ನಾರಾಯಣ ಗುರು 161 ನೇ ಜನ್ಮ ದಿನಾಚರಣೆ

ಮೂಲ್ಕಿ: ಹಿಂದೂ ಸಮಾಜ ಇಂದು ಉಳಿದಿದ್ದರೆ ಅದಕ್ಕೆ ಮೂಲ ಕಾರಣ ಬ್ರಹ್ಮ ಶ್ರೀ ನಾರಾಯಣ ಗುರುಗಳಾಗಿದ್ದು 19ನೇ ಶತಮಾನದಲ್ಲಿ ಅಶ್ಪ್ರಶ್ಯತೆ ವಿರುದ್ದ ಹೋರಾಡಿ ಜಾತಿ ಬೇಧ ಮರೆತು ಎಲ್ಲರೂ ಮನುಷ್ಯರೆಂಬುದನ್ನು ಹಾಗೂ ಒಂದೇ ಜಾತಿ,ಮತ,ದೇವರೆಂಬುದನ್ನು ಜಗತ್ತಿಗೆ ಸಾರಿ ಎಲ್ಲರೂ ಸಮಾನರಾಗಿ ಬದುಕಲು ಅವಕಾಶ ನೀಡಿ ಶಂಕರಾಚಾರ್ಯ,ಮಧ್ವಾಚಾರ್ಯರಿಗಿಂತ ಮೇಲ್ಮಟ್ಟದಲ್ಲಿ ನಿಂತಂತಹ ಅವರ ಸಂದೇಶವನ್ನು ಅನುಷ್ಠಾನಗೊಳಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ 161 ನೇ ಜನ್ಮ ದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿದ ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ವಾಣಿ ಆಳ್ವರವರು ಬ್ರಹ್ಮ ಶ್ರೀ ನಾರಾಯಣ ಗುರುಗಳು ಕೇವಲ ಒಂದೇ ಜಾತಿಗೆ ಸೀಮಿತವಾಗಿರುವುದು ವಿಷಾದನೀಯವಾಗಿದ್ದು ಅವರು ಜಾತ್ಯಾತೀತ ವ್ಯಕ್ತಿಯಾಗಿದ್ದು ಅವರ ಸಂದೇಶವನ್ನು ಅನುಷ್ಠಾನಗೊಳಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಮೂಲ್ಕಿ ಬಿಲ್ಲವ ಸಂಘದ ವ್ಯಾಪ್ತಿಯ ಅತಿಕಾರಿಬೆಟ್ಟು ಪಂಚಾಯತ್ ಅಧ್ಯಕ್ಷೆ ಶಾರದಾ ವಸಂತ್.,ಸದಸ್ಯರಾದ ಮನೋಹರ್ ಕೋಟ್ಯಾನ್,ದಯಾನಂದ ಎಸ್ ಕೋಟ್ಯಾನ್,ಸುಮತಿ ಪದ್ಮನಾಭ,ಕಿಲ್ಪಾಡಿ ಪಂಚಾಯತ್ ಸದಸ್ಯ ಗೋಪಿನಾಥ ಪಡಂಗ,ಹೆಜಮಾಡಿ ಪಂಚಾಯತ್ ಸದಸ್ಯ ವಾಮನ್ ಕೋಟ್ಯಾನ್ ನಡಿಕುದ್ರು,ಬಳ್ಕುಂಜೆ ಪಂಚಾಯತ್ ಉಪಾಧ್ಯಕ್ಷ ಸುಮಿತ್ರಾ ಎಸ್ ಕೋಟ್ಯಾನ್, ಸದಸ್ಯರಾದ ಆನಂದ ಕೋಟ್ಯಾನ್ ಮತ್ತು ಜಯಲಕ್ಷ್ಮೀ ಯವರನ್ನು ಸನ್ಮಾನಿಸಲಾಯಿತು., ಸಂಘದಲ್ಲಿ 20 ವರ್ಷಗಳ ಕಾಲ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸದಾನಂದ ಪೂಜಾರಿ, ಎನ್ ಸಿ,ಸಿ ಅಧಿಕಾರಿಯಾಗಿ ಪ್ರಶಸ್ತಿ ಪಡೆದ ಮೂಲ್ಕಿಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಎನ್ ಸಿ ಸಿ ತರಬೇತುದಾರ ಗಂಗಾಧರ ಪೂಜಾರಿ ಮತ್ತು ಮೂಲ್ಕಿ ಪ್ರೆಸ್ ಕ್ಲಬ್ಬಿನ ಅಧ್ಯಕ್ಷ ನರೇಂಧ್ರ ಕೆರೆಕಾಡುರನ್ನು ಸನ್ಮಾನಿಸಲಾಯಿತು. ಸಂಘದ ವ್ಯಾಪ್ತಿಯ ಪಿ ಯು ಸಿ ಯಿಂದ ಉನ್ನತ ಶಿಕ್ಷಣದವರೆಗಿನ ಸುಮಾರು 225 ವಿದ್ಯಾರ್ಥಿಗಳಿಗೆ 4 ಲಕ್ಷದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಜಯಮ್ಮ,ಮೂಲ್ಕಿ ರೋಟರಿ ಕ್ಲಬ್ಬಿನ ಅಧ್ಯಕ್ಷ ರವಿಚಂದ್ರ, ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಸಂಘದ ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ಸುವರ್ಣ,ಸೇವಾ ದಳದ ಅಧ್ಯಕ್ಷ ಸತೀಶ್ ಅಂಚನ್, ಕೋಶಾಧಿಕಾರಿ ಪ್ರಕಾಶ್ ಸುವರ್ಣ, ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಸಂಚಾಲಕ ಎಚ್ ವಿ ಕೋಟ್ಯಾನ್ ಉಪಸ್ತಿತರಿದ್ದರು.
ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿದರು,ಕಾರ್ಯದರ್ಶಿ ರಮೇಶ್ ಕೊಕ್ಕರ್ ಕಲ್ ವಂದಿಸಿದರು,ನರೇಂದ್ರ ಕೆರೆಕಾಡು, ವಿಜಯ ಕುಮಾರ್ ಕುಬೆವೂರು ಮತ್ತು ಜಯಶ್ರೀ ನಿರೂಪಿಸಿದರು.

Mulki-0409201501

Comments

comments

Comments are closed.

Read previous post:
Kinnigoli-05091505
ಉದಯ ನಾಯ್ಕ ಅಧ್ಯಕ್ಷರಾಗಿ ಆಯ್ಕೆ

ಕಿನ್ನಿಗೋಳಿ : ಮಂಗಳೂರು ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಮಿತಿಯ ಜಿಲ್ಲಾಧ್ಯಕ್ಷರಾದ ಯಾದವ ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಅಧ್ಯಕ್ಷರಾಗಿ ಉದಯ ನಾಯ್ಕ ಆಯ್ಕೆಯಾದರು....

Close