ಕೆಮ್ರಾಲ್ – ಮೆನ್ನಬೆಟ್ಟು ಗ್ರಾ. ಪಂ. ಭೇಟಿ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ವಿದ್ಯಾ ಸೋಮವಾರ ಕೆಮ್ರಾಲ್ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಘನ ತ್ಯಾಜ್ಯ ಘಟಕಗಳ ಕಾಮಗಾರಿಯನ್ನು ವೀಕ್ಷಿಸಿದರು. ಕೆಮ್ರಾಲ್ ಗ್ರಾಮ ಪಂಚಾಯತ್‌ನಲ್ಲಿ ಕೆಆರ್‌ಐಡಿಎಲ್ ಯೋಜನೆಯಡಿಯಲ್ಲಿ14.5 ಲಕ್ಷರೂ ವೆಚ್ಚದಲ್ಲಿ ಘಜ ತ್ಯಾಜ್ಯ ಕಾಂಪೊಸ್ಟ್ ಗೊಬ್ಬರ ಘಟಕದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿದ್ಯಾ ತಿಳಿಸಿದರು.

ಪಂಚಾಯತ್ ಅವರಣದಲ್ಲಿರುವ ಹಳೆಯ ಅಂಗನವಾಡಿ ಕಟ್ಟಡದ ಕಿಟಕಿ ರಾಡ್ ಮುರಿದಿದ್ದು ಕಿಡಿಗೇಡಿಗಳು ಇದರ ದುರುಪಯೋಗ ಮಾಡುತ್ತಿದ್ದಾರೆ. ಎಂದು ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ತಿಳಿಸಿದರು.
ನಂತರ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಟ್ಟಡಕ್ಕೆ ಸ್ಥಳಕ್ಕೆ ಬೇಟಿ ನೀಡಿದರು. 11.95 ಲಕ್ಷರೂ ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷದಿಂದ ಸ್ಥಗಿತಕೊಂಡಿದ್ದು ಪಕ್ಕದ ನವಜ್ಯೋತಿ ಮಹಿಳಾ ಮಂಡಲದ ಕಟ್ಟಡದಲ್ಲಿ ಇದೀಗ ಅಂಗನವಾಡಿ ಕಾರ್ಯ ನಿರ್ವಹಿಸುತ್ತದೆ. ಕಾಮಾಗಾರಿಯನ್ನು ಎರಡು ತಿಂಗಳೊಳಿಗೆ ಸಂಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಂತರ ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಪಂಚಾಯಿತಿಗಳ ಜಂಟೀ ಆಶ್ರಯದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನ ಸ್ಮಶಾನದ ಪಕ್ಕದಲ್ಲಿರುವ 15 ಲಕ್ಷರೂ ವೆಚ್ಚದಲ್ಲಿ ನಿರ್ಮಾಣಹಂತದಲ್ಲಿರುವ ಘನ ತ್ಯಾಜ್ಯ ಎರಡನೇ ಘಟಕದ ಕಾಮಗಾರಿ ವೀಕ್ಷಿಸಿ
ಸ್ವಲ್ಪ ಮಟ್ಟಿನ ಬದಲಾವಣೆ ಮಾಡಬೇಕು, ತ್ಯಾಜ್ಯದೊಂದಿಗೆ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಹಸಿಕಸ ಒಣಕಸ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಿಸಿ ನೀಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿ ಕಸ ವಿಲೇವಾರಿ ಮಾಡಿಕೊಳ್ಳಿ ಎಂದು ಪಂಚಾಯಿತಿ ಆಡಳಿತಕ್ಕೆ ತಿಳಿಹೇಳಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಆಡಳಿತ ಮತು ಜನಪ್ರತಿನಿಧಿಗಳು ಈ ಸಂದರ್ಭ ಹಾಜರಿರಲಿಲ್ಲ ಆದರೆ ಘನತ್ಯಾಜ್ಯ ಒಡಂಬಡಿಕೆ ೭೫ ಪ್ರತಿಶತ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ೨೫ ಪ್ರತಿಶತ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹೊಂದಿಕೊಂಡಿವೆ. ಘನತ್ಯಾಜ್ಯ ವಿಲೇವಾರಿ ವಾಹನ ಕೆಲವು ತಿಂಗಳಿನಿಂದ ಕೆಟ್ಟು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿಂತಿದೆ.
ಜಿಲ್ಲಾ ಪಂಚಾಯಿತಿ ಅಧಿಕಾರಿ ಮಂಜುಳಾ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಇಲಾಖಾಧಿಕಾರಿಗಳಾದ ಶೇಷಾದ್ರಿ, ರವಿ ಕುಮಾರ್, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ, ಸದಸ್ಯ ದಾಮೋದರ ಶೆಟ್ಟಿ, ಪಿಡಿಒ ರಮ್ಯಾ, ತಾ. ಪಂ. ಸದಸ್ಯೆ ಬೇಬಿ ಕೋಟ್ಯಾನ್, ಕಾರ್ಯದರ್ಶಿ ಸತೀಶ್, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಅಂಚನ್, ಪಿಡಿಒ ರಮೇಶ್ ರಾಥೋಡ್ ಮತ್ತಿತರರಿದ್ದರು.

ಆಮೆನಡಿಗೆಯ ಕಿನ್ನಿಗೋಳಿ ಬಹು ಗ್ರಾಮ ಕುಡಿಯುವ ನೀರು ಯೋಜನೆ
ಕಿನ್ನಿಗೋಳಿ 17 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರು ಯೋಜನೆ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಇದು ಕಳಪೆ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಅನೇಕ ಬಾರಿ ಚರ್ಚೆಗಳು ನಡೆದಿದೆ ಎಂಬ ಮಾಧ್ಯದವರ ಪ್ರಶ್ನೆಗೆ ಉತ್ತರಿಸಿದ ಕಾರ್ಯನಿರ್ವಹಣಾಧಿಕಾರಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಅನೇಕ ಬಾರಿ ಎಚ್ಚರಿಕೆಯನ್ನು ನೀಡಿದರೂ ಪ್ರಯೋಜನವಾಗಿಲ್ಲ ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಗುತ್ತಿಗೆದಾರರಿಗೆ ನೋಟೀಸು ನೀಡುಲಾಗುತ್ತದೆ ಎರಡು ವಾರದೊಳಗೆ ಜನರಿಗೆ ನೀರನ್ನು ಒದಗಿಸುವ ಕೆಲಸ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.

ಸೇವಾ ಸಂಘ ಸಂಸ್ಥೆಗಳು, ಸ್ರೀಶಕ್ತಿ, ಸ್ವಸಹಾಯ ಗುಂಪುಗಳು ಹಾಗೂ ಶಾಲೆಗಳ ಸಹಯೋಗದಂತೆ ಸ್ವಚ್ಚತೆ ಬಗ್ಗೆ ಅರಿವು ಜಾಗೃತಿ ಅಭಿಯಾನ ಕೈಗೊಳ್ಳಬೇಕು
ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಎರಡೂ ಪಂಚಾಯಿತಿಗಳ ಸಭೆ ನಡೆಸಿ ಘನ ತ್ಯಾಜ್ಯದ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

ಶ್ರೀ ವಿದ್ಯಾ

ದ.ಕ. ಜಿ. ಪಂ.  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ 

Kinnigoli-07091505

Comments

comments

Comments are closed.

Read previous post:
Kinnigoli-07091506
ವಿನ್ಸೆಂಟ್ ರೊಡ್ರಿಗಸ್ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ರಾಜರತ್ನಪುರ ಶ್ರೀ ಬಾಲಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿನ್ಸೆಂಟ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಈಶ್ವರ್ ಕಟೀಲು, ಗೌರವ ಸಲಹೆಗಾರ ಮೋನಪ್ಪ ಗುಜರನ್, ಉಪಾಧ್ಯಕ್ಷ ರವಿರಾಜ ಆಚಾರ್ಯ, ಕಾರ್ಯದರ್ಶಿ...

Close