ಕಿನ್ನಿಗೋಳಿ ರೋಟರ‍್ಯಾಕ್ಟ್‌ನಿಂದ ಮನೆ ಹಸ್ತಾಂತರ

ಕಿನ್ನಿಗೋಳಿ : ಸಮಾಜದ ಹಿಂದುಳಿದ ಜನರಿಗೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಹಾಯ ಹಸ್ತ ನೀಡಿ ಸಮಾಜದ ಮೂಂಚೂಣಿಗೆ ತಂದಲ್ಲಿ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ರೋಟರಿ ಜಿಲ್ಲೆ 3180ರ ಜಿಲ್ಲಾ ರೋಟರ‍್ಯಾಕ್ಟ್ ಪ್ರತಿನಿಧಿ ಮಹದೇವ ಸ್ವಾಮಿ ಹೇಳಿದರು.
ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕೆಮ್ಮಡೆ ಲೀಲಾ ಅವರಿಗೆ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ಮಾಜಿ ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಕಿನ್ನಿಗೋಳಿ ರೋಟರಿ ಮಾಜಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ರೋಟರ‍್ಯಾಕ್ಟ್ ಜಿಲ್ಲಾ ಪತ್ರಿಕೆ ಸಂಪಾದಕ ಚಂದ್ರ ಪೂಜಾರಿ, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಸಲ್ದಾನಾ, ಕಾರ್ಯದರ್ಶಿ ವಿಜೇತ್ ಸಿಕ್ವೇರಾ, ಜಿಲ್ಲಾ ಸಮ್ಮೇಳನ ಸಭಾಪತಿ ಜಿ. ಶರೀಫ್, ಜಿಲ್ಲಾ ದಂಡಪಾಣಿ ಕೃಷ್ಣ ಕುಮಾರ್, ಗ್ಲಾಡ್ಸನ್ ಕುಂದರ್, ಅಬ್ದುಲ್ ರೆಹಮಾನ್, ಪುರುಷೋತ್ತಮ್, ಧನರಾಜ್, ಪ್ರಣೀತ್, ಶಶಿಕಲಾ, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

Kinnigoli-05091503

Comments

comments

Comments are closed.

Read previous post:
Kinnigoli-05091506
ಸಮಾಜ ಸೇವೆಯಿಂದ ಆತ್ಮ ಸಂತೋಷ

ಕಿನ್ನಿಗೋಳಿ : ಸಮಾಜದ ಬಗ್ಗೆ ಕಳಕಳಿ ಹಾಗೂ ಸೇವೆ ಮನೋಭಾವನೆಯಿಂದ ಆತ್ಮಸಂತೋಷ ಸಿಗುತ್ತದೆ. ಎಂದು ಲಯನ್ಸ್ ಕ್ಲಬ್ ಉಪ ಗವರ್ನರ್ ಅರುಣ್ ಶೆಟ್ಟಿ ಹೇಳಿದರು. ಇತ್ತಿಚೆಗೆ ಕಿನ್ನಿಗೋಳಿ ಸ್ವಾಗತ್...

Close