ರೈತ ಸಂಪರ್ಕ ಕೇಂದ್ರ ಕಿನ್ನಿಗೋಳಿ ಪರಿಸರದಲ್ಲಾಗಲಿ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನಿರೆ, ಹಾಗೂ ಬಳ್ಕುಂಜೆ ಗ್ರಾಮಗಳ 2015-16ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಬಳ್ಕುಂಜೆ ಗ್ರಾಮ ಪಂಚಾಯಿತಿ ವಠಾರದಲ್ಲಿ ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಮುಲ್ಕಿ ಹೋಬಳಿಯ ಎಲ್ಲಾ ರೈತರಿಗೆ ಮುಲ್ಕಿಯ ರೈತ ಸಂಪರ್ಕ ಕೇಂದ್ರಕ್ಕಿಂತ ಕಿನ್ನಿಗೋಳಿ ಪರಿಸರದಲ್ಲಿ ಕೇಂದ್ರ ಸ್ಥಾಪನೆಯಾದಲ್ಲಿ ಸಹಕಾರಿಯಾಗಲಿದೆ. ಕೃಷಿ ಪರಿಕರ ಸಾಮಾಗ್ರಿ ಸಲಕರಣೆಗಳನ್ನು ತಮ್ಮ ತಮ್ಮ ಮನೆಗಳಿಗೂ ಸಾಗಿಸಲು ಸುಲಭ ಸಾಧ್ಯವಾಗಲಿದೆ ಎಂದು ಬಳ್ಕುಂಜೆ ಗ್ರಾಮಸ್ಥರು ಪಂಚಾಯಿತಿ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ನೀಡಿ ಕೇಂದ್ರವನ್ನು ಸ್ಥಳಾಂತರ ಮಾಡಬೇಕು ಎಂದು ಭಿನ್ನವಿಸಿಕೊಂಡರು.
ಪಡಿತರ ಚೀಟಿಗಳಲ್ಲಿ ಗೊಂದಲವಿದೆ. ಕೆಲವು ಪಡಿತರ ಚೀಟಿಗಳು ರದ್ದಾಗುತ್ತಿವೆ ಇನ್ನು ಕೆಲವರಿಗೆ ಪಡಿತರ ಚೀಟಿಯೇ ಸಿಕ್ಕಿಲ್ಲ ಎಂಬ ಗ್ರ್ರಾಮಸ್ಥರ ಅಳಲಿಗೆ ಉತ್ತರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಆಗಸ್ಟ್ ತಿಂಗಳಲ್ಲಿ ಬಳ್ಕುಂಜೆಯ ಪ್ರತಿ ಗ್ರಾಮಗಳಲ್ಲಿ ಪಡಿತರ ಚೀಟಿಯ ನ್ಯೂನತೆ ಅಹವಾಲುಗಳನ್ನು ಸ್ವೀಕರಿಸಿ ಕಾನೂನು ಪ್ರಕಾರ ತಾಲೂಕು ಕೇಂದ್ರಗಳಲ್ಲಿ ಸರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಂಠಿತ, ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ, ಕವತ್ತಾರು ನೀರಿನ ಸಮಸ್ಯೆ, ಮುಗೇರಬೈಲು ರಸ್ತೆ ದುರಸ್ಥಿ, ಚರಂಡಿ ದುರಸ್ಥಿ, ದಾರಿದೀಪ ಸಮಸ್ಯೆಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಿತು.
ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖಾ ಯೋಜನಾಧಿಕಾರಿ ಶ್ಯಾಮಲ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯ ನೆಲ್ಸನ್ ಲೋಬೋ, ಗ್ರಾ. ಪಂ. ಉಪಾಧ್ಯಕ್ಷೆ ಸುಮಿತ್ರಾ ಎಸ್. ಕೋಟ್ಯಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಲಜ ಟಿ, ಕಾರ್ಯದರ್ಶಿ ನಾರಾಯಣ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Mulki-0409201502

Comments

comments

Comments are closed.

Read previous post:
Mulki-0409201501
ನಾರಾಯಣ ಗುರು 161 ನೇ ಜನ್ಮ ದಿನಾಚರಣೆ

ಮೂಲ್ಕಿ: ಹಿಂದೂ ಸಮಾಜ ಇಂದು ಉಳಿದಿದ್ದರೆ ಅದಕ್ಕೆ ಮೂಲ ಕಾರಣ ಬ್ರಹ್ಮ ಶ್ರೀ ನಾರಾಯಣ ಗುರುಗಳಾಗಿದ್ದು 19ನೇ ಶತಮಾನದಲ್ಲಿ ಅಶ್ಪ್ರಶ್ಯತೆ ವಿರುದ್ದ ಹೋರಾಡಿ ಜಾತಿ ಬೇಧ ಮರೆತು ಎಲ್ಲರೂ...

Close