ಅಧ್ಯಕ್ಷರಾಗಿ ಜಯಾನಂದ ಸುವರ್ಣ ಆಯ್ಕೆ

ಮೂಲ್ಕಿ: ದ.ಕ. ಜಿಲ್ಲೆ ಪದವಿಪೂರ್ವ ಕಾಲೇಜು ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆಯ 2015-16 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಬಲ್ಮಠ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಅಧ್ಯಕ್ಷರಾಗಿ ಹಳೆಯಂಗಡಿಯ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜು, ಹಿರಿಯ ಉಪನ್ಯಾಸಕರಾದ ಜಯಾನಂದ ಸುವರ್ಣ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಎಸ್.ಡಿ.ಎಂ. ಪದವಿಪೂರ್ವ ಕಾಲೇಜು, ಉಜಿರೆಯ ರಾಜೇಶ್, ಕೋಶಾಧಿಕಾರಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ,ಬಲ್ಮಠದ ಮಮತಾ, ಜೊತೆ ಕಾರ್ಯದರ್ಶಿಯಾಗಿ ಸೈಂಟ್ ಆಗ್ನೆಸ್ ಪ.ಪೂ.ಕಾಲೇಜು ಮಂಗಳೂರಿನ ನಮಿತಾ, ಮತ್ತು ಪನಾ ಪ.ಪೂ.ಕಾಲೇಜು ಮಂಗಳೂರಿನ ಅರ್ಜುನ್, ಇವರು ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಶ್ರೀಧರ್ ,ಸರಕಾರಿ ಪ.ಪೂ.ಕಾಲೇಜು ವಾಮದಪದವು ಮತ್ತು ಸುರೇಶ್ ಎನ್. ಕೆ., ಸರಕಾರಿ ಪ.ಪೂ.ಕಾಲೇಜು ಕಾರ್ ಸ್ಟ್ರೀಟ್-ಇವರು ಆಯ್ಕೆಯಾದರು.
ಬಲ್ಮಠ ಸರಕಾರಿ ಪದವಿಪೂರ್ವ ಕಾಲೇಜಿ ಪ್ರಾಚಾರ್ಯರಾದ ಜೋಸೆಫ್ ಸಂಘಟನೆಯ ಮಹತ್ವವನ್ನು ವಿವರಿಸಿ ಶುಭ ಹಾರೈಸಿದರು.

Bhagyavan Sanil

Mulki-03091501

Comments

comments

Comments are closed.

Read previous post:
ಸೆ.5. ಕಿನ್ನಿಗೋಳಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ನೇತೃತ್ವದಲ್ಲಿ ಯುಗಪುರುಷ ಕಿನ್ನಿಗೋಳಿ, ರೋಟರಿ ಕ್ಲಬ್, ಯಕ್ಷಲಹರಿ ಕಿನ್ನಿಗೋಳಿ, ಸೌತ್ ಕೆನರಾ ಫೋಟೊಗ್ರಾಫರ‍್ಸ್ ಅಸೋಸಿಯೇಶನ್ (ರಿ.) ಮೂಲ್ಕಿ ವಲಯ, ವಿಶ್ವ ಬ್ರಾಹ್ಮಣ...

Close