ಕಿಲ್ಪಾಡಿ ಗ್ರಾಮ ಪಂಚಾಯತ್ ಪ್ರಥಮ ಗ್ರಾಮ ಸಭೆ

ಮೂಲ್ಕಿ: ರಸ್ತೆಗಳ ಅವ್ಯವಸ್ಥೆ,ಸಾರ್ವಜನಿಕ ರಸ್ತೆಯಲ್ಲಿ ನೀರು ಬಿಡುತ್ತಿರುವ ಬಗ್ಗೆ,ಪಾದೂರು ಪೈಪ್ ಲೈನ್ ಹಾದು ಹೋಗುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಗೇರುಕಟ್ಟೆಯ ಮುಂಡಾಳ ಶಿವ ಸಮಾಜ ಸಭಾ ಭವನದಲ್ಲಿ ಜರಗಿದ ಕಿಲ್ಪಾಡಿ ಗ್ರಾಮ ಪಂಚಾಯತ್ ನ ಪ್ರಥಮ ಗ್ರಾಮ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮೂಲ್ಕಿಯ ರೈಲ್ವೆ ನಿಲ್ದಾನ ರಸ್ತೆಯು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ವಾಹನ ಸಂಚರಿಸಲು ಅಸಾಧ್ಯವಾಗಿದ್ದು ಕೂಡಲೇ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.ಈ ಬಗ್ಗೆ ಜಿಲ್ಲಾ ಪಂಚಾಯತ್ ಗಮನಕ್ಕೆ ತಂದಿದ್ದು ಕೂಡಲೇ ವ್ಯವಸ್ತೆ ಮಾಡುವುದಾಗಿ ಅಧಿಕಾರಿಯವರು ತಿಳಿಸಿದರು.ಮೂಲ್ಕಿ ಸಮೀಪದ ವೀರ ಭದ್ರ ದೇವಸ್ಥಾನದ ಬಳಿ ಸಾರ್ವಜನಿಕ ರಸ್ತೆಯಲ್ಲಿ ತ್ಯಾಜ್ಯ ನೀರನ್ನು ಬಿಡುತ್ತಿದ್ದು ಕಾಲು ದಾರಿ ರಸ್ತೆಯು ಸಂಪೂರ್ಣ ಹಾಳಾಗಿದ್ದು ನಡೆದುಕೊಂಡು ಹೋಗಲು ಅಸಾಧ್ಯವಾಗಿದ್ದು ಈ ಬಗ್ಗೆ ದೂರು ನೀಡಿ 2 ವರ್ಷವಾದರೂ ಇನ್ನು ಕ್ರಮ ತೆಗೆದುಕೊಂಡಿಲ್ಲವೆಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅದ್ಯಕ್ಷರು ತಿಳಿಸಿದರು. ರಾಜೀವ ಗಾಂಧಿ ವಿದ್ಯುದ್ಧೀಕರಣ ಯೋಜನೆಯಲ್ಲಿ ಸುಮಾರು 11 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮನೆಯ ವಯರಿಂಗ್ ಮಾಡಿ ಬಲ್ಬ್ ಗಳನ್ನು ಆಳವಡಿಸಿದ್ದು ಆದರೆ ಎರಡು ವರ್ಷವಾದರೂ ಇನ್ನು ವಿದ್ಯುತ್ ಸಂಪರ್ಕ ನೀಡಿಲ್ಲವೆಂದು ಕಿಲ್ಪಾಡಿ ಗ್ರಾಮಸ್ಥರು ತರಾಟೆಗೆ ತೆಗೆದೊಕೊಂಡರು.ಇದು ಸರ್ಕಾರದ ಯೋಜನೆಯಾಗಿದ್ದು ಈ ಬಗ್ಗೆ ಗುತ್ತಿಗೆದಾರರಿಗೆ ಕಾಮಾಗಾರಿ ನೀಡಿದ್ದು ಗುತ್ತಿಗೆದಾರರು ಸಂಪೂರ್ಣಗೊಳಿಸದಿರುವುದರಿಂದ ಸಮಸ್ಯೆಯಾಗಿದ್ದು ಹಾಗೂ ವಿದ್ಯುತ್ ಕಂಬದಿಂದ ಸಂಪರ್ಕ ಕಲ್ಪಿಸುವಲ್ಲಿ ಬೇರೆ ಜಾಗದವರ ಆಕ್ಷೇಪವು ಕೂಡ ಇದ್ದು ಈ ಬಗ್ಗೆ ಪರಿಶೀಲಿಸುವುದಾಗಿ ಮೆಸ್ಕಾಂ ಅಧಿಕಾರಿ ಮಂಜುನಾಥ್ ತಿಳಿಸಿದರು.ಲೋಡ್ ಶೆಡ್ಡಿಂಗ್ ನಿಂದಾಗಿ ಪ್ರತಿದಿನ ಬೆಳಿಗ್ಗೆ 1 ಗಂಟೆ ಹಾಗೂ ಸಂಜೆ 1 ಗಂಟೆ ವಿದ್ಯುತ್ ಕಡಿತವಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಅಧಿಕಾರಿ ತಿಳಿಸಿದರು.ಮೂಲ್ಕಿಯ ಕೋಡ್ಡಬ್ಬು ದೈವಸ್ಥಾನದ ಬಳಿಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುಧೆ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ದೂರಿದರು.ಮುಂದಿನ ಆನುದಾನದಲ್ಲಿ ಮೀಸಲಿರಿಸಿದ್ದು ಕಾಂಕ್ರೀಟಿಕರಣಗೊಳಿಸುವುದಾಗಿ ನೋಡಲ್ ಅಧಿಕಾರಿ ತಿಳಿಸಿದರು.ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೆಂಚನಕೆರೆ ಪ್ರದೇಶದಲ್ಲಿ ಪಾದೂರು ಪೈಪು ಲೈನ್ ಹಾದು ಹೋಗಲಿರುವುದರಿಂದ ಕೃಷಿಯನ್ನು ಅವಲಂಬಿಸಿರುವವರಿಗೆ ತೊಂದರೆಯಾಗುತ್ತಿದ್ದು ಇಲ್ಲಿಂದ ಹಾದು ಹೋಗುವುದು ಬೇಡವೆಂದು ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದರು.ಈ ಬಗ್ಗೆ ಸಂಬಂಧ ಪಟಟ ಇಲಾಖೆಯ ಗಮನಕ್ಕೆ ತರುವುದಾಗಿ ಅಧಿಕಾರಿ ತಿಳಿಸಿದರು.
ಪಂಚಾಯತ್ ವ್ಯಾಪ್ತಿಯಲ್ಲಿ 18ರಿಂದ 35 ವರ್ಷದೊಳಗಿನ ಕನಿಷ್ಠ 10 ನೇ ತರಗತಿ ತೇರ್ಗಡೆ ಹೊಂದಿದವರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಯವರ ಯೋಜನೆಯಲ್ಲಿ ವಿವಿಧ ವೃತ್ತಿಯಲ್ಲಿ ಮೂರು ತಿಂಗಳ ವೃತ್ತಿ ಪರ ತರಬೇತಿ ಶಿಬಿರವನ್ನು ಆಯೋಜಿಸಿದ್ದು ಆಸಕ್ತರು ಇದರ ಸದುಪಯೋಗ ಪಡೆಯುವಂತೆ ಹಾಗೂ ಯೋಜನೆಗೆ ಫಲಾನುಭವಿಗಳಿಗೆ ಆಧಾರ್ ಕಾಡ್ ಕಡ್ಡಾಯವೆಂದು ಆಧಾರ್ ಕಾಡ್ ಇಲ್ಲದವರು ಆಧಾರ್ ಕಾಡ್ ಗೆ ಅರ್ಜಿ ಹಾಕಿದಲ್ಲಿ ಅದರ ಪ್ರತಿಯನ್ನು ದಾಖಲಿಸುವಂತೆ ಅಧಿಕಾರಿ ತಿಳಿಸಿದರು..ಸರ್ಕಾರದಿಂದ ಪಶು ಭಾಗ್ಯ ಯೋಜನೆಯನ್ನು ಹಮ್ಮಿಕೊಂಡಿದ್ದು ಅರ್ಹರು ಇದರ ಪ್ರಯೋಜನವನ್ನು ಪಡೆಯುವಂತೆ ಪಶು ವೈದ್ಯ ಡಾ ಪ್ರಸನ್ನ ತಿಳಿಸಿದರು.ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮೇ ತಿಂಗಳಿನಿಂದ ಜುಲೈವರೆಗೆ ಕೇವಲ 5 ಡೆಂಗ್ಯೂ ಪ್ರಕರಣ ದಾಖಲಾಗಿದ್ದು ಆಗಸ್ತ್ ನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಭಾಸ್ಕರ್ ಕೋಟ್ಯಾನ್ ತಿಳಿಸಿದರು.
ಅಧ್ಯಕ್ಷತೆಯನ್ನು ಕಿಲ್ಪಾಡಿ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ರಾವ್ ವಹಿಸಿದ್ದು ಕೃಷಿ ಅಧಿಕಾರಿ ಬಾಲಕೃಷ್ಣ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ಇಂಜಿನಿಯರ್ ಪ್ರಶಾಂತ್ ಆಳ್ವ,ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ಸುವರ್ಣ,ತಾಲೂಕು ಪಂಚಾಯತ್ ಸದಸ್ಯೆ ವನಿತಾ ಅಮೀನ್,ಗ್ರಾಮ ಲೆಕ್ಕಿಗ ವೆಂಕಟೇಶ್ ಪೈ,ಪಂಚಾಯತ್ ಪಿಡಿಓ ಶೋಭಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Mulki-03091502

Comments

comments

Comments are closed.

Read previous post:
Mulki-03091503
ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾಟ

ಮೂಲ್ಕಿ: ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮೂಲ್ಕಿ ಸಮೀಪದ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ದ ಫ್ರೌಢ ಶಾಲೆಯ ಸಹಯೋಗದೊಂದಿಗೆ ಶಾಲೆಯಲ್ಲಿ ಜರಗಿದ ಮೂಲ್ಕಿ...

Close