಿಪಂ.ಸದಸ್ಯೆ ಆಶಾ ರತ್ನಾಕರ ಸುವರ್ಣ ಉತ್ತರಿಸಿದರು. ಅಂಗರ ಗುಡ್ಡೆ ಪ್ರದೇಶದಲ್ಲಿ ಬಹಳಷ್ಟು ಮಕ್ಕಳಿದ್ದು ಅಲ್ಲಿ ಅಂಗನವಾಡಿ ನಿರ್ಮಿಸಬೇಕು ಎಂಬ ಗ್ರಾಮಸ್ಥರ ವಿನಂತಿಗೆ ಸಂಭದಿತ ಇಲಾಖೆ ಸ್ಪಂದಿಸುತ್ತಿಲ್ಲ ಶೀಘ್ರ ಅಂಗನವಾಡಿ ಪ್ರಾರಂಭಿಸುವಂತೆ ಕೃಷ್ಣ ಶೆಟ್ಟಿಗಾರ್ ಆಗ್ರಹಿಸಿದರು.
ತೋಟಗಾರಿಕಾ ಅಧಿಕಾರಿ ಮಾಹಿತಿ ನೀಡಿ,ಕಾಳುಮೆಣಸು,ಅಡಿಕೆ,ಗೇರು ತೋಪುಗಳನ್ನು ಮಾಡುವವರಿಗೆ ಸರ್ಕಾರಿ ಸಹಾಯಧನ ಲಭಿಸುವುದು. ಕೊಳೆ ರೋಗ ನಿವಾರಣೆ ಸಿಂಪಡನೆಗಾಗಿ ಸಹಾಯಧನ ಮತ್ತು ಮಾವು ಸಪೋಟಾ ಗಿಡಗಳನ್ನು ರೈತರಿಗೆ ನೀಡಲಾಗುವುದು ಎಂದರು.
ರೋಗ್ಯ ಇಲಾಖೆ ವತಿಯಿಂದ ಸಿಬ್ಬಂದಿ ಮಾಹಿತಿ ನೀಡಿ, ಮಳೆಯ ಕಾಶರಣ ಮಲೇರಿಯ ಗಣನೀಯವಾಗಿ ಇಳಿಮುಖವಾಗಿದ್ದರೂ 3 ಪ್ರಕರಣ ಪತ್ತೆಯಾಗಿದೆ ಗ್ರಾಮಸ್ಥರು ಮನೆಯ ವಠಾರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮನೆಯಲ್ಲಿ ಗರ್ಬಿಣಿಯರಿದ್ದರೆ ಇಲಾಖಾ ಸಿಬ್ಬಂದಿಗೆ ಮಾಹಿತಿ ನೀಡಿದಲ್ಲಿ ಅವರಿಗೆ ತಾಯಿ ಕಾರ್ಡು ನೀಡಲಾಗುವುದು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ತಾಯಿ ಕಾರ್ಡಿನಿಂದ ವಿಶೇಷ ಸೌಲಭ್ಯಗಳು ಲಭಿಸಲಿವೆ ಎಂದರು. ಭಾಗ್ಯಲಕ್ಷ್ಮಿ ಯೀಜನೆಗೆ ಸೇರ್ಪಡೆಗೊಳ್ಳುವ ಮಕ್ಕಳ ತಂದೆ ತಾಯಿ ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸಿರಬೇಕು ಎಂಬ ಮಾಹಿತಿ ನೀಡಿದರು.
ಬಿಪಿಎಲ್ ಕಾರ್ಡು ಅರ್ಹರಿಗೆ ನೀಡಲಾಗಿಲ್ಲ ಈ ಬಗ್ಗೆ ಹೆಚ್ಚಿನ ಸರ್ವೇಯಾಗಿ ಅರ್ಹರನ್ನು ಗುರುತಿಸಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು ಈ ಬಗ್ಗೆ ಮಾತನಾಡಿದ ಕಾಂದಾಯ ಅಧಿಕಾರಿ, ಈ ಬಗ್ಗೆ ಪರಿಶೀಲನೆ ಮಾಡಿ ಅರ್ಹರು ಕಾರ್ಡಿನಿಂದ ವಂಚಿತರಾಗಿದ್ದರೆ ಅವರ ಬಗ್ಗೆ ಹೆಚ್ಚಿನ ಮನವಿ ಮೂಲಕ ಸರಿಪಡಿಸಲಾಗುವುದು ವಿಧವಾ ವೇತನ ಹಾಗೂ ಇನ್ನಿತರ ವೇತನಗಳ ಬಗ್ಗೆಯೂ ಪರಿಶೀಲನೆ ನಡೆಸಿ ಅರ್ಹರಿಗೆ ವಿತರಿಸಿಲಾಗುವುದು ಎಂದರು.
ಶಿಕ್ಷಕಿ ಮೇರಿ.ಸಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಬಹಳಷ್ಟು ಸೌಕರ್ಯಗಳಿದ್ದರೂ ಮಕ್ಕಳ ಕೊರತೆ ಇದೆ ಮಕ್ಕಳು ಶಾಲೆಗೆ ಬರಲಿಲ್ಲ ಎಂದಾದರೆ ಶಾಲೆ ಮುಚ್ಚಲಾಗುವುದು ಇದು ಊರಿನ ಘನತೆಗೆ ಕುಂದು ತರುವುದರಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಬಗ್ಗೆ ಗ್ರಾಮಸ್ಥರು ಮನಸ್ಸು ಮಾಡಬೇಕು ಎಂದರು.
ವಲಯ ಅರಣ್ಯಾಧಿಕಾರಿ ಮನೋಹರ್ ನೋಡಲ್ ಅಧಿಕಾರಿಯಾಗಿದ್ದರು. ಜಿಲ್ಲಾ ಪಂಚಾಯತಿ ಸದಸ್ಯೆ ಆಶಾ ರತ್ನಾಕರ ಸುವರ್ಣ,ತಾ.ಪಂ.ಸದಸ್ಯೆ ವನಿತಾ ಉದಯ ಅಮೀನ್,ತೋಟಗಾರಿಕೆ ಅಧಿಕಾರಿ ವಿಶಾಂತ್ ಎಚ್, ಶಿಶು ಅಭಿವೃದ್ಧಿ ಅಧಿಕಾರಿ ಕಿಶೋರಿ,ಶಾಲಾ ಮುಖ್ಯ ಶಿಕ್ಷಕ ನಾಗಭೂಷಣ ರಾವ್ ಉಪಸ್ಥಿತರಿದ್ದರು.ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯೋಗೀಶ್ ನಾನಿಲ್ ನಿರೂಪಿಸಿದರು.

Bhagyavan Sanil

Mulki-0109201509

Comments

comments

Comments are closed.

Read previous post:
DSC_0689
ಪಾವಂಜೆ ನದಿ ತೀರದ ‘ತುದೆ ತುಲಿಪು’ ಕಾರ್ಯಕ್ರಮ

ಮೂಲ್ಕಿ: ಕರಾವಳಿಗರ ಶ್ರಮ ಜೀವನ ಸಮುದ್ರ ಮತ್ತು ನದಿಗಳ ಸಂಬಂಧವನ್ನು ತಿಳಿಸುತ್ತದೆ, ಕೃಷಿ ಮತ್ತು ಮೀನುಗಾರಿಕೆಯ ಪ್ರಧಾನ ವೃತ್ತಿ ಬದುಕನ್ನು ತಿಳಿಹೇಳುವ ಹಂತದಲ್ಲಿರುವ ನಾವು ಗತಕಾಲದ ಇತಿಹಾಸವನ್ನು...

Close