ಕಿನ್ನಿಗೋಳಿ ವಿಶೇಷ ಆಟೋಟ ಸ್ಪರ್ಧೆ-2015

ಕಿನ್ನಿಗೋಳಿ : ಭಿನ್ನ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ವಿಶೇಷವಾದ ಇನ್ನೇನೋ ಸಾಮರ್ಥ್ಯ ಇರುತ್ತದೆ. ಅದು ಸಂಗೀತ, ಚಿತ್ರಕಲೆ, ವಿಶೇಷ ಜ್ಞಾನಶಕ್ತಿ ಇರಬಹುದು ಅದನ್ನು ಗುರುತಿಸುವಲ್ಲಿ ಪೋಷಕರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದರಲ್ಲಿ ಆ ಮಕ್ಕಳ ಭವಿಷ್ಯ ಅಡಗಿರುತ್ತದೆ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೇರೋ ಹೇಳಿದರು.
ಸೌತ್ ಕೆನರಾ ಫೊಟೋಗ್ರಾಫರ‍್ಸ್ ಅಸೋಸಿಯೇಶನ್(ರಿ),ದ.ಕ-ಉಡುಪಿ ಜಿಲ್ಲೆಯ ರಜತ ಸಂಭ್ರಮದ ಪ್ರಯುಕ್ತ ಮೂಲ್ಕಿ ವಲಯ ವತಿಯಿಂದ ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ಭಿನ್ನ ಸಾಮರ್ಥ್ಯ ವಿದ್ಯಾರ್ಥಿಗಳಿಗಾಗಿ ಮಂಗಳವಾರ ನಡೆದ ವಿಶೇಷ ಆಟೋಟ ಸ್ಪರ್ದೆ-2015 ಉದ್ಘಾಟಿಸಿ ಮಾತನಾಡಿದರು.
ಸೌತ್ ಕೆನರಾ ಫೊಟೋಗ್ರಾಫರ‍್ಸ್ ಅಸೋಸಿಯೇಶನ್(ರಿ),ದ.ಕ-ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ಕೆ ವಾಸುದೇವ ರಾವ್ ಆಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ಅಶೋಕ್ ರಾಯನ್ ಕ್ರಾಸ್ತ, ಎಸ್.ಕೆ.ಪಿ.ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು,
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆಸರೋಜಿನಿ ಸುಧಾಕರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕೊಂಡೆಮೂಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ವಿ., ಸುರತ್ಕಲ್ ವಿಶೇಷ ಮಕ್ಕಳ ಶಾಲಾ ಮುಖ್ಯ ಶಿಕ್ಷಕಿ ಮೀರಾ ಸತೀಶ್, ಕಿನ್ನಿಗೋಳಿ ವಿಶೇಷ ಮಕ್ಕಳ ಶಾಲಾ ಶಿಕ್ಷಕಿ ರೇಶ್ಮಾ ಮಾರ್ಟಿಸ್, ಕೊಂಡೆಮೂಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.
ಎಸ್.ಕೆ.ಪಿ.ಎ. ಮೂಲ್ಕಿ ವಲಯದ ಕ್ರೀಡಾ ಕಾರ‍್ಯದರ್ಶಿ ನವೀನ್‌ಚಂದ್ರ ಉಪಸ್ಥಿತರಿದ್ದರು.
ಎಸ್.ಕೆ.ಪಿ.ಎ. ಮೂಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್ ಸ್ವಾಗತಿಸಿ ಕಾರ್ಯದರ್ಶಿ ಕೆಬಿ ಸುರೇಶ್ ವಂದಿಸಿದರು. ಪ್ರಮೋಟರ್ ಲೈನಲ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Kinnigoli-01091502

Comments

comments

Comments are closed.

Read previous post:
Kinnigoli-01091501
ಮಿತ್ತಬೈಲ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಕಟೀಲು ಪೆಟ್ರೋಲ್ ಪಂಪಿನ ಬಳಿಯಿಂದ ಮಿತ್ತಬೈಲ್‌ವರೆಗಿನ ರಸ್ತೆಯನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅನುದಾನದ ೫ಲಕ್ಷ ಹಾಗೂ ಕಟೀಲು ಜಿ.ಪಂ ಸದಸ್ಯ ಈಶ್ವರ್ ಕಟೀಲ್...

Close