ಕಟೀಲು ನಾರಾಯಣಗುರು ಜಯಂತಿ

ಕಿನ್ನಿಗೋಳಿ : 161ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಅಜಾರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಧೂಮಾವತೀ ದೈವಸ್ಥಾನದ ಬಳಿ ಆಚರಿಸಲಾಯಿತು.
ಈ ಸಂದರ್ಭ ಮೆನ್ನಬೆಟ್ಟು ಹಾಗೂ ಕೊಂಡೇಮೂಲ ಗ್ರಾ. ಪಂ. ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಈಶ್ವರ ಕಟೀಲ್, ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಮಹೇಶ್ ಶಾಂತಿ ಹೆಜಮಾಡಿ, ಕೊಂಡೇಮೂಲ ಗ್ರಾ. ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯ ರಮಾನಂದ ಪೂಜಾರಿ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ, ಸದಸ್ಯರಾದ ವಿಲಿಯಂ ಮೋರ್ಗನ್, ಜನಾರ್ಧನ ಕಿಲೆಂಜೂರು, ತಾ.ಪಂ. ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಶೇಖರ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-05091509

Comments

comments

Comments are closed.

Read previous post:
Kinnigoli-05091508
ಸೀತೆಯ ಆದರ್ಶ ನಮಗೆ ಮಾದರಿ

ಕಿನ್ನಿಗೋಳಿ : ರಾಮಾಯಣದಲ್ಲಿ ಸೀತೆಯ ಆದರ್ಶ ಎಲ್ಲರಿಗೂ ಅನುಕರಣೀಯ. ಪತಿವ್ರತೆಯಾಗಿ, ತಾಯಿಯಾಗಿ, ದೇವತೆಯಾಗಿ ಆಕೆ ಎಲ್ಲ ದೃಷ್ಟಿಯಿಂದಲೂ ಮಾರ್ಗದರ್ಶಕಿ ಎಂದು ಖ್ಯಾತ ಯಕ್ಷಗಾನ ಕಲಾವಿದ ರವಿಶಂಕರ ವಳಕ್ಕುಂಜ ಹೇಳಿದರು,...

Close