ಸಮಾಜ ಸೇವೆಯಿಂದ ಆತ್ಮ ಸಂತೋಷ

ಕಿನ್ನಿಗೋಳಿ : ಸಮಾಜದ ಬಗ್ಗೆ ಕಳಕಳಿ ಹಾಗೂ ಸೇವೆ ಮನೋಭಾವನೆಯಿಂದ ಆತ್ಮಸಂತೋಷ ಸಿಗುತ್ತದೆ. ಎಂದು ಲಯನ್ಸ್ ಕ್ಲಬ್ ಉಪ ಗವರ್ನರ್ ಅರುಣ್ ಶೆಟ್ಟಿ ಹೇಳಿದರು.
ಇತ್ತಿಚೆಗೆ ಕಿನ್ನಿಗೋಳಿ ಸ್ವಾಗತ್ ಸಭಾಂಗಣದಲ್ಲಿ ನಡೆದ ಕಿನ್ನಿಗೋಳಿ ಲಯನ್ಸ್ ಕ್ಲಬ್ 2015-16ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ನೂತನ ಲಯನ್ಸ್ ಅಧ್ಯಕ್ಷರಾಗಿ ಸುಧಾಕರ್ ಶೆಟ್ಟಿ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಮತ್ತು ತಂಡದವರು ಅಧಿಕಾರ ಸ್ವೀಕರಿಸಿದರು.
ಪರಿಸರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿಕಟಪೂರ್ವ ಪ್ರ್ರಾಂತೀಯ ಅಧ್ಯಕ್ಷ ಮೆಲ್ವಿನ್ ಡಿಸೋಜ, ವಲಯಾಧ್ಯಕ್ಷರುಗಳಾದ ಗೋಪಾಲ್ ಶೆಟ್ಟಿ ಹಾಗೂ ಒಸ್ವಾಲ್ಡ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪ್ರಾಂತ್ಯಾಧ್ಯಕ್ಷ ಯಾದವ ದೇವಾಡಿಗ, ಕಿನ್ನಿಗೋಳಿ ಲಯನ್ಸ್ ನಿಕಟಪೂರ್ವಅಧ್ಯಕ್ಷ ಬರ್ಟನ್ ಸಿಕ್ವೇರಾ, ವೈ ಸಾಲ್ಯಾನ್, ಶಾಂಭವಿ ಶೆಟ್ಟಿ, ಉದಯ ಅಮಿನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.
ಲಾರೆನ್ಸ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-05091506

Comments

comments

Comments are closed.

Read previous post:
Mulki-03091502
ಕಿಲ್ಪಾಡಿ ಗ್ರಾಮ ಪಂಚಾಯತ್ ಪ್ರಥಮ ಗ್ರಾಮ ಸಭೆ

ಮೂಲ್ಕಿ: ರಸ್ತೆಗಳ ಅವ್ಯವಸ್ಥೆ,ಸಾರ್ವಜನಿಕ ರಸ್ತೆಯಲ್ಲಿ ನೀರು ಬಿಡುತ್ತಿರುವ ಬಗ್ಗೆ,ಪಾದೂರು ಪೈಪ್ ಲೈನ್ ಹಾದು ಹೋಗುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಗೇರುಕಟ್ಟೆಯ ಮುಂಡಾಳ ಶಿವ ಸಮಾಜ ಸಭಾ...

Close