ಕಟೀಲಿನಲ್ಲಿ ವಸ್ತುಸಂಗ್ರಹಾಲಯದ ಚಿಂತನೆ

ಕಟೀಲು : 20ನೇ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಿಂದ ಕಟೀಲು ಕ್ಷೇತ್ರವನ್ನು ಸಾಹಿತ್ಯಿಕವಾಗಿ ಮುನ್ನಡೆಸಲು ಪ್ರೇರಣೆ ಸಿಕ್ಕಿರುವುದರಿಂದ ಸಾಹಿತ್ಯ, ಜಾನಪದ, ಸಾಂಸ್ಕೃತಿಕ ಕಲೆಗಳ ಚಿತ್ರಣದ ಶಾಶ್ವತ ವಸ್ತು ಸಂಗ್ರಹಾಲಯವನ್ನು ನಿರ್ಮಿಸುವ ಚಿಂತನೆ ನಡೆದಿದೆ ಎಂದು ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಟೀಲಿನಲ್ಲಿ ನಡೆದ 20ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಧನ್ಯತಾ ಸಭೆಯಲ್ಲಿ ಸೋಮವಾರ ಸಮ್ಮೇಳನದ ಅವಲೋಕನ ನಡೆಸಿ ಮಾತನಾಡಿದರು.
ಸಮ್ಮೇಳನದಲ್ಲಿ ವಸ್ತು ಸಂಗ್ರಹಾಲಯದ ಬಗ್ಗೆ ಬಹಳಷ್ಟು ಸಾಹಿತ್ಯ ಪ್ರೇಮಿಗಳು ಶ್ಲಾಘಿಸಿದ್ದು ಅದರಲ್ಲೂ ಉಮೇಶ್ ರಾವ್ ಎಕ್ಕಾರು ಅವರ ಸುಮಾರು 1500 ಸಾವಿರಕೂ ಮಿಕ್ಕಿದ ಸಂಗ್ರಹದ ಪತ್ರಿಕೆ, ಪುಸ್ತಕಗಳು ಹಾಗೂ ದಿ. ಪು ಶ್ರೀನಿವಾಸ ಭಟ್‌ರವರ ಯಕ್ಷಗಾನ ಗ್ರಂಥಗಳನ್ನು ಕಣ್ಣಾರೆ ಕಂಡು ಇದನ್ನು ಶಾಶ್ವತವಾಗಿ ಕಟೀಲಿನಲ್ಲಿ ಸಾರ್ವಜನಿಕ ಸಂಗ್ರಹಾಲಯದ ಮೂಲಕ ಸುರಕ್ಷಿತವಾಗಿ ಇರಿಸುವ ಸದುದ್ದೇಶಕ್ಕೆ ಚಾಲನೆ ಸಿಕ್ಕಿದೆ ಎಂದರು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ ಕಟೀಲು ಧಾರ್ಮಿಕತೆ, ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು ಇದೀಗ ಸಾಹಿತ್ಯದಿಂದಲೂ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇಂತಹ ವಸ್ತು ಸಂಗ್ರಹಾಲಯಕ್ಕೆ ಕಳೆದ ಎರಡು ವರ್ಷದಿಂದ ಚಿಂತನೆ ನಡೆಸಲಾಗಿದ್ದು ನೂರಾರು ವರ್ಷದ ಮಾಧ್ಯಮದ ದಾಖಲೆಗಳ ಸಂಗ್ರಹದ ಜೊತೆಗೆ ಯಕ್ಷಗಾನ ಹಾಗೂ ಜಾನಪದ ವಸ್ತುಗಳಿಗೆ ಈ ಸಂಗ್ರಹಾಲಯ ಆಶ್ರಯ ನೀಡಲಿದೆ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನದ ಬಗ್ಗೆ ಕೊಡೆತ್ತೂರು ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಸಾಯಿನಾಥ ಶೆಟ್ಟಿ, ತಿಮ್ಮಪ್ಪ ಕೋಟ್ಯಾನ್, ದೊಡ್ಡಯ್ಯ ಮೂಲ್ಯ, ಜನಾರ್ದನ ಕಿಲೆಂಜೂರು, ಶಶಿ ಗಿಡಿಗೆರೆ, ದೇವಿಪ್ರಸಾದ್ ಶೆಟ್ಟಿ, ಸತೀಶ್ ಶೆಟ್ಟಿ, ಮಿಥುನ ಕೊಡೆತ್ತೂರು, ರಘುನಾಥ ಕಾಮತ್ ಕೆಂಚನಕೆರೆ, ನರೇಂದ್ರ ಕೆರೆಕಾಡು, ಸುರೇಶ್ ಶೆಟ್ಟಿ ಎಕ್ಕಾರು ಇನ್ನಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Comments

comments

Comments are closed.

Read previous post:
ಸೆ. 6: ಕಟೀಲು ಮೊಸರುಕುಡಿಕೆ ಸ್ಪರ್ಧೆಗಳು

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆಪ್ಟೆಂಬರ್ 6 ಭಾನುವಾರ ವೈಭವದ ಮೊಸರುಕುಡಿಕೆ ನಡೆಯಲಿದೆ. ಅಂದು ಮಧ್ಯಾಹ್ನ ರಥಬೀದಿಯಲ್ಲಿ ಸಾರ್ವಜನಿಕರಿಗೆ ಮಾನವ ಗೋಪುರ (ಪಿರಮಿಡ್)...

Close