ಮಕ್ಕಳಲ್ಲಿ ಮನೋಧೈರ್ಯ ನೀಡಬೇಕು

ಕಿನ್ನಿಗೋಳಿ :  ಭಿನ್ನ ಸಾಮರ್ಥ್ಯದ ಮಕ್ಕಳಲ್ಲಿ ಮನೋಧೈರ್ಯ, ಮಾನಸಿಕ ಪ್ರೋತ್ಸಾಹ ನೀಡಬೇಕು. ಅವರ ಆಸಕ್ತಿ, ಸಾಮರ್ಥ್ಯ ಗಮನಿಸಿ ಕ್ರಿಯಾಶೀಲರನ್ನಾಗಿ ಮಾಡಬೇಕು. ಎಂದು ಕಟೀಲು ದೇವಳ ಅರ್ಚಕ ಕೆ. ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ದ.ಕ-ಉಡುಪಿ ಜಿಲ್ಲೆ ಸೌತ್ ಕೆನರಾ ಫೊಟೋಗ್ರಾಫರ‍್ಸ್ ಅಸೋಸಿಯೇಶನ್‌ನ ರಜತ ಸಂಭ್ರಮದ ಪ್ರಯುಕ್ತ ಮೂಲ್ಕಿ ವಲಯ ವತಿಯಿಂದ ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ಭಿನ್ನ ಸಾಮರ್ಥ್ಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಮಂಗಳವಾರ ನಡೆದ ವಿಶೇಷ ಆಟೋಟ ಸ್ಪರ್ಧೆ-೨೦೧೫ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸೌತ್ ಕೆನರಾ ಫೊಟೋಗ್ರಾಫರ‍್ಸ್ ಅಸೋಸಿಯೇಶನ್(ರಿ),ದ.ಕ-ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ಕೆ ವಾಸುದೇವ ರಾವ್ ಆಧ್ಯಕ್ಷತೆ ವಹಿಸಿದ್ದರು.
ಸುರತ್ಕಲ್ ವಿಶೇಷ ಮಕ್ಕಳ ಶಾಲಾ ಮುಖ್ಯ ಶಿಕ್ಷಕಿ ಮೀರಾ ಸತೀಶ್ ಹಾಗೂ ಕಿನ್ನಿಗೋಳಿ ವಿಶೇಷ ಮಕ್ಕಳ ಶಾಲಾ ಮುಖ್ಯ ಶಿಕ್ಷಕಿ ರೇಶ್ಮಾ ಮಾರ್ಟಿಸ್ ಅವರನ್ನು ಸನ್ಮಾನಿಸಲಾಯಿತು.
ಆಟೋಟಗಳಲ್ಲಿ ವಿಜೇತರಾದ ಸುರತ್ಕಲ್ ಹಾಗೂ ಕಿನ್ನಿಗೋಳಿ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಎಸ್.ಕೆ.ಪಿ.ಎ ಜಿಲ್ಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಗುರುರಜ್ ಎಸ್. ಪೂಜಾರಿ, ಸುರತ್ಕಲ್ ಲಯನ್ಸ್ ಸ್ಪೆಶಲ್ ಸ್ಕೂಲ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಬಾರತೀಯ ಕ್ರೈಸ್ತ ಒಕ್ಕೂಟ ಉಪಾಧ್ಯಕ್ಷ ಎರಿಕ್ ಜೋನ್, ಎಸ್.ಕೆ.ಪಿ.ಎ. ಮೂಲ್ಕಿ ವಲಯದ ಕ್ರೀಡಾ ಕಾರ್ಯದರ್ಶಿ ನವೀನ್‌ಚಂದ್ರ, ಕೋಶಾಧಿಕಾರಿ ನಾಗರಾಜ ಬಪ್ಪನಾಡು ಉಪಸ್ಥಿತರಿದ್ದರು.
ಎಸ್.ಕೆ.ಪಿ.ಎ. ಮೂಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್ ಸ್ವಾಗತಿಸಿ ಕಾರ್ಯದರ್ಶಿ ಕೆಬಿ ಸುರೇಶ್ ವಂದಿಸಿದರು. ಹರೀಶ್ ಹಾಗೂ ಅರುಣ್ ಕಾರ್ಯಕ್ರಮ ನಿರೂಪಿಸಿದರು.

Kinnigoli-01091508

Comments

comments

Comments are closed.

Read previous post:
Kinnigoli-01091504
ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಆರಾಧನಾ ಮಹೋತ್ಸವದ ಅಂಗವಾಗಿ ಸೋಮವಾರ ಧಾರ್ಮಿಕ ಸಭೆ ನಡೆಯಿತು. ಉಳೆಪಾಡಿ ದೇವಳದ ಧರ್ಮದರ್ಶಿ ಮೋಹನ್‌ದಾಸ...

Close